🚨ಬ್ರೇಕಿಂಗ್ ನ್ಯೂಸ್ | SPECIAL INVESTIGATIVE REPORT🚨 🚨ಪೊಲೀಸ್ ಇಲಾಖೆ, ಬಿಎನ್‌ಎಸ್‌ಎಸ್ (BNSS) ಕಾಯ್ದೆ ದುರ್ಬಳಕೆ, ಮನೆಗಳಿಗೆ ದಮ್ಕಿ, ಆಸ್ತಿ ತನಿಖೆ ಮತ್ತು ಮಾಧ್ಯಮ ಪ್ರದರ್ಶನ – ಸಾಂವಿಧಾನಿಕ ಹಕ್ಕುಗಳ ರಕ್ಷಣೆಗೆ ತೀವ್ರ ಒತ್ತಾಯ.🚨

ಬೆಂಗಳೂರು ನ.26

ಪೊಲೀಸ್ ಇಲಾಖೆ ಮತ್ತು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS – ಬಿಎನ್‌ಎಸ್‌ಎಸ್) ಸೇರಿದಂತೆ ವಿವಿಧ ಕಾಯ್ದೆಗಳು ಮತ್ತು ಆದೇಶಗಳನ್ನು ಮುಂದಿಟ್ಟು ಕೊಂಡು ಕೆಲವು ಅಧಿಕಾರಿಗಳು ಸಾರ್ವಜನಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂಬ ವಿಚಾರ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮನೆಗಳಿಗೆ ತೆರಳಿ ದಮ್ಕಿ ಹಾಕುವುದು, ಕುಟುಂಬಸ್ಥರು ಮತ್ತು ವಿದ್ಯಾರ್ಥಿಗಳ ಮುಂದೆ ಅವಮಾನಿಸುವುದು ಹಾಗೂ ಮಾಧ್ಯಮಗಳ ಎದುರು ‘ಹೈಡ್ರಾಮಾ’ ಮತ್ತು ಶಕ್ತಿ ಪ್ರದರ್ಶನ ಮಾಡುವ ಪ್ರವೃತ್ತಿಯ ವಿರುದ್ಧ ಸಾರ್ವಜನಿಕ ವಿರೋಧ ಭುಗಿಲೆದ್ದಿದೆ. ಇಂತಹ ಆದೇಶಗಳನ್ನು ಕೂಡಲೇ ರದ್ದು ಗೊಳಿಸಿ ಬಿಎನ್‌ಎಸ್‌ಎಸ್ ಕಾಯ್ದೆಗೆ ತಿದ್ದುಪಡಿ ತರಬೇಕು ಹಾಗೂ ಭ್ರಷ್ಟಾಚಾರ ಆರೋಪದಡಿ ಅಧಿಕಾರಿಗಳ ಆಸ್ತಿಗಳ ಕುರಿತು ಲೋಕಾಯುಕ್ತ ಮತ್ತು ಜಾರಿ ನಿರ್ದೇಶನಾಲಯ (ED – ಇಡಿ) ದಾಳಿಗಳಂತಹ ಸಮಗ್ರ ತನಿಖೆ ನಡೆಯಬೇಕು ಎಂಬ ಆಗ್ರಹ ಪ್ರಜ್ಞಾವಂತರು ಮತ್ತು ನಾಗರಿಕರಿಂದ ಬಲವಾಗಿ ಕೇಳಿ ಬರುತ್ತಿದೆ.

