‘ಭಿಕ್ಷಂ’ ಸಿನಿಮಾದ ಪೋಸ್ಟರ್ ಬಿಡುಗಡೆ – ಮಾಡಿದ ಲವ್ಲಿಸ್ಟಾರ್ ಪ್ರೇಮ್.
ರಾಯಚೂರು ಅ.25




ಎಡೆದೊರೆ ಮೂವೀಸ್ ಅರ್ಪಿಸುವ ‘ಭಿಕ್ಷಂ’ ಕನ್ನಡ ಚಲನ ಚಿತ್ರದ ಪೋಸ್ಟರ್ ಬಿಡುಗಡೆಯನ್ನು ಲವ್ಲಿಸ್ಟಾರ್ ಪ್ರೇಮ್ ಬಿಡುಗಡೆ ಮಾಡಿ ಚಿತ್ರ ತಂಡಕ್ಕೆ ಶುಭ ಕೋರಿದರು.
ಪ್ರಸ್ತುತ ದಿನಮಾನದ ಜನರು ಎದುರಿಸುತ್ತಿರುವ ಸಾಮಾಜಿಕ ಸಮಸ್ಯೆಗಳನ್ನು ಗಮನದಲ್ಲಿಟ್ಟು ಕೊಂಡು ರೂಪುತಾಳಿದ ಈ ಚಿತ್ರ, ರಾಯಚೂರು ಜಿಲ್ಲೆಯ ನೆಲ, ಜನ ಜೀವನ ಹಾಗೂ ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡಿದೆ. ರಾಯಚೂರು ಮತ್ತು ಬೆಂಗಳೂರಿನ ಸುಂದರ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ.
ಈ ‘ಭಿಕ್ಷಂ’ ಚಿತ್ರಕ್ಕೆ ಪ್ರೇಕ್ಷಕರು ಪ್ರೋತ್ಸಾಹ ನೀಡಬೇಕು. ಇದೊಂದು ನೈಜ ಘಟನೆಯ ಹಿನ್ನೆಲೆಯನ್ನು ಒಳಗೊಂಡ ಸಿನಿಮಾವಾಗಿದೆ ಎಂದು ನಿರ್ದೇಶಕ ವಂಶಿ ಹೇಳಿದರು.
ತಾರಾಗಣದಲ್ಲಿ ತಿರುಪತಿ ಜೋಷಿ ಶಿರಗುಂಪಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ನಾಯಕನಾಗಿ ಲಕ್ಷ್ಮಣ್ ಗಾರಲದಿನ್ನಿ , ನಾಯಕಿಯರಾಗಿ ಗೀತಾ ಶಿವಮೊಗ್ಗ ಮತ್ತು ಶ್ರೀಗೌರಿಯೂ ಬಣ್ಣ ಹಚ್ಚಿದ್ದಾರೆ.

ಉಳಿದಂತೆ ಪತ್ರಕರ್ತ ಅಣ್ಣಪ್ಪ ಮೇಟಿಗೌಡ, ನಾರಾಯಣ ದೇಸಾಯಿ, ಬಸವರಾಜ ಮಿಮಿಕ್ರಿ, ಸ್ವಾಮಿರಾವ್ ದೇಶಪಾಂಡೆ ಜಾರ್ಜ್, ನಾಗವೇಣಿ, ಪರಿಮಳ ಕುಲಕರ್ಣಿ, ಜ್ಯೋತಿ ಕೆ, ಸುಮಾ ಮಲ್ಕಾಪೂರ್, ವೀರೇಶ ದೇವನಪಲ್ಲಿ, ಗುರುಲಿಂಗಪ್ಪ, ನಾಗರಾಜ ಬಳಗೇರಾ, ಸುದರ್ಶನ ಗಧಾರ, ವೀರೇಶ ಕುಂಬಾರ ಯರಗೇರಾ, ರಘು ಕೊತ್ತದೊಡ್ಡಿ, ನರಸಿಂಹ ಇಡಪನೂರು, ಪ್ರವೀಣ ಬಳಗೇರಾ, ಪ್ರಸಾದ್ ಬಳಗೇರಾ, ಗೋರಪ್ಪ ಇಡಪನೂರು, ಪ್ರೇಮ ಕಟ್ಟಿಮನಿ, ಆಂಜಿನೇಯ ಮಲ್ದಕಲ್, ರಾಮ್ ರಾಜೋಳಿ ಮೊದಲಾದವರಿದ್ದಾರೆ.
ಛಾಯಾಗ್ರಹಣ ಫಣಿ, ಅಭಿನವ್ ಮಂಡ್ಯ, ಮನು ನಿರ್ವಹಿಸಿದ್ದು, ಚಿತ್ರದಲ್ಲಿ ಎರಡು ಹಾಡುಗಳಿದ್ದು, ಸಂಗೀತ ಕಟ್ಟಿ ರಾಗ ಸಂಯೋಜಿಸಿದ್ದಾರೆ. ಸಂಕಲನ ಮುತ್ತುರಾಜು ಟಿ, ಪತ್ರಿಕಾ ಸಂಪರ್ಕ ಡಾ, ಪ್ರಭು ಗಂಜಿಹಾಳ, ಡಾ, ವೀರೇಶ ಹಂಡಿಗಿ ಅವರದಿದೆ.
ಜಾರ್ಜ, ಪ್ರಸಾದ್, ಗೋರಪ್ಪ, ನಾಗರಾಜ, ರಾಮ್, ಪ್ರೇಮ್ ಕಟ್ಟಿಮನೆ, ಜಗನ್ನಾಥ್, ಶ್ರೀಧರ್ ನಿರ್ದೇಶನ ಟೀಮ್‌ನಲ್ಲಿದ್ದು, ಸಹ ನಿರ್ದೇಶನ ಪತ್ರಕರ್ತ ಅಣ್ಣಪ್ಪ ಮೇಟಿಗೌಡ ನಿರ್ವಹಿಸಿದ್ದು,ಸಾಹಿತ್ಯ, ಸಂಭಾಷಣೆ, ಕಥೆ-ಚಿತ್ರಕಥೆ, ನಿರ್ದೇಶನ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನು ವಂಶಿ ಎಡೆದೊರೆ ಹೊತ್ತಿದ್ದಾರೆ. ಇದೇ ಡಿಸೆಂಬರ್‌ದಲ್ಲಿ ರಾಜ್ಯಾದ್ಯಾಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಾಗಿ ವಂಶಿ ಹೇಳಿದ್ದಾರೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಡಾ, ಪ್ರಭು ಗಂಜಿಹಾಳ ಗದಗ
