ಶ್ರೀನರಹರೇಶ್ವರ ದೇವಸ್ಥಾನದಲ್ಲಿ ಸುಮ ಪ್ರಕಾಶ್ ಸಂಗಡಿಗರಿಂದ – ಶ್ರೀ ಸೌಂದರ್ಯ ಲಹರಿ ಪಾರಾಯಣ.
ಚಳ್ಳಕೆರೆ ನ.05




ಹೊರ ವಲಯದ ನರಹರಿ ನಗರದ ಶ್ರೀನರಹರಿ ಸದ್ಗುರು ಆಶ್ರಮದ ಶ್ರೀನರಹರೇಶ್ವರ ದೇವಸ್ಥಾನದಲ್ಲಿ ಶ್ರೀಮತಿ ಸುಮ ಪ್ರಕಾಶ್ ಮತ್ತು ಸಂಗಡಿಗರಿಂದ ವಿಶೇಷ ಭಜನೆ ಮತ್ತು ಶ್ರೀ ಶಂಕರಾಚಾರ್ಯ ವಿರಚಿತ ಶ್ರೀ ಸೌಂದರ್ಯ ಲಹರಿಯ ಪಾರಾಯಣ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಲೇಖಕ ಕಣಜನಹಳ್ಳಿ ನಾಗರಾಜ್ ಅವರು “ಅಜ್ಞಾತ ಅವಧೂತರ” ಬಗ್ಗೆ ವಿಶೇಷ ಉಪನ್ಯಾಸ ನೀಡಿದರೆ ಶ್ರೀ ನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ಡಾ, ವೈ ರಾಜಾರಾಮ್ ಗುರುಗಳು ಶ್ರೀ ಸೌಂದರ್ಯ ಲಹರಿಯ ಬಗ್ಗೆ ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಕೊನೆಯಲ್ಲಿ ಶ್ರೀನರಹರೇಶ್ವರ ದೇವರಿಗೆ ಮಂಗಳಾರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು.

ಪಾರಾಯಣದಲ್ಲಿ ರವಿ ರಾಜಾರಾಮ್, ಹೆಚ್ ಲಕ್ಷ್ಮೀದೇವಮ್ಮ, ರಂಗಮ್ಮ, ಗೀತಾ ಪ್ರಕಾಶ್, ಗೀತಾ ನಾಗರಾಜ್, ಸುನೀತಾ ಗೋಪಾಲಕೃಷ್ಣ, ಸರ್ವಮಂಗಳಾ, ಸುಚೇತನಾ, ಸುನೀತಾ, ನಿರ್ಮಲಾ,ಉಷಾ ಲೋಕನಾಥ್, ಪ್ರೇಮಲೀಲಾ, ಸರಸ್ವತಿ, ಸುಶೀಲಮ್ಮ, ಗೀತಾ, ಅನುಸೂಯ, ಅಯ್ಯಪ್ಪ, ಸೌಮ್ಯ, ವನಜಾಕ್ಷಿ, ಸುಧಾಮಣಿ, ಮಂಜುಳಾ,ಮಂಗಳಾ, ವಿಜಯ, ಭಾಗ್ಯಲಕ್ಷ್ಮೀ, ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ, ರೇವಣಸಿದ್ಧಯ್ಯ, ಅಶ್ವಿನಿ ಸೇರಿದಂತೆ ಸಾಕಷ್ಟು ಸಂಖ್ಯೆಯಲ್ಲಿ ಸದ್ಭಕ್ತರು ಭಾಗವಹಿಸಿದ್ದರು.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.
