ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ, ದೇಶ ದ್ರೋಹಿ ಸಚಿವ ಅಮಿತ್ ಶಾ ರನ್ನು ಸಚಿವ ಸ್ಥಾನದಿಂದ ವಜಾ ಗೊಳಿಸಿಲು – ಸಂಘಟನಾ ಕಾರ್ಯಕರ್ತರ ಒತ್ತಾಯ.
ಕೂಡ್ಲಿಗಿ ಜ.10

ಸಂವಿಧಾನ ಶಿಲ್ಪಿ ಭಾರತ ರತ್ನ ಡಾ, ಬಿ.ಆರ್ ಅಂಬೇಡ್ಕರ್ ರವರನ್ನು ಅವಮಾನಿಸಿ ಅವಹೇಳನ ಹಾಗೂ ಹಗುರವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಒಬ್ಬ ದೇಶ ದ್ರೋಹಿ ಈತನನ್ನು ಕೇಂದ್ರ ಸಚಿವ ಸಂಪುಟ ದಿಂದ ವಜಾ ಗೊಳಿಸಿ ಎಂದು ರಾಜ್ಯದ ವಿಜಯನಗರ ಜಿಲ್ಲೆಯ ಸಂವಿಧಾನ ಸಂರಕ್ಷಣಾ ಸಮಿತಿ ಹಾಗೂ ವಿವಿಧ ದಲಿತಪರ, ಪ್ರಗತಿಪರ ಸಂಘಟನೆಗಳು ಸೇರಿ ಬಂದ್ ಮಾಡುವ ಮೂಲಕ ಅಮಿತ್ ಶಾ ಹೇಳಿಕೆ ಖಂಡಿಸಿ ಇಂದು ಕೂಡ್ಲಿಗಿಯಲ್ಲಿ ನಡೆದ ಬಂದ್ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರು ಮಾತನಾಡಿ ಕೂಡ್ಲಿಗಿ ತಹಸೀಲ್ದಾರ್ ಎಂ.ರೇಣುಕಾ ಅವರ ಮುಖೇನಾ ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ಹಾಗೂ ಲೋಕಸಭಾ ಸ್ಪೀಕರ್ ಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ಇಂದು ಬೆಳಿಗ್ಗೆ ಯಿಂದ ಸಂಜೆವರೆಗೂ ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಹತ್ತು ಹಲವಾರು ಸಂಘಟನೆಗಳ ಸಹ ಭಾಗೀತ್ವದಲ್ಲಿ ಸಂಪೂರ್ಣ ಬಂದ್ ಮಾಡಿ ಯಶಸ್ವಿ ಗೊಳಿಸಲಾಯಿತು.ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಕೂಡ್ಲಿಗಿ ತಾಲೂಕು ಸಮಿತಿಯ ಸದಸ್ಯ ಸಂಘಟನೆಗಳಾದ ಕೂಡ್ಲಿಗಿ ತಾಲೂಕು ಡಾ, ಬಿ.ಆರ್ ಅಂಬೇಡ್ಕರ್ ಸಂಘ (ರಿ) ಅಖಿಲ ಭಾರತ ವೀರಶೈವ ಮಹಾಸಭಾ, ಬೀದಿ ಬದಿ ವ್ಯಾಪಾರಸ್ಥರ ಸಂಘ, ವಾಲ್ಮೀಕಿ ಯುವ ವೇದಿಕೆ, ಛಲವಾದಿ ಮಹಾಸಭಾ, ದಲಿತ ಹಕ್ಕುಗಳ ಸಮಿತಿ, (ಡಿ.ಹೆಚ್.