ಶ್ರೀಸಾಯಿಬಾಬಾ ಮಂದಿರದಲ್ಲಿ ಪ್ರತಿ ತಿಂಗಳು ವಿವಿಧ ಭಜನಾ ಮಂಡಳಿಗಳಿಂದ ಭಜನೋತ್ಸವ ಕಾರ್ಯಕ್ರಮ – ಬಿ.ಸಿ ಸಂಜೀವಮೂರ್ತಿ.

ಚಳ್ಳಕೆರೆ ನ.06

ಶ್ರೀಸಾಯಿಬಾಬಾ ದೇವಸ್ಥಾನದಲ್ಲಿ ಪ್ರತಿ ತಿಂಗಳ ಒಂದು ಗುರುವಾರ ಬೆಳಗ್ಗೆ ಚಳ್ಳಕೆರೆಯ ವಿವಿಧ ಭಜನಾ ಮಂಡಳಿಗಳಿಂದ ಭಜನೋತ್ಸವ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.ಇದನ್ನು ಮುಂದಿನ ದಿನಗಳಲ್ಲಿ ಪ್ರತಿ ಗುರುವಾರವು ನಡೆಸಲಾಗುವುದು ಎಂದು ಚಳ್ಳಕೆರೆಯ ಶ್ರೀ ವೆಂಕಟಸಾಯಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಬಿ.ಸಿ ಸಂಜೀವಮೂರ್ತಿ ಅಭಿಪ್ರಾಯ ಪಟ್ಟರು‌.

ನಗರದ ಹೊರ ವಲಯದ ಪಾವಗಡ ರಸ್ತೆಯ ಸಾಯಿನಗರದ ಶ್ರೀಸಾಯಿಬಾಬಾ ಮಂದಿರದಲ್ಲಿ ಆಯೋಜಿಸಿದ್ದ ಭಜನೋತ್ಸವ ಕಾರ್ಯಕ್ರಮದ ಉದ್ಘಾಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಭಜನೋತ್ಸವ ಕಾರ್ಯಕ್ರಮದ ನೇತೃತ್ವ ವಹಿಸಿರುವ ಸಮಾಜ ಸೇವಕ ಯತೀಶ್ ಎಂ ಸಿದ್ದಾಪುರ ಮಾತನಾಡಿ ಆಯಿಲ್ ಸಿಟಿ, ವಿಜ್ಞಾನ ನಗರಿ ಎಂದು ಪ್ರಸಿದ್ಧಿ ಗಳಿಸಿರುವ ಚಳ್ಳಕೆರೆ ತಾಲೂಕನ್ನು “ಆಧ್ಯಾತ್ಮಿಕ ನಗರಿ” ಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಭಜನಾ ಕಾರ್ಯಕ್ರಮಗಳನ್ನು ನಗರದ ವಿವಿಧ ದೇವಸ್ಥಾನಗಳಲ್ಲಿ ಆರಂಭಿಲಾಗಿದೆ. ಇಂದು ಈ ಕಾರ್ಯಕ್ರಮವನ್ನು ಸಾಯಿ ಮಂದಿರದಲ್ಲಿ ಆರಂಭಿಸಲಾಗುತ್ತಿದೆ.

ಈ ಕಾರ್ಯಕ್ರಮದಲ್ಲಿ ನಗರ ಮತ್ತು ಗ್ರಾಮಾಂತರ ಪ್ರದೇಶಗಳ ವಿವಿಧ ಭಜನಾ ಮಂಡಳಿಗಳು ಭಾಗವಹಿಸಿ ವಿಶೇಷ ಭಜನೆ ಮತ್ತು ಸ್ತೋತ್ರ ಪಾರಾಯಣ ಕಾರ್ಯಕ್ರಮಗಳನ್ನು ನಡೆಸಿ ಕೊಡಲಿದ್ದು ಇಂದು ಶಾಂತಿ ನಗರದ ಶ್ರೀ ಗಣಪತಿ ಭಜನಾ ಮಂಡಳಿಯ ಸುನೀತಾ ಗೋಪಾಲಕೃಷ್ಣ ನೇತೃತ್ವದಲ್ಲಿ ಭಜನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಕುರಿತು ಸಾಯಿಬಾಬಾ ಮಂದಿರದ ಮಹಿಳಾ ಘಟಕದ ಅಧ್ಯಕ್ಷೆ ಅರುಣಾ ಜಗದೀಶ್,ಶ್ರೀಗಣಪತಿ ಭಜನಾ ಮಂಡಳಿಯ ಮುಖ್ಯಸ್ಥರಾದ ಸುನೀತಾ ಗೋಪಾಲಕೃಷ್ಣ ಅವರು ಮಾತನಾಡಿದರು.

ಕೊನೆಯಲ್ಲಿ ಬಾಬಾ ಅವರಿಗೆ ಮಂಗಳಾರತಿ ಮತ್ತು ಅನ್ನಪ್ರಸಾದ ವಿನಿಯೋಗ ನಡೆಯಿತು.

ಭಜನೋತ್ಸವ ಕಾರ್ಯಕ್ರಮದಲ್ಲಿ ಪುಷ್ಪಾ ಸಂಜೀವಮೂರ್ತಿ, ರವಿಪ್ರಸಾದ್, ವಿಕಾಸ್, ರೇವಣಸಿದ್ಧಯ್ಯ, ಸುರೇಶಬಾಬು, ವನಜಾಕ್ಷಿ, ಈಶ್ವರಮ್ಮ, ಲೀಲಾವತಿ, ನಾಗವೇಣಿ, ಲತಾ,ಕವಿತಾ, ಸುಮ, ಚಂದ್ರಮ್ಮ, ಗೀತಾ, ಮೇಘನಾ, ಸುಮ ವೆಂಕಟೇಶ್, ಪದ್ಮಾ, ಭಾವನಾ, ಲಕ್ಷ್ಮೀ, ಗಜಮ್ಮ, ಸುಜಾತಾ, ಶುಭಾ ಸೇರಿದಂತೆ ಶ್ರೀವೆಂಕಟಸಾಯಿ ಸೇವಾ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಸಾಯಿ ಸದ್ಭಕ್ತರು ಭಾಗವಹಿಸಿದ್ದರು.

ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button