ರಾಯಚೂರು ಜಿಲ್ಲಾ ಸ್ಕೌಟ್ ಮತ್ತು ಗೈಡ್ಸ್, ಜಿಲ್ಲಾ ಸಂಸ್ಥೆಯ – ಜಿಲ್ಲಾ ವಾರ್ಷಿಕ ಸಭೆ.
ರಾಯಚೂರು ಅ.26


ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಯಚೂರು ವತಿಯಿಂದ ಶ್ರೀ ಬಸವರಾಜ ಬೋರೆಡ್ಡಿ ಜಿಲ್ಲಾ ಮುಖ್ಯ ಆಯುಕ್ತರು ರವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪರಿಷತ್ ಸಭೆಯನ್ನು ಜಿಲ್ಲಾ ಸ್ಕೌಟ್ ಭವನ ರಾಯಚೂರು ಇಲ್ಲಿ ಆಯೋಜನೆ ಮಾಡಲಾಯಿತು.
ಶ್ರೀ ಶಶಿಕಾಂತ್ ದೇಸಾಯಿ ರಾಜ್ಯ ಪರಿಷತ್ ಸದಸ್ಯರು (ಸ್ಕೌ) ರವರು ಎಲ್ಲರನ್ನೂ ಸ್ವಾಗತಿಸಿದರು ತದನಂತರ ಶ್ರೀ ಮಲ್ಲಿಕಾರ್ಜುನ ಹಲ್ಲೂರೆ ಜಿಲ್ಲಾ ಖಜಾಂಚಿಗಳು ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ತದನಂತರ ಶ್ರೀ ಬಸಪ್ಪ ಗದ್ದಿ ಜಿಲ್ಲಾ ಕಾರ್ಯದರ್ಶಿಗಳು ರವರು 2024-25 ನೇ. ವಾರ್ಷಿಕ ವರದಿ ಮತ್ತು ಆಯವ್ಯಯವನ್ನು ಮಂಡಿಸಿದರು ಹಾಗೂ 2025-26 ನೇ. ಕಾರ್ಯಕ್ರಮ, ಚಟುವಟಿಕೆಗಳು, ಶಿಬಿರಗಳು ಕುರಿತು ಚರ್ಚಿಸಲಾಯಿತು.
ಇದೇ ಸಂದರ್ಭದಲ್ಲಿ ಶ್ರೀ ರುದ್ರಪ್ಪ ಅಂಗಡಿ ಜಿಲ್ಲಾ ಸ್ಥಾನೀಕ ಆಯುಕ್ತರು (ಸ್ಕೌ), ಶ್ರೀ ಹನುಮಂತಪ್ಪ ಗವಾಯಿ ಪೋಷಕರು/ನಿವೃತ್ತ ಜಿಲ್ಲಾ ಶಿಕ್ಷಣಾಧಿಕಾರಿಗಳು ರಾಯಚೂರು, ಶ್ರೀಮತಿ ರೂಪಾ ಉಪಾಧ್ಯಕ್ಷರು, ಡಾ, ಪ್ರಾಣೇಶ್ ಕುಲಕರ್ಣಿ ಜಿಲ್ಲಾ ಆಯುಕ್ತರು (ರೋ), ಶ್ರೀ ರಮೇಶ ಜೈನ್ ಅಜೀವ ಸದಸ್ಯರು, ಶ್ರೀ ಎನ್.ಶೇಖರ್ ಕಾರ್ಯದರ್ಶಿಗಳು, ಸಹಾಯಕ ಆಯುಕ್ತರುಗಳಾದ ಶ್ರೀ ಮಲ್ಲಯ್ಯ ರಾಯಚೂರು, ಶ್ರೀ ಮಲ್ಲನಗೌಡ ಮಾನ್ವಿ, ಶ್ರೀ ನಾಗಪ್ಪ ಹೊರಪ್ಯಾಟೆ, ಡಾ, ಪ್ರಶಾಂತ್ ಕುಮಾರ್ RSL, ಶ್ರೀ ವೈ.ನರಸಿಂಹ RSL, ಶ್ರೀ ಶಿವಮೂರ್ತಿ ಸ್ಕೌಟ್ ಮಾಸ್ಟರ್, ಯುವ ಸಮಿತಿಯ ಅಧ್ಯಕ್ಷರು ಕು.ಶಾಂತಮ್ಮ, ಸದಸ್ಯರುಗಳಾದ ಕು. ಸೋಮಶೇಖರ,ಕು.ರಕ್ಷಿತಾ, ಕು. ಕಿರಣ್ ಕುಮಾರ್ ರವರು ಉಪಸ್ಥಿತರಿದ್ದರು.ಶ್ರೀ ಅಂಬಣ್ಣ ನಾಯಕ ಸಂಘಟಕರು ಸಭೆಯನ್ನು ನಿರೂಪಿಸಿ ವಂದಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

