ಸಿದ್ದನಕೊಳ್ಳ ಮಠಕ್ಕೆ, ಕರ್ನಾಟಕ ಸರ್ಕಾರದ ರಾಜ್ಯೋತ್ಸವ – ಪ್ರಶಸ್ತಿ ನೀಡಲು ಸರ್ವ ಭಕ್ತರಿಂದ ಆಗ್ರಹ.

ಬಾಗಲಕೋಟ ಅ.27

ಜಿಲ್ಲೆಯ ಇಲಕಲ್ಲ ತಾಲೂಕಿನ ಐತಿಹಾಸಿಕ ಸುಕ್ಷೇತ್ರ ಸಿದ್ದನಕೊಳ್ಳ ಕಲಾ ಪೋಷಕರ ಹಾಗೂ ನಿರಂತರ ದಾಸೋಹ ಮಠಕ್ಕೆ ಈ ಬಾರಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕೆಂದು ಸಾರ್ವಜನಿಕರು ಮತ್ತು ಭಕ್ತಾದಿಗಳು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಸಿದ್ದನಕೊಳ್ಳವು ಪ್ರಾಚೀನ ಕಾಲದಿಂದಲೂ ರಾಷ್ಟ್ರಕೂಟರು ಮತ್ತು ಚಾಲುಕ್ಯರ ಕಾಲದ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿದ್ದು, ಅನೇಕ ಸಿದ್ಧ ಪುರುಷರು ತಪಸ್ಸು ಗೈದ ಪವಿತ್ರ ಕ್ಷೇತ್ರವಾಗಿದೆ.

ಪಟ್ಟದಕಲ್ಲು ಮತ್ತು ಐಹೊಳೆಯ ಸಮೀಪದಲ್ಲಿರುವ ಈ ಕ್ಷೇತ್ರವು ಹಿಂದೆ ಅನೇಕ ಸಿದ್ಧ ಪುರುಷರು ಹಾಗೂ ಮಹಾತ್ಮರು ಇಲ್ಲಿ ಬಂದು ತಪಸ್ಸು ಮಾಡಿದ್ದು, ಸಿದ್ದಪ್ಪಜ್ಜ ನೆಲೆಸಿದ ಪುಣ್ಯ ಕ್ಷೇತ್ರವಾಗಿದೆ.

ಶ್ರೀಮಠವು ದಶಕಗಳಿಂದ ಮಾಡುತ್ತಾ ಬಂದಿರುವ ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸೇವೆಗಳನ್ನು ಗುರುತಿಸಿ ಈ ಗೌರವ ನೀಡಬೇಕು ಎಂಬುದು ಇದೀಗ ಸಿದ್ದನಕೊಳ್ಳ, ಬೆನಕವಾರಿ, ಸುತ್ತಮುತ್ತಲಿನ ಗ್ರಾಮದ ಭಕ್ತ ವಲಯದಲ್ಲಿ ಹಾಗೂ ಸಾರ್ವಜನಿಕರಲ್ಲಿ ಮಹತ್ವದ ಚರ್ಚೆಯಾಗಿ ಮೂಡಿ ಬಂದಿದೆ.

ಪ್ರತಿ ವರ್ಷ ಜನೇವರಿ 14 ರಿಂದ ಮೂರು ದಿನಗಳ ಕಾಲ ನಡೆವ ಜಾತ್ರಾ ಮಹೋತ್ಸವಂತೂ ಭಕ್ತರ ಪಾಲಿಗೆ ಮರೆಯಲಾರದ್ದು. ಸಾಧಕರಿಗೆ ಶ್ರೀಸಿದ್ದ ಶ್ರೀ ಪ್ರಶಸ್ತಿ ನೀಡಿ, ಪ್ರತಿಭಾನ್ವಿತರಿಗೆ ವೇದಿಕೆ ನೀಡಿ ಸಹಸ್ರಾರು ಜನಗಳ ಸಂಗಮ, ಚಲನ ಚಿತ್ರೋತ್ಸವ ಅದ್ದೂರಿಯಾಗಿ ನಡೆಯುತ್ತ ಬಂದಿವೆ.

