ಮಹಾಭಾರತದ ಮೌಲ್ಯಗಳು ಬದುಕಿಗೆ ಸದಾ ಮಾರ್ಗದರ್ಶಿ – ಡಿ.ಶಬ್ರಿನಾ ಮಹಮದ್ ಅಲಿ ಅಭಿಮತ.

ಚಳ್ಳಕೆರೆ ಅ.01

ಭಾರತದ ಮಹಾ ಕಾವ್ಯವಾದ ಮಹಾ ಭಾರತವು ಜೀವನ ಮೌಲ್ಯಗಳ ಕಣಜವಾಗಿದ್ದು ಮನುಷ್ಯ ಹೇಗೆ ಬದುಕ ಬೇಕು-ಹೇಗೆ ಬದುಕ ಬಾರದೆಂದು ತಿಳಿಸಿ ಕೊಡುತ್ತದೆ ಎಂದು ಶಿಕ್ಷಕಿ ಹಾಗೂ ಲೇಖಕಿ ಡಿ.ಶಬ್ರಿನಾ ಮಹಮದ್ ಅಲಿ ಅಭಿಪ್ರಾಯ ಪಟ್ಟರು.

ತ್ಯಾಗರಾಜ ನಗರದ ಸದ್ಭಕ್ತರಾದ ಶ್ರೀಮತಿ ನಂಜಮ್ಮ ಕೆಂಚಪ್ಪ ಶಿಕ್ಷಕರ ಸವಿತಾ ನಿವಾಸದಲ್ಲಿ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು “ಮಹಾಭಾರತದ ಮೌಲ್ಯಗಳು” ಎಂಬ ವಿಷಯವಾಗಿ ಮಾತನಾಡುತ್ತಿದ್ದರು.

ಮಹಾಭಾರತವು ಹದಿನೆಂಟು ಪರ್ವಗಳನ್ನು ಒಳ ಗೊಂಡಿದ್ದು ಪ್ರತಿಯೊಂದು ಪರ್ವವು ನಿತ್ಯ ಜೀವನಕ್ಕೆ ಬೇಕಾದ ಮೌಲ್ಯಗಳ ಕುರಿತು ಮಾರ್ಗದರ್ಶನ ನೀಡುತ್ತದೆ.ಇದು ವ್ಯಕ್ತಿಯು ಗರ್ಭಾದಿಂದ ಗೋರಿಯ ವರೆಗೆ ಹೇಗೆ ಬದುಕ ಬೇಕೆಂದು ತಿಳಿಸಿ ಕೊಡುತ್ತದೆ.

ಪಾಂಡವರು, ಕೌರವರು, ಕೃಷ್ಣ, ಕುಂತಿ, ದ್ರೌಪದಿ, ಧೃತರಾಷ್ಟ್ರ, ಗಾಂಧಾರಿ, ಕರ್ಣ, ಉತ್ತರಕುಮಾರ, ಭಾನುಮತಿ, ಶಕುನಿಯ ಪಾತ್ರಗಳು ಪುತ್ರ ವ್ಯಾಮೋಹ, ಮಕ್ಕಳನ್ನು ಹೇಗೆ ಬೆಳೆಸಬೇಕು, ದಾಂಪತ್ಯದಲ್ಲಿ ನಂಬಿಕೆ, ಜೀವನದ ನಶ್ವರತೆ ಸೇರಿದಂತೆ ಅನೇಕ ಜೀವನ ಮೌಲ್ಯಗಳನ್ನು ತಿಳಿಸಿ ಕೊಡುತ್ತದೆ.

ಆದ್ದರಿಂದ ಮಹಾಭಾರತದ ವಿವಿಧ ಪರ್ವಗಳು ತಿಳಿಸುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿ ಕೊಂಡು ಉತ್ತಮ ಬದುಕು ಕಟ್ಟಿ ಕೊಳ್ಳುವಂತೆ ಸಲಹೆ ನೀಡಿದರು.

ಸತ್ಸಂಗದ ಪ್ರಯುಕ್ತ ಸತ್ಸಂಗ ಕೇಂದ್ರದ ಸದ್ಭಕ್ತರಿಂದ ಸಾಮೂಹಿಕ ಶ್ರೀರಾಮರಕ್ಷಾ ಸ್ತೋತ್ರ ಪಠಣ, ಶ್ರೀರಾಮಕೃಷ್ಣರ ನಾಮಸ್ಮರಣೆ, ಗೀತಾ ಪ್ರಕಾಶ್, ತಿಪ್ಪಮ್ಮ ಉಮಾಶಂಕರ್, ನಾಗರತ್ನಮ್ಮ, ಬಿ.ಎಂ ಗೀತಾ ಸುಂದರೇಶ್ ಅವರಿಂದ ವಿಶೇಷ ಭಜನೆ, ಆರತಿ ಮತ್ತು ಪ್ರಸಾದ ವಿನಿಯೋಗ ನಡೆಯಿತು.

ಕಾರ್ಯಕ್ರಮದಲ್ಲಿ ಮಹಮದ್ ಅಲಿ, ವಿಹಾನ್ ಅಲಿ, ಹೆಚ್ ಲಕ್ಷ್ಮೀದೇವಮ್ಮ, ರಂಗಮ್ಮ, ಜ್ಯೋತಿ ಪ್ರಸಾದ್, ವನಜಾಕ್ಷಿ, ವಿಜಯಾಗುರು, ಪುಷ್ಪಲತಾ ವಿಜಯ್, ತನುಜಾ, ದಾಕ್ಷಾಯಣಿ, ಸುಧಾಮಣಿ, ಸೌಮ್ಯ ಪ್ರಸಾದ್, ಜಯಮ್ಮ, ವಿಶಾಲಾಕ್ಷಿ, ಎಂ ಲಕ್ಷ್ಮೀದೇವಮ್ಮ, ಸರಸ್ವತಿ, ರಾಘವೇಂದ್ರ, ಪ್ರೇಮಾ, ಯತೀಶ್ ಎಂ ಸಿದ್ದಾಪುರ, ಸುವರ್ಣ ಉಪಸ್ಥಿತರಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button