ಕರ್ನಾಟಕ ಸಂಯುಕ್ತ ರಂಗ ಜಾಗೃತಿ ಟ್ರಸ್ಟ್ ತುಮಕೂರು ಅವರಿಂದ – ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ರಾಜ್ಯೋತ್ಸವ ಪ್ರಶಸ್ತಿ ಹಾಗೂ ಗೌರವ ಪುರಸ್ಕಾರ ಜರುಗಿತು.

ತುಮಕೂರು ನ.06

ಕರ್ನಾಟಕ ರಾಜ್ಯೋತ್ಸವ ಹಾಗೂ ವಿಧಾನ ಸೌಧ ನಿರ್ಮಾತ್ಯ ಏಕೀಕರಣದ ಪ್ರಮುಖ ಪಾತ್ರಧಾರಿ ಮಾಜಿ ಮುಖ್ಯಮಂತ್ರಿ ಹನುಮಂತಯ್ಯ ನವರ ಜನ್ಮ ಜಯಂತಿ ಅಂಗವಾಗಿ ಕರ್ನಾಟಕ ಸಂಯುಕ್ತ ರಂಗ ಜಾಗೃತಿ ಟ್ರಸ್ಟ್ ತುಮಕೂರು ಅವರಿಂದ ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಹಾಗೂ ಗೌರವ ಪುರಸ್ಕಾರ ದಿನಾಂಕ 05 ನವಂಬರ್ 2026 ರಂದು ನಯನ ಸಭಾಂಗಣ ರವೀಂದ್ರ ಕಲಾ ಕ್ಷೇತ್ರದ ಹತ್ತಿರ ಕನ್ನಡ ಭವನದಲ್ಲಿ ಬಹಳ ವಿಜೃಂಭಣೆಯಿಂದ ಕಾರ್ಯಕ್ರಮ ಜರುಗಿತು.

30 ಜನ ರಾಜ್ಯ ಪ್ರಶಸ್ತಿಗೆ ಆಯ್ಕೆಯಾದ ಸಾಧಕರನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು ಈ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ನಿ ಪ್ರ ಸ್ವ ಜಗದ್ಗುರು ಶ್ರೀ ಸಿದ್ದರಾಮಯ್ಯ ಚೈತನ್ಯ ಮಹಾ ಸ್ವಾಮಿಗಳು ಶ್ರೀ ಅರೇ ಶಂಕರ ಮಠ ಕಿತ್ನಾಮಂಗಲ್. ಉದ್ಘಾಟನೆ ಸನ್ಮಾನ್ಯ ಶ್ರೀ ಪಿ ಕೃಷ್ಣ ಭಟ್ಟರವರು ನಿವೃತ್ತ ನ್ಯಾಯಾಧೀಶರು ಉಚ್ಚ ನ್ಯಾಯಾಲಯ ಕರ್ನಾಟಕ ಸರ್ಕಾರ. ಅಧ್ಯಕ್ಷತೆ ಸನ್ಮಾನ್ಯ ಡಾಕ್ಟರ್ ಕೆಂಚನೂರು ಶಂಕ್ರಪ್ಪನವರು ಪತ್ರಕರ್ತ ನಾಟಕಕಾರ ಲೇಖಕ ನಿರ್ದೇಶಕ ಚನಲ ಚಿತ್ರ ತಂತ್ರಜ್ಞಾನ ಪರಿಸರ ಪ್ರೇಮಿ ಸಮಾಜ ಸೇವಕ ವಾಸ್ತು ಹಾಗೂ ಜ್ಯೋತಿಷ್ಯ ತಜ್ಞ ಗೌರವಾಧ್ಯಕ್ಷರು ಕರ್ನಾಟಕ ಜನತಾ ಸೇವಾದಳ. ಸುಸ್ವಾಗತ ಸನ್ಮಾನ್ಯ ಶ್ರೀ ಟಿಎನ್ ಕನಕ ರಾಜು ರವರು ಜಂಟಿ ರಿಜಿಸ್ಟರ್ ಉಚ್ಚ ನ್ಯಾಯಾಲಯ ಕರ್ನಾಟಕ ಸರ್ಕಾರ ಇವರ ಆಗಮನದಿಂದ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು.