ಪ್ರಸ್ತುತ ಮಠದ ಧರ್ಮಾಧಿಕಾರಿಗಳಾದ ಡಾ, ಶಿವಕುಮಾರ ಸ್ವಾಮೀಜಿ ನೇತೃತ್ವದಲ್ಲಿ ಮುನ್ನಡೆಯುತ್ತಿರುವ ಈ ಮಠವು ಅನ್ನ ದಾಸೋಹವು ಮಠಕ್ಕೆ ಬರುವ ಭಕ್ತಾದಿಗಳಿಗೆ, ದೀನ ದಲಿತರಿಗೆ ಹಾಗೂ ಪ್ರವಾಸಿಗರಿಗೆ ಯಾವುದೇ ಭೇದಭಾವವಿಲ್ಲದೆ ನಿರಂತರವಾಗಿ ಉಚಿತ ಪ್ರಸಾದವನ್ನು ನೀಡಲಾಗುತ್ತಿದೆ.

ಬಸವಣ್ಣನವರ ಕಾಯಕವೇ ಕೈಲಾಸ ಮತ್ತು ದಾಸೋಹ ತತ್ವಗಳು ಇಲ್ಲಿ ಅನುಷ್ಠಾನದಲ್ಲಿವೆ. ಈ ಮಠಕ್ಕೆ ಕಲಾ ಪೋಷಕರ ಮಠ ಎಂಬ ಅನ್ವರ್ಥ ನಾಮವಿದೆ.

ಉತ್ತರ ಕರ್ನಾಟಕದ ಜಾನಪದ ಕಲೆಗಳು, ದೊಡ್ಡಾಟ, ಬಯಲಾಟ, ನಾಟಕ, ಮತ್ತು ಪ್ರವಚನ ಕಲಾವಿದರನ್ನು ಶ್ರೀಮಠವು ಸದಾ ಪ್ರೋತ್ಸಾಹಿಸುತ್ತಾ ಬಂದಿದೆ.

ಮಠದ ಆವರಣದಲ್ಲಿ ಅತ್ಯಂತ ಅಪರೂಪದ ಚಾಲುಕ್ಯರ ಕಾಲದ ಕುಳಿತ ಭಂಗಿಯಲ್ಲಿರುವ ಲಜ್ಜಾಗೌರಿ ದೇವಿಯ ವಿಗ್ರಹ ಹಾಗೂ ಪುರಾತನ ಸಿದ್ದೇಶ್ವರ ದೇವಾಲಯವಿದೆ.

ಮಕ್ಕಳಿಲ್ಲದ ದಂಪತಿಗಳಿಗೆ ಸಂತಾನ ಭಾಗ್ಯ ಕರುಣಿಸುವ ಜಾಗವಾಗಿ ಇದು ಭಕ್ತರಲ್ಲಿ ಪ್ರಸಿದ್ಧಿ ಪಡೆದಿದೆ. ದಾಸೋಹ, ಧಾರ್ಮಿಕ ಸೇವೆ ಮತ್ತು ಕಲಾ ಪೋಷಣೆಯ ಮೂಲಕ ಗುರುತಿಸಿ ಕೊಂಡಿರುವ.

ಈ ಕ್ಷೇತ್ರದ ಕೊಡುಗೆಗಳನ್ನು ರಾಜ್ಯ ಮಟ್ಟದಲ್ಲಿ ಗುರುತಿಸ ಬೇಕು. ಶ್ರೀಮಠದ ಸೇವಾ ಸಾಧನೆಗಳು ಪ್ರಶಸ್ತಿಯ ಮಾನದಂಡಗಳಿಗೆ ಹೊಂದಿಕೆ ಯಾಗುತ್ತವೆ ಎಂಬುದನ್ನು ಗಮನಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸ ಬೇಕು ಎಂಬುದು ಸರ್ವ ಭಕ್ತರ ಹಾಗೂ ಸಿಹಿ ಕಹಿ ಕನ್ನಡ ದಿನ ಪತ್ರಿಕೆ & ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಕೂಡ ಪ್ರಶಂಸನೀಯ ಜೊತೆಗೆ ಮುಕ್ತ ಕಂಠದಿಂದ ಆಗ್ರಹ ಪಡಿಸುತ್ತದೆ.

ರಾಜ್ಯ ಮಟ್ಟದ ವಿಶೇಷ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಡಾ, ಪ್ರಭು ಗಂಜಿಹಾಳ ಗದಗ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button