ಶಾರದಾಮಾತೆಯವರು ಪ್ರತ್ಯಕ್ಷವಾಗಿ ಕಾಣುವ ಜಗನ್ಮಾತೆ – ಯತೀಶ್ ಎಂ ಸಿದ್ದಾಪುರ ಅವರ ಅಭಿಪ್ರಾಯ.

ಚಳ್ಳಕೆರೆ ಅ.11

ಶ್ರೀಮಾತೆ ಶಾರದಾದೇವಿಯವರು ಶಿಷ್ಯರು ಮತ್ತು ಭಕ್ತರ ಪಾಲಿಗೆ ಪ್ರತ್ಯಕ್ಷವಾಗಿ ಕಾಣುವ ಜಗನ್ಮಾತೆಯಾಗಿದ್ದರು ಎಂದು ಚಳ್ಳಕೆರೆಯ ತ್ಯಾಗರಾಜನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸದಸ್ಯ‌ ಹಾಗೂ ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ತಿಳಿಸಿದರು.

ನಗರದ ವಾಲ್ಮೀಕಿ ನಗರದ ಸದ್ಭಕ್ತರಾದ ಶ್ರೀಮತಿ ವಿಜಯಾಗುರು ಅವರ ದೈವಸಂಕಲ್ಪ ನಿವಾಸದಲ್ಲಿ ತ್ಯಾಗರಾಜ ನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಮಾಡುತ್ತ “ಶ್ರೀಮಾತೆ-ಶ್ರೀರಾಮಕೃಷ್ಣ ರೂಪವೆರಡು ಶಕ್ತಿಯೊಂದು” ಎಂಬ ಅಧ್ಯಾಯವನ್ನು ಓದುತ್ತಾ ಮಾತನಾಡಿದರು.

ಸತ್ಸಂಗದಲ್ಲಿ ವಿಜಯಾಗುರು, ಶಿಶಿರ, ಮಾನ್ಯ, ಮಂಜುಳಾ, ಹೆಚ್ ಲಕ್ಷ್ಮೀದೇವಮ್ಮ, ರಂಗಮ್ಮ, ಎಂ ಗೀತಾ ನಾಗರಾಜ್, ಗೀತಾ ಪ್ರಕಾಶ್, ದಾಕ್ಷಾಯಣಿ, ಪ್ರೇಮಲೀಲಾ, ನಳಿನಿ, ಪುಷ್ಪಲತಾ, ಸರಸ್ವತಮ್ಮ, ಪ್ರಮೋದಾ, ಜಿ.ಶರ್ಮಿಳಾ, ಸೌಮ್ಯ, ಶಿಲ್ಪಾ, ಯಶೋಧಾ, ಗೀತಾ ಸುಂದರೇಶ್, ಶಾರದಮ್ಮ, ಮೀನಾಕ್ಷಮ್ಮ, ಶೋಭಾ, ಅಂಬಿಕಾ, ವಿಶಾಲಾಕ್ಷಿ, ಗಿರಿಜಾಮ್ಮ, ಜಯಮ್ಮ, ಸಿ.ಎಸ್ ಭಾರತಿ, ಪ್ರೇಮಾ, ಪ್ರಮೀಳಾ, ಲತಾ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button