ಅದ್ದೂರಿಯಾಗಿ ರಾಷ್ಟ್ರ ಹಬ್ಬ ಆಚರಿಸಿದ ಸರಕಾರಿ – ಹಿರಿಯ ಪ್ರಾಥಮಿಕ ಶಾಲೆ.
ಭರಂಪುರ ಆ.19

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಭರಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 79 ನೇ. ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಡಗರದಿಂದ ಆಚರಿಸಲಾಯಿತು.ಮಹಾನ್ ದೇಶ ಭಕ್ತರ ಛದ್ಮ ವೇಷ ಧರಿಸಿ ಗ್ರಾಮದ ಎಲ್ಲೆಡೆ ಪ್ರಭೇತ್ ಭೇರಿ ಮೂಲಕ ಹೆಜ್ಜೆ ಹಾಕಿದ ಪುಟಾಣಿ ಮಕ್ಕಳು ದೇಶ ಭಕ್ತಿಯನ್ನು ಉಬ್ಬೇರುವಂತೆ ಮಾಡಿದರು.ನಂತರ ಕಾರ್ಯಕ್ರಮ ಕುರಿತು ಮಾತನಾಡಿದ ಪರಿಶ್ರಮ ಸಂಸ್ಥೆಯ ಕಾರ್ಯದರ್ಶಿಯಾದ ಪರಶುರಾಮ್. ಎಂ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ಮಕ್ಕಳ ವಿದ್ಯೆ ಬರೀ ಅಂಕಗಳಿಗೆ ಸೀಮಿತವಾಗದೆ ಉತ್ತಮ ನಡೆ ನುಡಿ ಸಂಸ್ಕಾರ ಮಾನವೀಯ ಮೌಲ್ಯ ಕಲಿಸ ಬೇಕಾದದ್ದು ಅತ್ಯಗತ್ಯ, ಒಂದು ಕಲ್ಲನ್ನು ಕಡೆದು ಸುಂದರ ಮೂರ್ತಿ ಮಾಡಿದಂತೆ ಮಕ್ಕಳ ಓರೆ ಕೋರೆಗಳನ್ನು ತಿದ್ದಿ ಶಿಸ್ತಿಗೆ ಒಳ ಪಡಿಸಿ ಅವರನ್ನು ಸುಂದರ ಮೂರ್ತಿಯನ್ನಾಗಿ ಮಾಡುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿ ಶಿಕ್ಷಣ ಸುಧಾರಣೆಗೆ ಸ್ಥಳೀಯ ಜನ ಪ್ರತಿನಿಧಿಗಳ ಹಾಗೂ ಪೋಷಕ ವರ್ಗ ಗ್ರಾಮಸ್ಥರ ಭಾಗವಹಿಸುವಿಕೆ ಬಹು ಮುಖ್ಯ ಆ ನಿಟ್ಟಿನಲಿ ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯಗಳ ಸಮರ್ಪಕ ಜಾರಿಗೆ ಇಚ್ಚಾ ಶಕ್ತಿಯಿಂದ ಕೆಲಸ ಮಾಡಬೇಕಾದ ಅವಶ್ಯಕತೆ ಬಗ್ಗೆ ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರಾದ ನಾಗರಾಜ್, ಗ್ರಾಮದ ಹಿರಿಯರಾದ ಓಬಜ್ಜ ಕಾರ್ಮಿಕ ಇಲಾಖೆಯ ನೌಕರರಾದ ಸತೀಶ ರವರು ಮತ್ತು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ನಝೀರ್ ಸಾಬ್ ಎಸ್ ಡಿ ಎಂ ಸಿ ಸದಸ್ಯರಾದ ಬಾಲ ಸಿದ್ದಯ್ಯ, ಹನುಮಂತಪ್ಪ ಮತ್ತು ತಿಪ್ಪೇಸ್ವಾಮಿ ಉಪಸ್ಥಿತರಿದ್ದರು,ಶಾಲಾ ಪ್ರಭಾರಿ ಮುಖ್ಯ ಶಿಕ್ಷಕರಾದ ಕೆಂಚಮ್ಮ ಶಿಕ್ಷಕರಾದ ಗೀತಾ, ತಾರಮ್ಮ, ಕವಿತಾ, ಕಮಲಮ್ಮ ಹಾಗೂ ಅಡುಗೆ ತಯಾರಕರು ಉಪಸ್ಥಿತರಿದ್ದರು.ಕ್ರೀಡಾ ಚಟುವಟಿಕೆಯಲ್ಲಿ ವಿಜೇತರಾದ ಎಲ್ಲಾ ಮಕ್ಕಳಿಗೆ ಬಹುಮಾನ ನೀಡಲಾಯಿತು.ಶಿಕ್ಷಕರಾದ ಕೆಂಚಮ್ಮ ಸ್ವಾಗತಿಸಿದರು, ಗೀತಾ ನಿರೂಪಿಸಿದರು, ಶಿಕ್ಷಕಿ ಕವಿತಾ ವಂದಿಸಿದರು, ಬಂದಿರುವ ಎಲ್ಲ ಶಾಲಾ ಮಕ್ಕಳಿಗೆ ಮತ್ತು ಗ್ರಾಮಸ್ಥರಿಗೆ ಸಿಹಿ ಉಪಹಾರ ನೀಡಲಾಯಿತು ಎಲ್ಲಾರು ಸಹಕಾರದಿಂದ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.