ಸುಪ್ರೀಂಕೋರ್ಟ್ ಆದೇಶ ಜಾರಿಗೆ ಆಗ್ರಹಿಸಿ ಅಕ್ಟೋಬರ್ 3.ರಂದು ಮಾನ್ವಿ – ಬಂದ್ ಗೆ ಕರೆ.
ಮಾನ್ವಿ ಸ.28

ಒಳ ಮೀಸಲಾತಿ ಜಾರಿ ಮಾಡಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ರಾಜ್ಯ ಸರಕಾರ ಕೂಡಲೆ ಯಥಾವತ್ತಾಗಿ ಅಕ್ಟೋಬರ್ 2 ರೊಳಗೆ ಜಾರಿ ಮಾಡಬೇಕು ಇಲ್ಲವಾದರೆ ಉಗ್ರವಾಗಿ ಹೋರಾಟ ಮಾಡಬೇಕೆಂದು ಒಳ ಮೀಸಲಾತಿ ಹೋರಾಟದ ಮುಖಂಡ ಪ್ರಕಾಶ್ ಒತ್ತಾಯಿಸಿದರು.ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಒಳ ಮೀಸಲಾತಿ ಜಾರಿಗೆ ಸರಕಾರ ನಿರ್ಲಕ್ಷ್ಯ ತೋರುತ್ತಿರುವುದನ್ನು ಖಂಡಿಸಿ ಅಕ್ಟೋಬರ್ 3 ರಂದು ಮಾನ್ವಿ ಬಂದ್ ಮಾಡಲಾಗುವುದು ಎಂದರು.ಅಕ್ಟೋಬರ್ 3 ರಂದು ಶಾಂತಿಯುತವಾಗಿ ಹೋರಾಟ ನಡೆಯಲಿದ್ದು, ಶಾಲಾ ಕಾಲೇಜಿನ ಮುಖ್ಯಸ್ಥರು ಹಾಗೂ ಅಂಗಡಿ ಮಾಲಕರು ವ್ಯಾಪಾರ ವಹಿವಾಟು ಬಂದ್ ಮಾಡಬೇಕು ಎಂದು ಮನವಿ ಮಾಡಿಕೊಂಡರು.ಕಲ್ಯಾಣ ಕರ್ನಾಟಕ ಭಾಗದ 7 ಜಿಲ್ಲೆಗಳಲ್ಲಿ ಹಂತ ಹಂತವಾಗಿ ಹೋರಾಟ ನಡೆಯಲಿದ್ದು, ಅಷ್ಟರೊಳಗೆ ಒಳ ಮೀಸಲಾತಿ ಜಾರಿ ಮಾಡದಿದ್ದರೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಬಂದ್ ಹೋರಾಟ ವಿಸ್ತರಿಸಲಾಗುವುದು ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಹುಸೇನ್ ಭಾಷಾನಕ್ಕುಕದಿ.ಮಾನ್ವಿ