ಕಾಂಗ್ರೆಸ್ ಗೆ ದಲಿತ ಸಂಘರ್ಷ ಸಮಿತಿಗಳ ಪ್ರಮುಖ ಮುಖಂಡರ ಸಾವಿರಾರು ಕಾರ್ಯಕರ್ತರ ಬೆಂಬಲ…
ಖಾನಹೊಸಹಳ್ಳಿ ಏ.29 :

ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಖಾನ ಹೊಸಹಳ್ಳಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ಸೂಚಿಸಿ ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂದು ತೀರ್ಮಾನಿಸಿ ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಿದ್ದೇವೆ ಎಂದು ಸಾವಿರಾರು ದಲಿತ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದರು. ಇಲ್ಲಿನ ಖಾನಹೊಸಹಳ್ಳಿ ಗ್ರಾಮದ ಹೊರವಲಯದ ತೋಟವೊಂದರಲ್ಲಿ ಕಾರ್ಯಕ್ರಮವನ್ನು ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ಬಿ.ಟಿ.ಗುದ್ಧಿ ದುರುಗೇಶ್ ಹಾಗೂ ಡಿಎಸ್ಎಸ್ ತಾಲೂಕು ಅಧ್ಯಕ್ಷ ಟಿ ಗಂಗಾಧರ್ ಇವರ ನೇತೃತ್ವದಲ್ಲಿ ಸಾವಿರಾರು ದಲಿತ ಮುಖಂಡರುಗಳು ಕಾಂಗ್ರೇಸ್ ಗೆ ಅಭ್ಯಾರ್ಥಿಯ ಸಮ್ಮಖದಲ್ಲಿ ಸೇರ್ಪಡೆ ಬೆಂಬಲದ ಜೊತೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಸಭೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಡಾ. ಎನ್.ಟಿ ಶ್ರೀನಿವಾಸ್ ಅವರು ಖಾನಹೊಸಹಳ್ಳಿಗೆ ಆಗಮಿಸಿ ಅಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ನಂತರ ಸಭೆಗೆ ಆಗಮಿಸಿದರು. ಈ ವೇಳೆ ರಾಜ್ಯ ಕಾಂಗ್ರೆಸ್ ದಲಿತ ಮುಖಂಡರು ಹಾಗೂ ಕಾಂಗ್ರೆಸ್ ಮುಖಂಡ ಮುಂಡ್ರಿಗಿ ನಾಗರಾಜ್ ಕಾಂಗ್ರೆಸ್ ಪಕ್ಷದ ಸಿದ್ಧಾಂತ ಕುರಿತು ಮಾತನಾಡಿದರು. ನಂತರ ವಿಶಾಲಾಕ್ಷಮ್ಮ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು, ನಾಗಮಣಿ ಜಿಂಕೆಲ್ ಹಾಗೂ ಗುಜ್ಜಲ್ ರಘು, ಲೋಕಿಕೇರೆ ಕರಿಬಸಪ್ಪ ,ಹೋನ್ನೂರಪ್ಪ ಜೂಮ್ಮಹೊಬನಹಳ್ಳಿ, ಶಶಿಧರ ಸ್ವಾಮಿ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ ವೆಂಕಟೇಶ, ಖಾನಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಕುಮಾರ ಗೌಡ್ರು, ಖಾನಹೊಸಹಳ್ಳಿ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಿ ಮನೋಜ್ ಕುಮಾರ್, ಜಿ ಓಬಣ್ಣ, ದುರ್ಗೇಶ ವಕೀಲರು, ಹನುಮೇಶ್, ತಿಮ್ಮನಹಳ್ಳಿ ಪಾಲಪ್ಪ, ನಾಗರಾಜ್ ವಕೀಲರು, ಖಾನಹೊಸಹಳ್ಳಿ ಜಗದೀಶ್ ಎಪಿಎಂಸಿ ಮಾಜಿ ಸದಸ್ಯ, ಖಾನಹೊಸಹಳ್ಳಿ ಮಂಜುನಾಥ್, ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ವಿವಿಧ ಗ್ರಾಮಗಳಿಂದ ಆಗಮಿಸಿದ ದಲಿತ ಮುಖಂಡರು, ಯುವಕರು ಇದ್ದರು.
ಜಿಲ್ಲಾ ವರದಿಗಾರರು: ರಾಘವೇಂದ್ರ.ಸಾಲುಮನಿ. ಕೊಟ್ಟೂರು