ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಂದ ವನಸಿರಿ ಅಮರೇಗೌಡ ಮಲ್ಲಾಪುರ – ಅವರಿಗೆ ಪ್ರಶಂಸನೀಯ ಪತ್ರ.
ರಾಯಚೂರು ಫೆ .02





ರಾಯಚೂರು ಜಿಲ್ಲೆಯಾದ್ಯಂತ ಪರಿಸರ ಚಟುವಟಿಕೆಗಳನ್ನು ಕೈಗೊಂಡು ಶಾಲಾ ಆವರಣ, ಸಂಘ ಸಂಸ್ಥೆಗಳು ಮತ್ತು ಇತರೆ ಸಾರ್ವಜನಿಕ ಪ್ರದೇಶಗಳಲ್ಲಿ ಹೆಚ್ಚಿನ ಗಿಡಗಳನ್ನು ನೆಟ್ಟು ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಿ ಪರಿಸರ ಸಮತೋಲನ ಕಾಪಾಡುವಲ್ಲಿ ಹೆಚ್ಚಿನ ಶ್ರಮ ವಹಿಸಿರುವುದು ಕಂಡು ಬಂದಿರುತ್ತದೆ. ಅರಣ್ಯ ಇಲಾಖೆಯ ಕಾರ್ಯಕ್ರಮಗಳಾದ ಕೃಷಿ ಅರಣ್ಯ ಕಾಮಗಾರಿಗಳ ಕುರಿತು ಇಲಾಖೆ ಅಧಿಕಾರಿಗಳ ಸಂಪರ್ಕ ದೊಂದಿಗೆ ರೈತ ಬಾಂಧವರಿಗೆ ಹೆಚ್ಚಿನ ಮನವರಿಕೆ ಮಾಡಿಕೊಟ್ಟು ಹೆಚ್ಚು ಹೆಚ್ಚು ಕೃಷಿ ಅರಣ್ಯ ಕಾಮಗಾರಿಗಳನ್ನು ಕೈಗೊಂಡಿರು ವುದರಲ್ಲಿ ವನಸಿರಿ ಅಮರೇಗೌಡ ಮಲ್ಲಾಪುರ ಅವರ ಪಾತ್ರ ಶ್ಲಾಘನೀಯವಾಗಿರುತ್ತದೆ. ಈ ರೀತಿಯಾಗಿ ಕಾರ್ಯ ಪ್ರವೃತ್ತರಾಗಿರುವುದು ಕಂಡು ಬಂದಿರುತ್ತದೆ.

ಆದುದರಿಂದ ಇವರ ಕಾರ್ಯಕ್ಕೆ ಅರಣ್ಯ ಇಲಾಖೆ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುವ ಮೂಲಕ ಈ ಪ್ರಶಂಸನೀಯ ಪತ್ರ ನೀಡಿ ಗೌರವಿಸಲಾಗುವುದು ಎಂದು ರಾಯಚೂರು ಉಪ ಸಾಮಾಜಿಕ ಅರಣ್ಯ ವಿಭಾಗದ ಸಂರಕ್ಷಣಾ ಅಧಿಕಾರಿಗಳಾದ ಸುರೇಶ ಬಾಬು ಅವರು ರಾಯಚೂರಿನ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳ ಕಛೇರಿಯಲ್ಲಿ ವನಸಿರಿ ಪೌಂಡೇಷನ್ ರಾಜ್ಯಾಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಹಾಗೂ ಅವರ ತಂಡದ ಸದಸ್ಯರಿಗೆ ಪ್ರಶಂಸನೀಯ ಪತ್ರ ನೀಡಿ ಗೌರವಿಸಿ ಅಭಿನಂದಿಸಲಾಯಿತು. ಈ ಸಂಧರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳಾದ ರಮೇಶ ಬಾಬು, ವನಸಿರಿ ತಂಡದ ಸದಸ್ಯರಾದ ಶಂಕರಗೌಡ ಎಲೆಕೊಡ್ಲಿಗಿ, ಗಿರಿಸ್ವಾಮಿ ಹೆಡಗಿನಾಳ, ರಾಯಚೂರ ಸಾಮಾಜಿಕ ಅರಣ್ಯ ಇಲಾಖೆ ನಾಗರಾಜ ಇದ್ದರು.