ಗುಡಿಸಲಿಗೆ ಬೆಂಕಿ ತಗುಲಿ – ಅಪಾರ ಹಾನಿ.
ಲಿಂಗದಳ್ಳಿ ಜನೇವರಿ.11

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಿಂಗದಳ್ಳಿ ಗ್ರಾಮದ ಸಿದ್ದಪ್ಪ ವಾಲಿಕಾರ ಎಂಬುವರ ತೋಟದ ವಸ್ತಿ ಯಲ್ಲಿರುವ ಗುಡಿಸಲಿಗೆ ಇಂದು ದಿನಾಂಕ 11-01-2024 ರಂದು ಬೆಳಗ್ಗೆ 11 ಘಂಟೆ ಸುಮಾರಿಗೆ ಗುಡಿಸಲಿನಲ್ಲಿರುವ ದೇವರ ಜಗುಲಿಯ ಮೇಲಿನ ಉರಿಯುವ ದೀಪವು ಆಕಸ್ಮಿಕವಾಗಿ ಜಗುಲಿಯಿಂದ ಕೆಳಗೆ ಬಿದ್ದ ಕಾರಣ, ಅಲ್ಲೇ ಸಮೀಪವಿರುವ ಹಾಸಿಗೆಗೆ ಬೆಂಕಿ ತಗುಲಿ ಕೆಲವೇ ಕ್ಷಣದಲ್ಲಿ ಗುಡಿಸಲಿಗೆ ಹತ್ತಿ ಧಗ-ಧಗನೆ ದಹಿಸಿ,ಗುಡಿಸಲಿನಲ್ಲಿರುವ ರೈತನ ಐದು ಲಕ್ಷ ರೂಪಾಯಿ ಹಣ,

ಎರಡು ತೊಲೆ ಬಂಗಾರು, ಒಂದು ಚೀಲ ಮೆಣಸಿನಕಾಯಿ, ಬಂಗಾರದ ಗುಳದಾರಿ ಬೆಲೆಬಾಳುವ ವಸ್ತ್ರಾ ಭರಣಗಳು, ಇತರೆ ಕಾಗದ ಪತ್ರಗಳ ದಾಖಲೆಗಳು, ಇತರೆ ಜೀವನಕ್ಕೆ ಸಂಬಂಧಿಸಿದ ವಸ್ತುಗಳನ್ನು ಸುಟ್ಟು ಕರಕಲಾಗಿವೆ. ಇದರಿಂದ ಕುಟುಂಬಸ್ಥರು ತುಂಬಾ ನೊಂದು ಕೊಂಡಿದ್ದಾರೆ.ಈ ಆಕಸ್ಮಿಕವಾಗಿ ನಡೆದ ಘಟನೆಗೆ ನೊಂದು ಕೊಂಡ ಬಡ ರೈತ ಕುಟುಂಬಕ್ಕೆ ಸರ್ಕಾರವಾಗಲಿ,ಅಥವಾ,ಧಾನಿಗಳಾಗಲಿ ಸಹಾಯ ಹಸ್ತ ನೀಡಿದರೆ ನೊಂದ ಕುಟುಂಬಕ್ಕೆ ಕಣ್ಣೀರು ಒರೆಸಿ ದಂತಾಗುತ್ತದೆ ಎಂಬುದೆ ಅಲ್ಲಿಯ ಗ್ರಾಮಸ್ಥರ ಅಭಿಪ್ರಾಯವಾಗಿದೆ.
ಜಿಲ್ಲಾ ವರದಿಗಾರರು:ಶಿವಪ್ಪ.ಬಿ.ಹರಿಜನ.ಇಂಡಿ