🚨ಪೊಲೀಸ್ ಇಲಾಖೆಯಲ್ಲಿ ಆಸ್ತಿ ತನಿಖೆ:-

ಸೇವೆಗೆ ಸೇರುವಾಗಿನ ಆಸ್ತಿ vs ನಂತರದ ಆಸ್ತಿ — ಲೋಕಾಯುಕ್ತ ಮತ್ತು ಇಡಿ (ED) ತನಿಖೆಗೆ ಆಗ್ರಹ

🚨ಬ್ರೇಕಿಂಗ್:-

ಪೊಲೀಸ್ ಇಲಾಖೆಯೊಳಗಿನ ಭ್ರಷ್ಟಾಚಾರ, ಅಕ್ರಮ ಚಟುವಟಿಕೆಗಳ ಸಹಕಾರ ಮತ್ತು ಆಸ್ತಿ ಸಂಪಾದನೆಯ ಆರೋಪಗಳ ಕುರಿತು ವ್ಯಾಪಕ ಚರ್ಚೆ ನಡೆಯುತ್ತಿದೆ. ಅಧಿಕಾರಿಗಳು ಕರ್ತವ್ಯಕ್ಕೆ ಸೇರ್ಪಡೆ ಯಾಗುವಾಗ ಸಲ್ಲಿಸಿದ ಆಸ್ತಿ ವಿವರಗಳು ಮತ್ತು ನಂತರದ ಅವಧಿಯಲ್ಲಿ ಸಂಪಾದಿಸಿದ ಆಸ್ತಿಗಳ ವಿವರಗಳ ನಡುವೆ ತಾಳೆ ಹಾಕಿ ಸಂಪೂರ್ಣ ತನಿಖೆ ನಡೆಸಬೇಕು ಎಂಬ ಒತ್ತಾಯ ತೀವ್ರ ಗೊಂಡಿದೆ.

ಆದಾಯಕ್ಕೆ ಮೀರಿದ ಆಸ್ತಿ, ಕುಟುಂಬದವರು ಅಥವಾ ಬೇನಾಮಿ ಹೆಸರಿನಲ್ಲಿರುವ ಆಸ್ತಿಗಳ ಕುರಿತು ಲೋಕಾಯುಕ್ತ ತನಿಖೆ ಮತ್ತು ಇಡಿ (ED) ದಾಳಿಗಳಂತಹ ಕಠಿಣ ತನಿಖಾ ಕ್ರಮಗಳು ನಡೆಯಬೇಕು ಎಂಬುದು ಸಾರ್ವಜನಿಕರು ಮತ್ತು ಪ್ರಜ್ಞಾವಂತರ ಪ್ರಮುಖ ಆಗ್ರಹವಾಗಿದೆ.

ಮೊದಲು ವ್ಯವಸ್ಥೆಯೊಳಗಿನ ಭ್ರಷ್ಟಾಚಾರ ಮತ್ತು ಲೋಪಗಳನ್ನು ಸರಿಪಡಿಸ ಬೇಕು, ಕಾನೂನು ರಕ್ಷಕರೇ ಕಾನೂನು ಮೀರಿದಾಗ ಸಾರ್ವಜನಿಕರ ವಿಶ್ವಾಸ ಕುಸಿಯುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ..

🚨 ಬಿಎನ್‌ಎಸ್‌ಎಸ್ ಕಾಯ್ದೆಯ ದುರುಪಯೋಗದ ಆರೋಪ ಮತ್ತು ತಿದ್ದುಪಡಿಯ ಒತ್ತಾಯ

🚨ಬ್ರೇಕಿಂಗ್:-

ಕಾನೂನು ಸುವ್ಯವಸ್ಥೆ ಮತ್ತು ತನಿಖಾ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಜಾರಿಯಲ್ಲಿರುವ ಬಿಎನ್‌ಎಸ್‌ಎಸ್ (BNSS) ಕಾಯ್ದೆಯ ನಿಬಂಧನೆಗಳನ್ನು ಇಟ್ಟುಕೊಂಡು ಸಾರ್ವಜನಿಕರ ಮೇಲೆ ಅನಗತ್ಯ ನಿರ್ಬಂಧ, ಕಣ್ಗಾವಲು ಅಥವಾ ಒತ್ತಡ ಹೇರುವ ದಬ್ಬಾಳಿಕೆಯ ಪ್ರಕರಣಗಳ ಬಗ್ಗೆ ಸಾರ್ವಜನಿಕರಲ್ಲಿ ಗಂಭೀರ ಕಳವಳ ವ್ಯಕ್ತವಾಗುತ್ತಿದೆ.

ನಾಗರಿಕರ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಯಾಗದಂತೆ ಬಿಎನ್‌ಎಸ್‌ಎಸ್ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು ಎಂಬ ಒತ್ತಾಯ ಕಾನೂನು ವಲಯ ಮತ್ತು ಸಾರ್ವಜನಿಕರಿಂದ ಹೆಚ್ಚುತ್ತಿದೆ.ಕಾನೂನಿನ ದುರ್ಬಳಕೆ ಅಥವಾ ದಬ್ಬಾಳಿಕೆಗೆ ಅವಕಾಶ ನೀಡುವಂತಹ ಯಾವುದೇ ಆದೇಶಗಳನ್ನು ರಾಜ್ಯ ಸರ್ಕಾರ ಕೂಡಲೇ ರದ್ದು ಗೊಳಿಸ ಬೇಕು ಎಂಬ ಆಗ್ರಹ ಜೋರಾಗಿದೆ.