ಎಸ್.) ವಕೀಲರ ಸಂಘ, ಮಾದಿಗ ದಂಡೋರ ಸಂಘಟನೆ,ಆಟೋ ಚಾಲಕರ ಸಂಘ ಯಾದವ ಸಮಾಜ, ದಲಿತ ಸಂಘರ್ಷ ಸಮಿತಿ, ಅಖಿಲ ಕರ್ನಾಟಕ ರಾಜ್ಯ ಕಿಸಾನ್ ಜಾಗೃತಿ ಸಂಘ, ಜನವಾದಿ ಮಹಿಳಾ ಸಂಘಟನೆ, ಕರ್ನಾಟಕ ಮುಸ್ಲಿಂ ಸಂಘಟನೆಗಳು, ಅಂಬೇಡ್ಕರ್ ಸೇವಾ ಸಮಿತಿ, ಬುಡ್ಗ ಹಾಗೂ ಅಲೆಮಾರಿ ಸಮಾಜ ಸಂಘ, ಕರ್ನಾಟಕ ಮಾನವ ಬಂಧುತ್ವ ವೇದಿಕೆ, ಕೂಡ್ಲಿಗಿ ತಾಲೂಕು ಪ್ರಗತಿಪರ ಸಂಘಟನೆಗಳ ಒಕ್ಕೂಟ, ಬುದ್ಧ ಬಸವ ಅಂಬೇಡ್ಕರ್ ಜನಪರ ವೇದಿಕೆ, ಭೀಮವಾದ ದಲಿತ ಸಂಘರ್ಷ ಸಮಿತಿ, ವಿಜಯನಗರ ಜಿಲ್ಲಾ ಅಹಿಂದ ಸಂಘಟನೆಗಳ ಒಕ್ಕೂಟ, ಅಹಿಂದ ಯುವ ವೇದಿಕೆ, ಅಲೆಮಾರಿ ಸಮುದಾಯಗಳ ಒಕ್ಕೂಟ, ಡಿ.ವೈ.ಎಫ್.ಐ ಸಂಘಟನೆ, ಎಸ್.ಎಫ್.ಐ. ಸಂಘಟನೆ, ಸಿ.ಐ.ಟಿ.ಯು, ಸಂಘಟನೆ, ವಿಶೇಷ ಚೇತನರ ಸಂಘಟನೆಗಳು, ಕೂಡ್ಲಿಗಿ ತಾಲೂಕು ಕಟ್ಟಡ ಕಾರ್ಮಿಕರ ಸಂಘ, ಕೂಡ್ಲಿಗಿ ತಾಲೂಕು ಹಿಂದುಳಿದ ವರ್ಗಗಳ ಒಕ್ಕೂಟ. ಕೂಡ್ಲಿಗಿ ತಾಲೂಕಿನ ಸರ್ವ ಡಾ, ಬಿ.ಆರ್ ಅಂಬೇಡ್ಕರ್ ಯುವಕ ಸಂಘಗಳು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಎಲ್ಲಾ ಬಣಗಳು ಇನ್ನಿತರ ಹಲವಾರು ಸಂಘಟನೆಗಳ ಬೆಂಬಲ ಸಹ ಭಾಗೀತ್ವದಲ್ಲಿ ನಾಳೆ ಬೆಳಿಗ್ಗೆ 6:00 ರಿಂದ ಸಂಜೆ 6:00ರ ವರೆಗೆ ಬಂದ್ ಕರೆ ನೀಡಿದ್ದು ಪಟ್ಟಣದ ಮಹಾತ್ಮ ಗಾಂಧಿಜೀ ಚಿತಾ ಭಸ್ಮ ಹುತಾತ್ಮರ ಸ್ಮಾರಕದಿಂದ ಆರಂಭವಾಗಿ ಮದಕರಿ ನಾಯಕ ವೃತ್ತದಲ್ಲಿ ಮೆರವಣಿಗೆಯನ್ನು ಸಮಾವೇಶ ಗೊಳಿಸಲಾಯಿತು.ಭಾರತದ ಸಂವಿಧಾನದ ಅಡಿಯಲ್ಲಿ ಸಂಸದರಾಗಿ ಕೇಂದ್ರ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಅಮಿತ್ ಶಾ ಅವರು 2024 ರ ಡಿಸೇಂಬರ್ 17 ರಂದು ರಾಜ್ಯ ಸಭೆಯಲ್ಲಿ ಭಾಷಣ ಮಾಡುವಾಗ ಭಾರತ ಸಂವಿಧಾನದ ಪಿತಾಮಹಾ ಡಾ, ಬಿ.ಆರ್ ಅಂಬೇಡ್ಕರ್ ಅವರ ಬಗ್ಗೆ ಅವಹೇಳನವಾಗಿ ಮತ್ತು ಹಗುರವಾಗಿ ಮಾತನಾಡಿರುವುದು ಅತ್ಯಂತ ಖೇದಕರ ಈ ಘಟನೆಯನ್ನು ಭಾರತೀಯರಾದ ನಾವೆಲ್ಲರು ಖಂಡಿಸುತ್ತೇವೆ.

