ಅನುಭವ ಮಂಟಪದ ಮೂಲ ಸಂಕಲ್ಪದ ಸಂಕೇತವೆ – ಅರಿವಿನ ಮನೆ.
ಕಲಬುರಗಿ ಸ.17

ಭಾಗ – ೧ ಹಡಪದ ಅಪ್ಪಣ್ಣ ಅವರು 12 ನೇ. ಶತಮಾನದ ಪ್ರಮುಖ ವಚನಕಾರ ಮತ್ತು ಸಮಾಜ ಸುಧಾರಕರು. ಇವರು ಬಸವಣ್ಣ ನವರ ನಿಕಟವರ್ತಿಗಳು ಹಾಗೂ ಅವರ ‘ಹಡಪ’ ಹಿಡಿದು ಕೊಳ್ಳುವ ಕಾಯಕದಲ್ಲಿದ್ದರು. “ಹಡಪ” ಎಂದರೆ (ಗುರು ಬಸವಣ್ಣ ನವರ ಮಹತ್ವದ ದಾಖಲೆಯನ್ನು) ಇಡುವ ಪೆಟ್ಟಿಗೆ. ಅಥವಾ ವೀಳ್ಯದೆಲೆ ಇಡುವ ಚೀಲ ಎಂದು ಅರ್ಥ. ಆದ್ದರಿಂದ, ಅಪ್ಪಣ್ಣ ಅವರ ಕಾಯಕದ ಹೆಸರು ‘ಹಡಪದ ಅಪ್ಪಣ್ಣ’ ಎಂದು ಪ್ರಸಿದ್ಧವಾಯಿತು.
ಜೀವನ ಮತ್ತು ಕೊಡುಗೆಗಳುಬಸವಣ್ಣನವರ ಕಾರ್ಯದರ್ಶಿ:-
ಹಡಪದ ಅಪ್ಪಣ್ಣ ಅವರು ಕಲ್ಯಾಣದಲ್ಲಿ ಬಸವಣ್ಣ ನವರ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ಬಸವಣ್ಣ ನವರ ಕಲ್ಯಾಣ ಕ್ರಾಂತಿಗೆ ಇವರ ಕೊಡುಗೆ ಅಪಾರ.
ವಚನ ಸಾಹಿತ್ಯ:-
ಅಪ್ಪಣ್ಣ ಅವರು “ಬಸವಪ್ರಿಯ ಕೂಡಲ ಚೆನ್ನಬಸವಣ್ಣ” ಎಂಬ ಅಂಕಿತನಾಮದಲ್ಲಿ ಸುಮಾರು 250 ವಚನಗಳನ್ನು ರಚಿಸಿದ್ದಾರೆ. ಅವರ ವಚನಗಳು ಸರಳ ಹಾಗೂ ನೇರವಾದ ಮಾತುಗಳಲ್ಲಿ ಸಮಾಜದ ತಪ್ಪುಗಳನ್ನು ಪ್ರಶ್ನಿಸುತ್ತವೆ. ಇವರು ಜಾತಿ, ಮತ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತಿದರು.
ಸಾಮಾಜಿಕ ಕ್ರಾಂತಿ:-
ಹಡಪದ ಅಪ್ಪಣ್ಣ ಅವರು ಕಾಯಕ ಮತ್ತು ದಾಸೋಹ ತತ್ವಗಳಿಗೆ ಬದ್ಧರಾಗಿದ್ದರು. ಯಾವುದೇ ವೃತ್ತಿಯೂ ಕೀಳಲ್ಲ, ಎಲ್ಲಾ ಕಾಯಕಗಳೂ ಸಮಾನ ಎಂದು ಅವರು ಪ್ರತಿಪಾದಿಸಿದರು.
ಪತ್ನಿ ಲಿಂಗಮ್ಮ:-
ಅವರ ಪತ್ನಿ ಲಿಂಗಮ್ಮ ಕೂಡ ಒಬ್ಬ ವಚನಕಾರ್ತಿಯಾಗಿದ್ದರು. ಅವರ ವಚನಗಳಲ್ಲೂ ಪ್ರಗತಿಪರ ಚಿಂತನೆಗಳನ್ನು ಕಾಣಬಹುದು.ಹಡಪದ ಅಪ್ಪಣ್ಣ ಅವರು ತಮ್ಮ ವಚನಗಳ ಮೂಲಕ ಸಮಾಜದಲ್ಲಿ ಸಮಾನತೆ ಮತ್ತು ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ಶ್ರಮಿಸಿದ ಮಹಾನ್ ವ್ಯಕ್ತಿ. ಅವರ ಆದರ್ಶಗಳು ಇಂದಿಗೂ ಸಮಾಜಕ್ಕೆ ಪ್ರಸ್ತುತವಾಗಿವೆ. ಹಡಪದ ಅಪ್ಪಣ್ಣ ನವರ ಇತಿಹಾಸ ಕುರಿತು ಅನೇಕ ಸಾಹಿತಿಗಳು ಲೇಖಕರು ಡಾ, ಎಲ್ ಬಸವರಾಜ ಮತ್ತು ಡಾ, ಬಿ.ಆರ್ ಅಣ್ಣೀಗೇರಿ ಅವರು ತಮ್ಮ ವಚನ ಸಾಹಿತ್ಯದಲ್ಲಿ ವಿಶ್ಲೇಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಡಾ, ಬಿ.