🚨ಮನೆ, ಕುಟುಂಬ ಮತ್ತು ವಿದ್ಯಾರ್ಥಿಗಳ ಭವಿಷ್ಯ:-

ಸಂವಿಧಾನದ ವಿರುದ್ಧದ ನಡೆ

🚨ಬ್ರೇಕಿಂಗ್:-

ಪ್ರತಿಯೊಬ್ಬ ವ್ಯಕ್ತಿಗೂ ಊರು-ಕೇರಿಗಳಲ್ಲಿ ಘನತೆಯಿಂದ ಬದುಕುವ ಹಕ್ಕಿದೆ. ವ್ಯಕ್ತಿಯೊಬ್ಬನ ಮನೆಗೆ ತೆರಳಿ ದಮ್ಕಿ ಹಾಕುವುದು ಅಥವಾ ಅವಮಾನಿಸುವುದು ಕೇವಲ ಆ ವ್ಯಕ್ತಿಗೆ ಮಾತ್ರವಲ್ಲದೆ, ಆ ಮನೆಯ ಇತರ ಸದಸ್ಯರು ಮತ್ತು ವಿಶೇಷವಾಗಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಮತ್ತು ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಮನೆ ಎಂದ ಮೇಲೆ ಊರು-ಕೇರಿಗಳು ಇರುತ್ತವೆ:-

ಕುಟುಂಬದ ಸದಸ್ಯರು ಮತ್ತು ನೆರೆ ಹೊರೆಯವರ ಎದುರು ಉಂಟಾಗುವ ಅವಮಾನವನ್ನು ಸಹಿಸಲಾಗದೆ ಮನೆಯ ಸದಸ್ಯರು ಅಥವಾ ವಿದ್ಯಾರ್ಥಿಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ ಅಪಾಯಕಾರಿ ನಿರ್ಧಾರಗಳು ಅಥವಾ ಸಮಸ್ಯೆಗಳನ್ನು ಮಾಡಿ ಕೊಳ್ಳುವ ಆತಂಕವಿದೆ.

ಭಾರತೀಯ ಸಂವಿಧಾನದ 21 ನೇ. ವಿಧಿ (ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಹಾಗೂ ಮಾನವ ಹಕ್ಕುಗಳಿಗೆ ವಿರುದ್ಧವಾದ ಇಂತಹ ನಡೆಗಳನ್ನು ತಡೆಯಲು ಸರ್ಕಾರ ತಕ್ಷಣ ಕ್ರಮ ವಹಿಸಬೇಕು, ಮನೆಗಳ ಮೇಲೆ ದಬ್ಬಾಳಿಕೆ ನಡೆಸುವ ಆದೇಶಗಳನ್ನು ರದ್ದು ಗೊಳಿಸಿ ವಿದ್ಯಾರ್ಥಿಗಳು ಮತ್ತು ಉಳಿದ ಪ್ರಜೆಗಳು ನೆಮ್ಮದಿಯಿಂದ, ಘನತೆಯಿಂದ ಬದುಕುವ ವಾತಾವರಣ ನಿರ್ಮಿಸಬೇಕು ಮತ್ತು ಸಾರ್ವಜನಿಕರಿಗೆ ಸಹಕರಿಸಬೇಕು ಎಂಬುದು ಪ್ರಜ್ಞಾವಂತರ ಒಕ್ಕೊರಲ ಆಗ್ರಹವಾಗಿದೆ.

🚨 ನ್ಯಾಯಾಲಯವೇ ಅಂತಿಮ:-

ಪೂರ್ವಭಾವಿಯಾಗಿ ಅಪರಾಧಿ ಪಟ್ಟ ಕಾನೂನು ಬಾಹಿರವೇ?

