ಶ್ರೀನರಹರಿ ಸೇವಾ ಪ್ರತಿಷ್ಠಾನ ದಿಂದ – ಡಾ, ಎಂ.ಆರ್ ಜಯರಾಮ್ ಗೆ ಸನ್ಮಾನ.
ಚಳ್ಳಕೆರೆ ನ.14

ನರಹರಿ ನಗರದ ಶ್ರೀನರಹರಿ ಸೇವಾ ಪ್ರತಿಷ್ಠಾನ ಮತ್ತು ನಾಗ ಸಿಂಹಾದ್ರಿ ಚಾರಿಟೀಸ್ ನ ಸಹಯೋಗದಲ್ಲಿ 2025 ನೇ. ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ, ಎಂ.ಆರ್ ಜಯರಾಮ್ ಅವರಿಗೆ ಅವರ ಶೈಕ್ಷಣಿಕ, ಉದ್ಯಮ ಮತ್ತು ಆಧ್ಯಾತ್ಮಿಕ ಕ್ಷೇತ್ರಗಳಲ್ಲಿನ ಸೇವೆಯನ್ನು ಗುರುತಿಸಿ ಸನ್ಮಾನ ಸಮಾರಂಭವನ್ನು ನರಹರಿ ನಗರದ ಶ್ರೀನರಹರೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಬೆಳಗ್ಗೆ 11.30 ಕ್ಕೆ ಆಯೋಜಿಸಲಾಗಿದೆ ಎಂದು ಶ್ರೀನರಹರಿ ಸದ್ಗುರು ಆಶ್ರಮದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಡಾ, ವೈ.ರಾಜಾರಾಮ್ ಗುರುಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ-ಯತೀಶ್ ಎಂ ಸಿದ್ದಾಪುರ, ಚಳ್ಳಕೆರೆ.