ಆರ್ ಅಣ್ಣೀಗೇರಿ ಅವರು ಶರಣ ನಿಜಸುಖಿ ಹಡಪದ ಅಪ್ಪಣ್ಣ ನಂತಹ ಶರಣರ ಬಗೆಗಿನ ತಮ್ಮ ಅಧ್ಯಯನಗಳನ್ನು ಪ್ರಕಟಿಸಿದ್ದಾರೆ. ಈ ರೀತಿಯ ಇತಿಹಾಸದ ಬಗ್ಗೆ ತಿಳಿಸಿದ ವಚನ ಸಾಹಿತಿಗಳಿಗೆ ಹಾಗೂ ಅಧ್ಯಯನ ಮಾಡಿ ಸಂಶೋಧನಾ ಪ್ರಬಂಧಗಳು ರಚಿಸಿದ ಲೇಖಕರಿಗೆ ಹೃತ್ಪೋರ್ವಕ ಅನಂತ ಧನ್ಯವಾದಗಳು ತಿಳಿಸಿದರು. ರಾಜ್ಯ ಹಡಪದ ಅಪ್ಪಣ್ಣ ಸಮಾಜದ ಮಾಜಿ ಸಂಘಟನಾ ಕಾರ್ಯದರ್ಶಿ ಬಸವರಾಜ ಹಡಪದ ಹಳ್ಳಿ. ಕಲಬುರಗಿ ಜಿಲ್ಲೆಯ ಗೌರವಾಧ್ಯಕ್ಷರು ಬಸವರಾಜ ಹಡಪದ ಸುಗೂರ ಮತ್ತು. ಕಲಬುರಗಿ ಜಿಲ್ಲೆಯ ಅಧ್ಯಕ್ಷರು ಈರಣ್ಣ ಸಿ ಹಡಪದ ಸಣ್ಣೂರ. ಮತ್ತು ಕಲಬುರಗಿ ಜಿಲ್ಲೆಯ ಕಾರ್ಯಾಧ್ಯಕ್ಷರು ಭಗವಂತ ಹಡಪದ ಶಿಕ್ಷಕರು ಕಿರಣಗಿ. ಕಲಬುರಗಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ರಮೇಶ್ ಹಡಪದ ನೀಲೂರ. ಕಲಬುರಗಿ ಜಿಲ್ಲೆಯ ಉಪಾಧ್ಯಕ್ಷ – ರುದ್ರಮಣಿ ಅಪ್ಪಣ್ಣ ಬಟಗೇರಾ. ಮಹಾಂತೇಶ ಇಸ್ಲಾಂಪೂರೆ. ಹಾಗೂ ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಮತ್ತು ಆನಂದ ಖೇಳಗಿ. ಕಲಬುರಗಿ ಜಿಲ್ಲೆಯ ಸಹ ಕಾರ್ಯದರ್ಶಿ ಮಹಾದೇವ ರಾವೂರ ಮತ್ತು ನಿಂಗಣ್ಣಾ ಯಾತನೂರ. ಕಲಬುರಗಿ ಜಿಲ್ಲೆಯ ಸಹ ಸಂಘಟನಾ ಕಾರ್ಯದರ್ಶಿ ಸಂತೋಷ ಬಗದುರಿ. ಮಲ್ಲಿಕಾರ್ಜುನ ಹಡಪದ ಬನ್ನೂರ. ಕಲಬುರಗಿ ಜಿಲ್ಲೆಯ ನಗರಾಧ್ಯಕ್ಷ ಮಲ್ಲಿಕಾರ್ಜುನ ಹಡಪದ ಸಾವಳಗಿ. ಕಲಬುರಗಿ ಜಿಲ್ಲಾ ತಾಲೂಕು ಅಧ್ಯಕ್ಷ ಚಂದ್ರಶೇಖರ ತೊನಸನಹಳ್ಳಿ. ಮತ್ತು ಕಾರ್ಯದರ್ಶಿ ವಿನೋದ ಅಂಬಲಗಾ. ಮತ್ತು ಬೀದರ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಹಿರಿಯ ಮುಖಂಡರು ಮಾಜಿ ಕಾರ್ಯದರ್ಶಿ ಶ್ರೀ ಶರಣಪ್ಪ ಚಂದನಹಳ್ಳಿ. ಮತ್ತು ಬೀದರ ಜಿಲ್ಲೆಯ ಅಧ್ಯಕ್ಷರು ದತ್ತಾತ್ರೇಯ ಹಡಪದ ಬಾಂದೇಕರ್.ಮತ್ತು ಬಸವಕಲ್ಯಾಣ ತಾಲೂಕು ಅಧ್ಯಕ್ಷರು ರಾಚಪ್ಪ ಮಂಠಾಳ. ಮತ್ತು ಜೇವರ್ಗಿ ತಾಲೂಕು ಅಧ್ಯಕ್ಷರು ಶ್ರೀ ತಿಪ್ಪಣ್ಣ ಹಡಪದ ನರಿಬೋಳ ಹಾಗೂ ಬಸವರಾಜ ಹಡಪದ ಗೆದ್ದಲಮರಿ. ಹಣಮಂತ ಹಡಪದ ನಿಡಗುಂದಿ. ದಶರಥ ನಾವಿ ಸರ. ನಾಗರಾಜ ಹಡಪದ ಸಾತನೂರ ಹಾಗೂ ಸಮಾಜದ ಅನೇಕ ಮುಖಂಡರು ಈ ಇತಿಹಾಸದ ಬಗ್ಗೆ ರಚಿಸಿದ ಲೇಖಕರಿಗೆ ಅಭಿನಂದನೆಗಳು ತಿಳಿಸಿದರು.