ವಿಶೇಷ ಆಹ್ವಾನಿತರಾಗಿ ಸನ್ಮಾನ್ಯ ಶ್ರೀ ಕೆ ಎಲ್ ಕುಂದರಗಿಯವರು ಕನ್ನಡದ ನ್ಯಾಯವಾದಿ ಅಥಣಿ, ಬೆಳಗಾವಿ ಜಿಲ್ಲೆ. ಸನ್ಮಾನ್ಯ ಡಾಕ್ಟರ್ ಯೋಗಿ ನಾರಾಯಣ್ ಅವರು ಮಾಜಿ ಯೋಧ ವಿವೇಕ ಸಂಸ್ಥಾಪಕರು ಮತ್ತು ವಿಶ್ವ ಚೇತನ ಯೋಗ. ಶ್ರೀಮತಿ ರಂಜಿನಿ ರಾಜ್ ಅವರು ಮಹಿಳಾ ಮತ್ತು ಮಕ್ಕಳ ಅಧ್ಯಕ್ಷರು ಮದ್ದೂರು ಮಂಡ್ಯ ಜಿಲ್ಲೆಯ ಶ್ರೀಮತಿ ಅಂಬಿಕಾ ಮಣಿ ನಗರ ಸಭಾ ಸದಸ್ಯರು ವಿದ್ಯಾರಣ್ಯಪುರ ಬೆಂಗಳೂರು.

ಸನ್ಮಾನ್ಯ ಶ್ರೀ ಓ ಎಂ ಬಸವರಾಜ ಪ್ರಧಾನ ಕಾರ್ಯದರ್ಶಿ ಕರ್ನಾಟಕ ಸಂಯುಕ್ತ ರಂಗ ಜಾಗೃತಿ ಟ್ರಸ್ಟ್. ಶ್ರೀ ಸಿಎನ್ ಕೃಷ್ಣಮೂರ್ತಿ ನಿವೃತ್ತ ಶಿಕ್ಷಕರು ಲೇಖಕರು. ಡಾಕ್ಟರ್ ಸಿದ್ದು ಎಂ ಕಲ್ಲೂರ್ ಸಂಪಾದಕರು ಕಾರ್ಮಿಕ ಕಲ್ಯಾಣ ಪತ್ರಿಕೆ ರಾಜ್ಯಾಧ್ಯಕ್ಷರು ಕರ್ನಾಟಕ ಕಾರ್ಮಿಕರ ರಕ್ಷಣಾ ವೇದಿಕೆ ವಿಜಯಪುರ. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಶ್ರೀಮತಿ ಲಕ್ಷ್ಮಿ ಎಲ್ ನಿರೂಪಿಸಿದರು.

ಸಂಸ್ಕೃತಿಕ ಕಾರ್ಯಕ್ರಮಗಳು ಅಕಾಡೆಮಿ ತಂಡ ಬೆಂಗಳೂರು. ವೀಣೆ ವಾದನ ಕುಮಾರಿ ಹಿರಣ್ಯ ಲಕ್ಷ್ಮಿ ಎಸ್ ಬೆಂಗಳೂರು, ಗಾಂಧಾರಿ ವಿದ್ಯೆ ಕುಮಾರಿ ಪೂಜಾ ಎಂ ಬೆಂಗಳೂರು. ಭರತನಾಟ್ಯ ಪ್ರಿಯ ನೃತ್ಯ ಅಕಾಡೆಮಿ ತಂಡ ಬೆಂಗಳೂರು ವಸುಂದರ ಮೂರ್ತಿ ಗುರುಗಳು ಮಾರ್ಗದರ್ಶನದಲ್ಲಿ ಜರುಗಿತು.

ರಾಜ್ಯದ ಜನತೆಗೆ ಕರ್ನಾಟಕ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು ಕರ್ನಾಟಕ ಸಂಯುಕ್ತ ರಂಗ ಜಾಗೃತಿ ಟ್ರಸ್ಟ್ ಪದಾಧಿಕಾರಿಗಳು ಡಾಕ್ಟರ್ ಎಂ ಎಚ್ ಆರ್ ದಳವಿ, ಎಚ್ ಸದಾಶಿವ, ಹೆಚ್ ಹೆಚ್ ಸತೀಶ್ ರೆಡ್ಡಿ ಓ ಎಂ ಬಸವರಾಜ್ ಡಿಎಸ್ ಗಂಗಾಧರಯ್ಯ ಶ್ರೀಮತಿ ಉಮಾದೇವಿ ಬಿ ಮಹೆಬೂಬ್ ಪಾಶ ಇವರುಗಳ ಸಹಯೋಗದಲ್ಲಿ ದಿವಂಗತ ಕೆಂಗಲ್ ಹನುಮಂತಯ್ಯ ಮಾಜಿ ಮುಖ್ಯಮಂತ್ರಿ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ವಿಜೇತ ತಾಲೂಕಿನಲ್ಲಿ ಬಸವರಾಜ್ ಪಡಶೆಟ್ಟಿ, ಕೇದಾರ್ ಕ್ಷತ್ರಿ, ಗಾಲಿಬಸಾಹೇಬ ನಾಗಾವಿ ಇವರನ್ನು ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಗಾಲಿಬಸಾಹೇಬ ನಾಗಾವಿ ದೇವಣಗಾಂವ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button