ಈ ದೇಶದ ಸಂವಿಧಾನ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ರವರ ಬಗ್ಗೆ ಯಾರೇ ಮಾತನಾಡಿದರು ಅದು ಅಕ್ಷಮ್ಯ ಅಪರಾಧ “ಅಧುನಿಕ ಭಾರತದ ಪಿತಾಮಹ ಅಂಬೇಡ್ಕರ್” ಇವರಿಲ್ಲದ ಭಾರತವನ್ನು ಕಲ್ಪಿಸಿ ಕೊಳ್ಳುವುದು ಅಸಾಧ್ಯ. ಭಾರತ ದೇಶದ ಆದೆಷ್ಟೋ ದಲಿತ, ದಮನಿತ, ಶೋಷಿತ, ಅಲ್ಪಸಂಖ್ಯಾತ, ತಳ ಸಮುದಾಯದ ಹಾಗೂ ಹಿಂದುಳಿದ ಬಹುಜನರಿಗೆ ಈ ದೇಶದ ಸಂಪನ್ಮೂಲದ ಮೇಲೆ ಹಕ್ಕು ಮಾತನಾಡುವ ಹಕ್ಕು, ಪ್ರತಿಭಟಿಸುವ ಹಕ್ಕು ಪ್ರಶ್ನಿಸುವ ಹಕ್ಕು ಪ್ರತಿರೋಧಿಸುವ ಹಕ್ಕು ಶಿಕ್ಷಣದ ಹಕ್ಕು ಉದ್ಯೋಗದ ಹಕ್ಕು ಆಹಾರದ ಹಕ್ಕು ಮತದಾನದ ಹಕ್ಕು ಮಹಿಳಾ ಸ್ವಾತಂತ್ರ್ಯದ ಹಕ್ಕು ಹೀಗೆ ಒಂದೇ ಎರಡೇ ನೂರಾರು ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿ ಸಮಾನತೆ ಸಹೋದರತೆ ಹಾಗೂ ಮಾನವೀಯತೆಯ ಸಂದೇಶ ಸಾರುವ ವಿಶ್ವದ ಏಕೈಕ ಲಿಖಿತ ಸಂವಿಧಾನವನ್ನು ನೀಡಿರುವ ಬಾಬಾ ಸಾಹೇಬರ ಬಗ್ಗೆ ಅವಹೇಳನಕಾರಿ ಮಾತನಾಡಿದ ಅಮಿತ್ ಶಾ ಇವನನ್ನು ಕೇಂದ್ರ ಸಂಪುಟ ದಿಂದ ತಕ್ಷಣವೇ ವಜಾ ಗೊಳಿಸಿ ಸಂಸದ ಸ್ಥಾನದಿಂದ ಅನರ್ಹ ಗೊಳಿಸುವಂತೆ ಸಂಘಟನೆಯ ಪ್ರಮುಖ ಸಂಘಟಕರು ಮಾತನಾಡುತ್ತಾ ಒತ್ತಾಯಿಸಲಾಯಿತು. ಉರಿ ಬಿಸಿಲನ್ನು ಲೆಕ್ಕಿಸದೆ ಪ್ರತಿಭಟನಕಾರರು ಅಮಿತ್ ಶಾ ವಿರುದ್ಧ ಪ್ರತಿಭಟಿಸಿದರು ಈ ಸಂದರ್ಭದಲ್ಲಿ 80 ಕ್ಕೂ ಹೆಚ್ಚು ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮೋದಿಗೆ ಸವಾಲು :- ದೇಶದ ಶ್ರೀಮಂತರಲ್ಲಿ ಕೆಲವರಾಗಿರುವ ಅಂಬಾನಿ ಅದಾನಿ ಅವರಿಗೆ ಉನ್ನತ ಸ್ಥಾನ ನೀಡಿ ಬೆಂಬಲ ಬೆಲೆ ಕೇಳಲು ಬಂದ ದೆಹಲಿಯಲ್ಲಿ ರೈತರ ಹೋರಾಟದಲ್ಲಿ ಲಾಠಿ ಪ್ರಹಾರ ಮಾಡಿಸಿದ್ದು, ಸಂವಿಧಾನ ತಿರುಚುವ ಬಗ್ಗೆ ಕಳೆದ ಬಾರಿಯ ಸಂಸದ ಅನಂತ ಕುಮಾರ ಹೆಗ್ಡೆ , ಈ ಬಾರಿ ಅಂಬೇಡ್ಕರ್ ಅನ್ನೋದು ಫ್ಯಾಷನ್ ಎನ್ನುವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ನೀಡಿರುವ ಅವರು ದೇಶ ದ್ರೋಹಿಯನ್ನು ಸಚಿವ ಸಂಪುಟದಲ್ಲಿ ಇಟ್ಟು ಕೊಂಡಿರುವುದು ತಪ್ಪು ಇವರನ್ನು ಸಂಪುಟ ದಿಂದ ಹಾಗೂ ಸಂಸದ ಸ್ಥಾನದಿಂದ ವಜಾ ಗೊಳಿಸದಿದ್ದರೆ ಉಗ್ರ ಹೋರಾಟಕ್ಕೆ ಸಜ್ಜಾಗುವುದು ಗ್ಯಾರಂಟಿ ಎಂದು ಕೂಡ್ಲಿಗಿಯಲ್ಲಿ ಸಂಘಟಕರು ಪ್ರಧಾನಿ ಮೋದಿಗೆ ಸವಾಲೆಸೆದರು. ಈ ಸಂದರ್ಭದಲ್ಲಿ ಡಿ.ಹೆಚ್ ದುರುಗೇಶ್, ದೇವರ ಮನೆ ಮಹೇಶ್, ಕಾಟೇರ ಹಾಲೇಶ್, ಗುರುಸಿದ್ದನಗೌಡ್ರು, ಸಿ.ವಿರೂಪಾಕ್ಷಪ್ಪ, ಗುನ್ನಳ್ಳಿ ರಾಘವೇಂದ್ರ, ಮಯೂರ್ ಮಂಜುನಾಥ್, ಎಲ್ಎಸ್ ಬಶೀರ್ ಅಹಮದ್, ಕುಡಿತಿನಿ ಹೆಗ್ಡಾಳ್ ಮಹೇಶ್, ಅಲ್ಲಂ ಭಾಷಾ, ಸಿ. ಮಾರಪ್ಪ, ಎಳ್ಳೇರ್ ಗಂಗಣ್ಣ, ಮೌಲಿ ಸಾಬ್, ಎಸ್.ಸುರೇಶ್, ಸುನಿಲ್ ಗೌಡ್ರು, ಶಾಮಿಯಾನ ಚಂದ್ರಪ್ಪ, ಕರವೇ ಲಕ್ಷ್ಮೀದೇವಿ, ಕರಿಬಸಮ್ಮ ಶಿಕ್ಷಕರು, ನೇತ್ರಾವತಿ, ಇನ್ನೂ ಅನೇಕ ಸಂಘಟನೆಯ ಮುಖಂಡರುಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಭಾಗವಹಿಸಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಬಿ.ಸಾಲುಮನೆ.ಕೂಡ್ಲಿಗಿ.ವಿಜಯನಗರ