🚨ಬ್ರೇಕಿಂಗ್:-

ಸತ್ಯಾ ಸತ್ಯತೆಯನ್ನು ನಿರ್ಧರಿಸುವ ಅಂತಿಮ ಅಧಿಕಾರ ನ್ಯಾಯಾಲಯಕ್ಕೆ ಮಾತ್ರ ಇದೆ, ಸರ್ಕಾರಕ್ಕಾಗಲಿ ಅಥವಾ ಪೊಲೀಸ್ ಇಲಾಖೆಗಾಗಲಿ ಇಲ್ಲ. ನ್ಯಾಯಾಲಯದ ವಿಚಾರಣೆ ಮತ್ತು ತೀರ್ಪು ಬರುವ ಮೊದಲೇ ಒಬ್ಬ ವ್ಯಕ್ತಿಯನ್ನು ‘ಅಪರಾಧಿ’ ಎಂದು ನಿರ್ಧರಿಸುವುದು ಅಥವಾ ಸಮಾಜದ ಮುಂದೆ ಅಪರಾಧಿಯಂತೆ ಬಿಂಬಿಸುವುದು ಕಾನೂನು ಬಾಹಿರ ಮತ್ತು ನೈಸರ್ಗಿಕ ನ್ಯಾಯದ ತತ್ವಕ್ಕೆ ವಿರುದ್ಧವಾಗಿದೆ. ಆರೋಪ ಸಾಬೀತಾಗುವ ವರೆಗೆ ಪ್ರತಿಯೊಬ್ಬರೂ ಕಾನೂನಿನ ದೃಷ್ಟಿಯಲ್ಲಿ ನಿರಪರಾಧಿಗಳಾಗಿದ್ದು, ಇಂತಹ ಕಾನೂನು ಬಾಹಿರ ಧೋರಣೆಗಳನ್ನು ತಡೆಯುವುದು ಅತ್ಯಗತ್ಯ.

🚨 ರೌಡಿ ವರ್ತನೆ, ಮಾಧ್ಯಮ ಪ್ರದರ್ಶನ ಮತ್ತು ಸಾರ್ವಜನಿಕ ವಿರೋಧ:-

ಕ್ರಮ ಯಾವಾಗ?

🚨ಬ್ರೇಕಿಂಗ್:-

ಪೊಲೀಸ್ ಇಲಾಖೆಯೊಳಗೆ ಭ್ರಷ್ಟಾಚಾರ, ಅಕ್ರಮ ಆಸ್ತಿ ಸಂಪಾದನೆ ಅಥವಾ ರೌಡಿಗಳಂತೆ ವರ್ತಿಸುವ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳುವ ಬದಲು, ಕೆಲವು ಅಧಿಕಾರಿಗಳು ಮಾಧ್ಯಮಗಳನ್ನು ಬಳಸಿ ಕೊಂಡು ಶಕ್ತಿ ಪ್ರದರ್ಶನ ಮತ್ತು ಹೈಡ್ರಾಮಾ ಮಾಡುತ್ತಿದ್ದಾರೆ ಎಂಬ ಆರೋಪಗಳ ಬಗ್ಗೆ ತೀವ್ರ ಸಾರ್ವಜನಿಕ ವಿರೋಧ ವ್ಯಕ್ತವಾಗುತ್ತಿದೆ.

ಮಾಧ್ಯಮಗಳ ಎದುರು ಪ್ರದರ್ಶನ ನೀಡುವ ಮತ್ತು ಅಧಿಕಾರ ದುರುಪಯೋಗ ಪಡಿಸಿ ಕೊಳ್ಳುವ ಅಧಿಕಾರಿಗಳ ವಿರುದ್ಧ ಯಾವಾಗ ಕಠಿಣ ಕ್ರಮ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಪ್ರಮುಖವಾಗಿ ಮೂಡುತ್ತಿದೆ.

ಸಂವಿಧಾನಾತ್ಮಕ ಹಕ್ಕುಗಳ ರಕ್ಷಣೆ, ಪಾರದರ್ಶಕ ತನಿಖೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡಬೇಕು ಎಂಬುದು ನಾಗರಿಕರು, ಪ್ರಜ್ಞಾವಂತರು, ಹೋರಾಟಗಾರರು ಮತ್ತು ಮಾಧ್ಯಮ ವಲಯದ ಒಕ್ಕೊರಲು ಒತ್ತಾಯವಾಗಿದೆ.

ವರದಿ:ಸಂಪಾದಕರು ಮಾರುತಿ ಬಿ.ಹೊಸಮನಿ, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button