ಕೆನರಾ ಬ್ಯಾಂಕ್ ಕಳ್ಳತನ, ಮತ್ತೆ 12 ಜನರನ್ನು ಬಂಧಿಸಿ 39 ಕೆ.ಜಿ ಬಂಗಾರ – ಹಾಗೂ 1.16 ಕೋಟಿ ನಗದು ಪೋಲಿಸ್ ವಶಕ್ಕೆ.

ಮನಗೂಳಿ ಜು.11

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮನಗೂಳಿ ಕೆನರಾ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಮತ್ತೇ 12 ಜನರು ಬಂಧಿಸಲಾಗಿದೆ ಎಂದು ಬೆಳಗಾವಿ ಉತ್ತರ ವಲಯ ಐಜಿಪಿ ಚೇತನಕುಮಾರ ರಾಥೋಡ ತಿಳಿಸಿದರು. ವಿಜಯಪುರ ನಗರದಲ್ಲಿ ಸುದ್ದಿ ಗೋಷ್ಢಿಯಲ್ಲಿ ಮಾತನಾಡಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂರು ಜನರನ್ನು ಬಂಧಿಸಿ 10.75 ಕೋಟಿ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿತ್ತು.

ಮೂರು ಜನರನ್ನು ಬಂಧಿಸಿ ಅವರನ್ನು ವಿಚಾರಿಸಿ ತನಿಖೆ ನಡೆಸಿ ಇಲ್ಲಿಯ ವರೆಗೆ 15 ಜನರ ಆರೋಪಿಗಳ ಬಂಧನವಾಗಿದೆ ಎಂದರು. ಬಾಲರಾಜ್ ಮಣಿಕಮ್ ಯರೆಕುಲಾ, ಚಂದನರಾಜ್ ಪಿಳ್ಳೈ, ಗುಂಡು ಜೋಸೆಫ್ ಶ್ಯಾಮಬಾಬು, ಪೀಟರ್ ಚಂದ್ರಪಾಲ್, ಇಜಾಜ್ ಧಾರವಾಡ, ಸುಸೈರಾಜ್ ಡ್ಯಾನಿಯಲ್, ಬಾಬುರಾವ್ ಮಿರಿಯಾಲ್, ಮಹಮ್ಮದ್ ಆಸೀಫ್ ಕಲ್ಲೂರ, ಅನಿಲ್ ಮಿರಿಯಾಲ್, ಮೋಹನಕುಮಾರ, ಸುಲೇಮನ್‌ವೇಸ್ಲಿ ಪಲುಕುರಿ, ಮರಿಯಾದಾಸ ಗೋನಾ ಬಂಧಿತ ಆರೋಪಿಗಳು.

ಬಂಧಿತರು ಹುಬ್ಬಳ್ಳಿ ಮೂಲದವರು. ಅಲ್ಲದೇ ಈ ಹಿಂದೆ ಮೂವರು ಆರೋಪಿಗಳ ಬಂಧನ ಮಾಡಲಾಗಿತ್ತು. ಇದೀಗ್ ಬಂಧಿತ ಆರೋಪಿಗಳಿಂದ 39 ಕೆಜಿ ಗಟ್ಟಿ ಬಂಗಾರ, 1.16 ಕೋಟಿ ನಗದು, ಕೃತ್ಯಕ್ಕೆ ಬಳಸಿದ ವಾಹನಗಳು ಸೇರಿದಂತೆ 39.26 ಕೋಟಿ ಅಧಿಕ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿಸಿದರು.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button