ಸೊಸೈಟಿಯಲ್ಲಿ ವಾರ್ಷಿಕ ಸರ್ವ ಸಾಧಾರಣ – ಸಭೆ ಜರುಗಿತು.
ಯಲಗೋಡ ಸ. 24





ದೇವರ ಹಿಪ್ಪರಗಿ ಸಹಕಾರಿ ಬ್ಯಾಂಕುಗಳ ರೈತರ ಬೆನ್ನೆಲುಬುವಾಗಿ ಕೆಲಸ ಮಾಡುತ್ತವೆ ರೈತರಿಗೆ ವಿವಿಧ ಸೌಕರ್ಯಗಳನ್ನು ರಿಯಾಯಿತಿ ದರದಲ್ಲಿ ಹೊಲದಲ್ಲಿ ಮನೆ ಕಟ್ಟಡ ನಿರ್ಮಾಣ ಮಾಡುವ ಸಲುವಾಗಿ ಸಾಲ,ದ್ರಾಕ್ಷಿ ಸಾಲ ಹಾಗೂ ರಾಮದುರ್ಗ ತಾಲ್ಲೂಕಿನ ಶಿರಹಟ್ಟಿಯಲ್ಲಿ ನಮ್ಮ ಬ್ಯಾಂಕಿನ ವತಿಯಿಂದ ರೈತರು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತವೆ. ವಿವಿಧ ರೀತಿಯಲ್ಲಿ ಸಾಲ ನೀಡುತ್ತವೆ ಅದನ್ನು ರೈತರು ಉಪಯೋಗ ಪಡೆಯಬೇಕು ಎಂದು ಪಿ.ಕೆ.ಪಿ.ಎಸ್ ಅಧ್ಯಕ್ಷರು ಹಾಗೂ ಈ ಸಭೆಯ ಅಧ್ಯಕ್ಷರಾದ ಸಾಯಬಣ್ಣ ಬಾಗೇವಾಡಿ ಯವರು ಹೇಳಿದರು.

ದೇವರಹಿಪ್ಪರಗಿ ತಾಲ್ಲೂಕಿನ ಯಲಗೋಡ ಗ್ರಾಮದಲ್ಲಿ ಇಂದು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ ೨೦೨೪/೨೫ ನೇ. ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭ ನಡೆಯಿತು. ಈ ಸಹಕಾರಿ ಬ್ಯಾಂಕಿನ ವಾರ್ಷಿಕ ಸಭೆಯಲ್ಲಿ ಲಾಭ ನಷ್ಟ ಖರ್ಚಿನ ಬಗ್ಗೆ ಸಹ ವಿಸ್ತಾರವಾಗಿ ಮಾಹಿತಿ ರೈತರಿಗೆ ನೀಡಿದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಮಡಿವಾಳಪ್ಪ ಹಿಕ್ಕನಗುತ್ತಿ ಯವರು ತಿಳಿಸಿದರು. ಹಾಗೂ ಈ ಸಭೆ ಯಲ್ಲಿ ಕ್ಷೇತ್ರಾಧಿಕಾರಿಗಳಾದ ಎನ್.ಜಿ ಬಿರಾದಾರ, ನಿರ್ದೇಶಕರಾದ ಬಾಬು ಕ್ಯಾತನಾಳ ಇವರು ಬ್ಯಾಂಕಿನ ಸವಲತ್ತುಗಳ ಬಗ್ಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ಬಸವರಾಜ ಇಂಗಳಗಿ ನಿರ್ದೇಶಕರಾದ ರಾಜಶೇಖರಗೌಡ ಪಾಟೀಲ ಶಿವಶಂಕರ ಬೂದಿಹಾಳ ರಾಜಪಟೇಲ ಮುಚಖೇಡ ಜೆಟ್ಟೇಪ್ಪ ಕೆಂಭಾವಿ ಶಿವಪುತ್ರ ಬೂದಿಹಾಳ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರ ಪ್ರತಿನಿಧಿಯಾದ ಚಂದ್ರಶೇಖರ ಅಸ್ಕಿ, ರೈತರಾದ ಮಂಜುನಾಥ ಕೆಂಭಾವಿ ಹಳ್ಳೇಪ್ಪ ಭೂರಗಿ ಶೇಖಪ್ಪ ಹಿರೇಕುರಬರ, ಮಹಾದೇವಪ್ಪಗೌಡ ದಂಡಪ್ಪಗೌಡ ಕರಮೀಸಾ ಕುರಿಕಾಯಿ ಬಸಪ್ಪ ಇಂಗಳಗಿ ಅಣ್ಣಪ್ಪ ತೋಟದ ಹಾಗೂ ಹಾಗೂ ಬ್ಯಾಂಕನ ಸಿಬ್ಬಂದಿಗಳಾದ ಮುರಳಿಧರ ಕುಲಕರ್ಣಿ ಮಲ್ಲಿಕಾರ್ಜುನ ಮೊಪಗಾರ ಸಂತೋಷ ನಾಟಿಕಾರ ಬೂತಾಳಿ ಇಂಗಳಗಿ ಹಾಗೂ ವಂದಾಲ, ಕದರಾಪೂರ ಗ್ರಾಮದ ರೈತರು ಈ ಕಾರ್ಯಕ್ರಮ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾ.ದೇವರ ಹಿಪ್ಪರಗಿ