ಅಕ್ಟೋಬರ್ 12 ರಂದು ಮಾತೃಶ್ರೀ – ಪ್ರಸಾದ ನಿಲಯ ಉದ್ಘಾಟನೆ.
ಚಳ್ಳಕೆರೆ ಅ.09



ನಗರದ ಹೊರ ವಲಯದ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಶ್ರೀನರಹರೇಶ್ವರ ದೇವಸ್ಥಾನದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ “ಮಾತೃಶ್ರೀ ಪ್ರಸಾದ ನಿಲಯ”ದ ಉದ್ಘಾಟನಾ ಸಮಾರಂಭವು ಅಕ್ಟೋಬರ್ 12 ರ ಸೋಮವಾರ ಬೆಳಗ್ಗೆ 9 ಗಂಟೆ ಯಿಂದ ಪೂಜ್ಯ ಶಾಂತಾರಾಂ ಸ್ವಾಮಿಗಳು.

ಮಾತೃಶ್ರೀ ವಿಜಯಲಕ್ಷ್ಮೀ, ಶ್ರೀನರಹರಿ ಸೇವಾ ಪ್ರತಿಷ್ಠಾನದ ಅಧ್ಯಕ್ಷರಾದ ಪೂಜ್ಯ ಡಾ, ವೈ ರಾಜಾರಾಮ್ ಗುರುಗಳು ಹಾಗೂ ಅವರ ಸಹೋದರರ ದಿವ್ಯ ಸಾನಿಧ್ಯದಲ್ಲಿ ಗೋ ಪ್ರವೇಶ,ಗೃಹ ಪ್ರವೇಶ, ಹೋಮಗಳು, ಸಭಾ ಕಾರ್ಯಕ್ರಮ, ಅನ್ನಪ್ರಸಾದ ವಿನಿಯೋಗ ನಡೆಯಲಿದ್ದು ಭಕ್ತರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀನರಹರಿ ಸೇವಾ ಪ್ರತಿಷ್ಠಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
