ಶ್ರೀಶಾರದಾಶ್ರಮದಲ್ಲಿ ಡಿಸೆಂಬರ್ 1 ರಿಂದ 5 ರ ವರೆಗೆ “ಗರುಡ ಪುರಾಣ” – ಪ್ರವಚನ ಮಾಲಿಕೆ.
ಚಳ್ಳಕೆರೆ ನ.26




ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಡಿಸೆಂಬರ್ 1 ರಿಂದ 5 ರ ವರೆಗೆ ಪ್ರತಿ ದಿನ ಸಂಜೆ 5.30 ರಿಂದ 6.15 ರ ವರೆಗೆ ಭಜನೆ, ಆರತಿ ಮತ್ತು 6.15 ರಿಂದ 7.30 ರ ವರೆಗೆ ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪೂಜ್ಯ ಡಾ, ವೈ ರಾಜಾರಾಮ್ ಗುರುಗಳಿಂದ “ಗರುಡ ಪುರಾಣ”ದ ಬಗ್ಗೆ ವಿಶೇಷ ಪ್ರವಚನ ಮಾಲಿಕೆಯನ್ನು ಏರ್ಪಡಿಸಲಾಗಿದ್ದು.

ಭಕ್ತರು ಮತ್ತು ಸಾರ್ವಜನಿಕರು ಸತ್ಸಂಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ತ್ಯಾಗಮಯೀ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

