ದಾವಣಗೆರೆ ತಾಲೂಕಿನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ – ಮಿಂದೆದ್ದ ಗಾನ ಗಾರುಡಿಗರು ಹನುಮಂತ ನಾಯ್ಕ್ ಹಾಗೂ ಸಿ.ಎಚ್ ಶ್ರೋತೃಗಳಿಂದ ಪ್ರಶಂಸನೀಯ.
ನಾಗರಕಟ್ಟೆ ಜ.18

ದಾವಣಗೆರೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಗರಕಟ್ಟೆಯ ಗಾನ ಕೋಗಿಲೆ ಹನುಮಂತ ನಾಯ್ಕ ಸಿ ಹಾಗೂ ಚಿನ್ನ ಸಮುದ್ರದ ಗಾನ ಗಾರುಡಿಗ ಉಮೇಶ್ ನಾಯ್ಕ್ ಇವರ ಸುಗಮ ಸಂಗೀತಕ್ಕೆ ಮನಸೋತ ಶ್ರೋತೃಗಳು.

ದಿನಾಂಕ 18/01/2026 ರಂದು ದಾವಣಗೆರೆಯ ಹಿರೇ ತೊಗಲೇರಿ ಗ್ರಾಮದಲ್ಲಿ ಆಯೋಜಿಸಲಾದ ದಾವಣಗೆರೆ ತಾಲ್ಲೂಕು 12 ನೇ. ಕನ್ನಡ ಸಾಹಿತ್ಯ ಸಮ್ಮೇಳನ–2026 ಕಾರ್ಯಕ್ರಮದ ಅಂಗವಾಗಿ ಇಂದು ನಡೆದ ಸುಗಮ ಸಂಗೀತ ಕಾರ್ಯಕ್ರಮ ಶ್ರೋತೃಗಳ ಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ನಾಗರಕಟ್ಟೆಯ ಗಾನ ಕೋಗಿಲೆ ಹನುಮಂತ ನಾಯ್ಕ ಸಿ ಹಾಗೂ ಚಿನ್ನಸಮುದ್ರದ ಜಾನಪದ ಗಾರುಡಿಗ ಉಮೇಶ್ ನಾಯ್ಕ ಸಿ.ಎಚ್ ಅವರು ಸುಗಮ ಸಂಗೀತವನ್ನು ಮನ ಮುಟ್ಟುವ ರೀತಿಯಲ್ಲಿ ನಡೆಸಿ ಕೊಟ್ಟರು. ಕನ್ನಡ ನಾಡು–ನುಡಿಯ ಘನತೆ, ಸಾಹಿತ್ಯದ ಮೌಲ್ಯಗಳು ಹಾಗೂ ಜಾನಪದ ಸೊಗಡನ್ನು ಹೊತ್ತ ಹಾಡುಗಳು ಶ್ರೋತೃಗಳಲ್ಲಿ ವಿಶೇಷ ಸ್ಪಂದನೆ ಮೂಡಿಸಿವೆ.

ಸುಗಮ ಸಂಗೀತದ ಮೂಲಕ ಕನ್ನಡ ಸಾಹಿತ್ಯ, ಸಂಸ್ಕೃತಿ ಮತ್ತು ಜಾನಪದ ಪರಂಪರೆಯನ್ನು ಜೀವಂತವಾಗಿ ಮೂಡಿಸಿದ ಕಲಾವಿದರ ಹಾಡುಗಳಿಗೆ ಸಭೀಕ ರಿಂದ ನಿರಂತರ ಕರತಾಡನ ದೊರಕಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾಹಿತ್ಯಾಸಕ್ತರು ಮತ್ತು ಸಾರ್ವಜನಿಕರು ಕಲಾವಿದರ ಗಾಯನವನ್ನು ಹೃದಯ ಪೂರ್ವಕವಾಗಿ ಮೆಚ್ಚಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ವಾಮದೇವಪ್ಪ ಹಿರೇತೊಗಲೇರಿ. ದಾವಣಗೆರೆ ಸಂಸದರಾದ ಶ್ರೀ ಡಾ, ಪ್ರಭಾ.ಮಲ್ಲಿಕಾರ್ಜುನ ದಾವಣಗೆರೆ ಮಾಯಕೊಂಡ ಕ್ಷೇತ್ರದ ಶಾಸಕರಾದ ಶ್ರೀ ಕೆ.ಎಸ್ ಬಸವಂತಪ್ಪ ತಾಲೂಕು ಸಮ್ಮೇಳನದ ಅಧ್ಯಕ್ಷರಾದ ಶ್ರೀ ಮತಿ ಸುಮತಿ ಜಯಪ್ಪ ಹಾಗೂ ಗಣ್ಯ ಮಾನ್ಯರು ಭಾಗವಹಿಸಿದ್ದರು.
ಸಮ್ಮೇಳನದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ನಡುವೆ ಈ ಸುಗಮ ಸಂಗೀತ ಕಾರ್ಯಕ್ರಮ ವಿಶೇಷ ಆಕರ್ಷಣೆಯಾಗಿ ಮೂಡಿ, ಕನ್ನಡದ ಸಂಗೀತ ಪರಂಪರೆಯನ್ನು ಮತ್ತೊಮ್ಮೆ ಜನ ಮಾನಸಕ್ಕೆ ತಲುಪಿಸುವಲ್ಲಿ ಯಶಸ್ವಿ ಯಾಯಿತು ಎಂದು ವರದಿಯಾಗಿದೆ.

