ಎಮ್.ಪಿ.ಎಸ್ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ – ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಜರಗಿತು.
ಕಲಕೇರಿ ಸ.09





ಶ್ರೀ ಕ್ಷೇತ್ರ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸಿಂದಗಿ. ವತಿಯಿಂದ ಕಲಕೇರಿ ವಲಯದ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿ ಕೊಂಡಿದ್ದು. ಶಾಲೆಯ ಮುಖ್ಯ ಗುರುಗಳು ವಲಯದ ಮೇಲ್ವಿಚಾರಕರಾದ ಸಿದ್ಲಿಂಗಪ್ಪ ಪಾಟೀಲ್ ಸರ್ ಸೇವಾ ಪ್ರತಿನಿಧಿ ಸ್ವಪ್ನ ಮಾದರ ಸವಿತಾ ಮನಗೂಳಿ ಒಕ್ಕೂಟ ಅಧ್ಯಕ್ಷರಾದ ಪ್ರವೀಣ್ ಜಗಶೆಟ್ಟಿ ಸಂಪನ್ಮೂಲ ವ್ಯಕ್ತಿಯಾದ ಸುಧಾಕರ್ ಅಡಕಿ ಇವರು ಮಕ್ಕಳಿಗೆ ದುಷ್ಟ ಚಟಗಳಿಂದ ದೂರ ಇರಬೇಕು ಎಂದು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದರು.

ಶ್ರೀಶೈಲ ನಾಯ್ಕೋಡಿ. ಸಿ.ಆರ್.ಪಿ. ಈ ಸಂದರ್ಭದಲ್ಲಿ ಮಕ್ಕಳನ್ನು ಯಾವ ರೀತಿ ಬೆಳೆಸ ಬೇಕು ಅದು ಪಾಲಕರ ಕೆಲಸ ನಮ್ಮ ಕೆಲಸ ಎಂದು ಏಕೆ ಅಂದರೆ ಈಗಿನ ಕಾಲದ ಮಕ್ಕಳು ಅನೇಕ ದುಷ್ಟ ಚಟಗಳನ್ನು ಮಾಡಿ ತಮ್ಮ ಆರೋಗ್ಯಗಳನ್ನು ಹಾಳು ಆಗಬಾರದು ದುಷ್ಟ ಚಟಗಳಿಂದ ದೂರ ಇರಬೇಕು.

ಒಳ್ಳೆಯ ಪದಾರ್ಥಗಳನ್ನು ನಾವು ಊಟ ಮಾಡಬೇಕು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಜೆ.ಬಿ ಕುಲಕರ್ಣಿ ಶಾಲೆಯ ಮುಖ್ಯ ಗುರುಗಳು. ಎಸ್.ಟಿ ಕೋಳೂರು ಮೇಡಂ. ಹಾಗೂ ಸಜ್ಜನ್ ಮೇಡಂ. ಹಾಗೂ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು. ಸಿಹಿ ಕಹಿ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ. ಮನಗೂಳಿ.ತಾಳಿಕೋಟೆ