🚨ಬ್ರೇಕಿಂಗ್ ನ್ಯೂಸ್🚨 🛑ಕಿತ್ತೂರು ಉತ್ಸವದಲ್ಲಿ ಪತ್ರಕರ್ತರಿಗೆ ಅವಮಾನ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ – ನಡೆಗೆ ವ್ಯಾಪಕ ಆಕ್ರೋಶ..!
ಕಿತ್ತೂರು/ಬೆಳಗಾವಿ ಅ.26




ಐತಿಹಾಸಿಕ ಹಾಗೂ ವೈಭವೋಪೇತವಾಗಿ ನಡೆಯುತ್ತಿರುವ ಕಿತ್ತೂರು ಉತ್ಸವದ ಕವರೇಜ್‌ಗಾಗಿ ಆಗಮಿಸಿದ್ದ ಮಾಧ್ಯಮ ಪ್ರತಿನಿಧಿಗಳಿಗೆ ಜಿಲ್ಲಾಡಳಿತ ಮತ್ತು ಸ್ಥಳೀಯ ಪೊಲೀಸ್ ವ್ಯವಸ್ಥೆ ಕನಿಷ್ಠ ಗೌರವ ನೀಡದೆ, ಪ್ರವೇಶ ನಿರಾಕರಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.ನಿಯಮಾನುಸಾರ ಕೇಂದ್ರ ಸರ್ಕಾರದ RNI (Registrar of Newspapers for India) ನೋಂದಣಿ ಹೊಂದಿದ ಅಧಿಕೃತ ಪತ್ರಿಕೆಗಳ ವರದಿಗಾರರಿಗೂ ಉತ್ಸವದ ಆವರಣದೊಳಗೆ ಪ್ರವೇಶ ನೀಡದೆ ತಡೆದಿರುವುದು ಜಿಲ್ಲಾಡಳಿತದ ಸರ್ವಾಧಿಕಾರಿ ಧೋರಣೆಯನ್ನು ಎತ್ತಿ ಹಿಡಿದಿದೆ.
📌 ಘಟನೆಯ ಪ್ರಮುಖ ಮುಖ್ಯಾಂಶಗಳು:-
ಪೊಲೀಸ್ ಇಲಾಖೆಯ ದುರ್ನಡತೆ:-
ಕಿತ್ತೂರು ತಾಣ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದ ಪಿಎಸ್‌ಐ (PSI) ಹಾಗೂ ಸಿಬ್ಬಂದಿ ಪತ್ರಕರ್ತರೊಂದಿಗೆ ಅತ್ಯಂತ ಅಸಭ್ಯವಾಗಿ ಮತ್ತು ದುರ್ನಡತೆಯಿಂದ ವರ್ತಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಮಾಧ್ಯಮ ಸ್ವಾತಂತ್ರ್ಯದ ಹರಣ:-
ಬೆಳಗಾವಿ ಜಿಲ್ಲೆಯ ಪೊಲೀಸ್ ವ್ಯವಸ್ಥೆಯಲ್ಲಿ ಹಾಗೂ ಜಿಲ್ಲಾಡಳಿತದ ಕೆಳ ಹಂತದಲ್ಲಿ ಕಾರ್ಯನಿರತ ಪತ್ರಕರ್ತರಿಗೆ ಕನಿಷ್ಠ ಮರ್ಯಾದೆ ನೀಡುತ್ತಿಲ್ಲ. ಸಾರ್ವಜನಿಕರಿಗೆ ಮಾಹಿತಿ ತಲುಪಿಸುವ ಮಾಧ್ಯಮದವರನ್ನೇ ಹೊರಗಿಡುವ ಪ್ರಯತ್ನ ನಡೆದಿದೆ.
ಸಚಿವರ ವಿರುದ್ಧ ಆಕ್ರೋಶ:-
“ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರೇ, ಇದು ನಿಜಕ್ಕೂ ನಾಚಿಕೆ ಗೇಡಿನ ವಿಚಾರ! ಮಾಧ್ಯಮದವರನ್ನು ಈ ರೀತಿ ನಡೆಸಿ ಕೊಳ್ಳುವುದು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭಕ್ಕೆ ಎಸಗಿದ ಅಪಚಾರ,” ಎಂದು ಪತ್ರಕರ್ತರ ಸಂಘಟನೆಗಳು ಕಾರಂಜಿ ಹಾಯ್ದಿವೆ.
📢 ಪತ್ರಕರ್ತರ ಸಂಘಟನೆಯ ಕಟ್ಟುನಿಟ್ಟಿನ ಆಗ್ರಹಗಳು:-
ತಕ್ಷಣದ ಅಮಾನತ್:-
ಪತ್ರಕರ್ತರೊಂದಿಗೆ ಅಸಭ್ಯವಾಗಿ ವರ್ತಿಸಿ, ವರದಿಗಾರಿಕೆಗೆ ಅಡ್ಡಿ ಪಡಿಸಿದ ಸಂಬಂಧಪಟ್ಟ ಪಿಎಸ್‌ಐ ಹಾಗೂ ದುರ್ನಡತೆ ತೋರಿದ ಪೊಲೀಸ್ ಸಿಬ್ಬಂದಿಯನ್ನು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕೂಡಲೇ ಅಮಾನತ್ ಗೊಳಿಸಬೇಕು.
ವರದಿಗಾರಿಕೆಗೆ ತಕ್ಷಣ ಅವಕಾಶ:-
RNI ನೋಂದಾಯಿತ ಪತ್ರಿಕೆಗಳು ಹಾಗೂ ಎಲ್ಲಾ ಮಾಧ್ಯಮ ಪ್ರತಿನಿಧಿಗಳಿಗೆ ಗೌರವಯುತವಾಗಿ ಉತ್ಸವದ ಒಳಗೆ ಪ್ರವೇಶ ನೀಡಿ, ಸುಲಭವಾಗಿ ವರದಿ ಮಾಡಲು ತಕ್ಷಣವೇ ಅನುವು ಮಾಡಿಕೊಡಬೇಕು.
ಸಚಿವರ ಮಧ್ಯಸ್ಥಿಕೆ:-
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಕೂಡಲೇ ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು.
“ಮಾಧ್ಯಮಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಕೂಡಲೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ರೂಪಿಸಲಾಗುವುದು.” ಪತ್ರಕರ್ತರು ಹಾಗೂ ಪತ್ರಕರ್ತರ ಸಂಘಟನೆ, ಬೆಳಗಾವಿ
ವರದಿ:ಆರತಿ.ಗಿಳಿಯಾರು.ಉಡುಪಿ

