ಕನ್ನಡ ಜ್ಯೋತಿ ರಥ ಯಾತ್ರೆಯನ್ನು ಕೂಡ್ಲಿಗಿ ಪಟ್ಟಣಕ್ಕೆ ಸ್ವಾಗತಿಸಿ ಕೊಂಡ ಕನ್ನಡ ಪ್ರೇಮಿಗಳು.

ಈಚಲ ಬೊಮ್ಮನಹಳ್ಳಿ ನವೆಂಬರ್.13

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಬಡೇಲಡಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಈಚಲ ಬೊಮ್ಮನಹಳ್ಳಿ ಗ್ರಾಮದಿಂದ ಬಡೇಲಡಕು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಯು.ಮಂಜುಳಾ ಸತೀಶ, ಉಪಾಧ್ಯಕ್ಷರಾದ ಶಿಲ್ಪಾ ಹನುಮಂತಪ್ಪ ಹಾಗೂ ಸದಸ್ಯರುಗಳು ಅಂಜಿನಪ್ಪ, ಕರಿಯಪ್ಪ, ರಾಮಜ್ಜ, ವೀರೇಶ, ಕುಪ್ಪಿನ ಕೇರಿ ಗಂಗಮ್ಮ ಅಂಜಿನಪ್ಪ ಕಾಟ್ರಳ್ಳಿ, ಬಸವರಾಜ, ಬಿ.ಕೆ ಗಂಗಾಧರ ,ಗ್ರಾಮಸ್ಥರು ಹಾಗೂ ಕೂಡ್ಲಿಗಿ ತಾಲೂಕಿನ ಕನ್ನಡ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಅಂಗಡಿ ವೀರೇಶ್, ತಹಶೀಲ್ದಾರಾದ ಶ್ರೀಮತಿ ರೇಣುಕಾ,ನೌಕರರ ಸಂಘದ ಅಧ್ಯಕ್ಷರಾದ ಪಿ. ಶಿವರಾಜ್, ತಾಲೂಕ್ ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ರವಿಕುಮಾರ್,ಕನ್ನಡ ರಥಯಾತ್ರೆಗೆ ಗ್ರಾಮದ ನೂರಾರು ಮಹಿಳೆಯರು ಎಲ್ಲಾ ಜನತೆಯು ಅದ್ದೂರಿಯಾಗಿ ಹತ್ತಾರು ಮಹಿಳೆಯರು ದೀಪದ ಕಳಸ ಬೆಳಗುವುದರೊಂದಿಗೆ ಯು ಮಂಜುಳಾ ಸತೀಶ್ ಇವರು ಸ್ವಾಗತಿಸಿ ಕೊಂಡರು.

ನಂತರ ಕೂಡ್ಲಿಗಿ ಪಟ್ಟಣಕ್ಕೆ ಕಳಿಸಿ ಕೊಟ್ಟರು ಹಾಗೆ ದಾರಿಯಲ್ಲಿ ನೂರಾರು ವಿದ್ಯಾರ್ಥಿಗಳು ಕನ್ನಡ ಜ್ಯೋತಿ ರಥ ಯಾತ್ರೆಯನ್ನು ಪಟ್ಟಣ ಪಂಚಾಯಿತಿ ಅಧಿಕಾರಿಯಾದ ಫಿರೋಜ್ ಖಾನ್ ಹಾಗೂ ಸಿಬ್ಬಂದಿ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು ಕಾಟೇರ ಹಾಲೇಶ್, ಕಾಂಗ್ರೆಸ್ ಬ್ಲಾಕ್ ಪ್ರಧಾನ ಕಾರ್ಯ ದರ್ಶಿಯಾದ ತಳವಾರ ಪ್ರದೀಪ್, ಸಿ ರಾಘವೇಂದ್ರ, ಕನ್ನಡ ಬಾವುಟವನ್ನು ಹಿಡಿದು ಕೂಡ್ಲಿಗಿ ಪಟ್ಟಣದಲ್ಲಿ ಪ್ರಮುಖ ರಸ್ತೆ ಗಲ್ಲಿ ವಿವಿಧ ವಾದ್ಯಗಳೊಂದಿಗೆ ಅದ್ದೂರಿಯಾಗಿ ಕನ್ನಡ ಜ್ಯೋತಿ ರಥವನ್ನು ಮೆರವಣಿಗೆ ಮೂಲಕ ಪಟ್ಟಣದ ಗಾಂಧೀಜಿ ಚಿತಾಭಸ್ಮದ ಹತ್ತಿರ ಮೆರವಣಿಗೆ ಸಾಗಿ ಬಂದಿತ್ತು. ಹಾಗೆ ಕನ್ನಡ ಪರಿಷತ್ತಿನ ಅಧ್ಯಕ್ಷರಾದ ಅಂಗಡಿ ವೀರೇಶ್ ಇವರು ಮಾತನಾಡತ್ತ ಗ್ರಾಮೀಣ ಭಾಗದಲ್ಲಿ ಕನ್ನಡ ಭಾಷೆ ಶ್ರೀಮಂತವಾಗಿದೆ ಎಂದು ತಿಳಿಸುತ್ತಾ ದಾರಿಯುದ್ಧಕ್ಕೂ ಕನ್ನಡ ಪ್ರೇಮವನ್ನು ಮೆರೆದ ಗ್ರಾಮೀಣ ಭಾಗದ ಜನರ ಮನಸ್ಸು ಕನ್ನಡ ಅಭಿಮಾನದ ಮೆರಗು ಎದ್ದು ಕಾಣುತ್ತಿತ್ತು ಎಂದು ತಿಳಿಸಿದರು, ಹಾಗೆ ಮದಕರಿ ವೃತದಲ್ಲಿ ಕನ್ನಡ ಅಭಿಮಾನದ ಗೀತೆಗಳಿಗೆ ನೃತ್ಯ ಕುಣಿದ ಯುವಕರುಗಳು ಹಾಗೂ ರಾಮ್ ಡೋರ್ ಡ್ರಮ್ ಸೆಟ್ಟಿಗೆ ಕುಣಿತ ಹಾಕಿದ ಪಟ್ಟಣ ಪಂಚಾಯತಿ ಸದಸ್ಯರುಗಳು ಹಾಗೂ ಪ್ರಮುಖ ಮುಖಂಡರುಗಳು ಅಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಇನ್ನು ಇತರರು ಭಾಗವಹಿಸಿದ್ದರು.

ಜಿಲ್ಲಾ ವರದಿಗಾರರು:ರಾಘವೇಂದ್ರ.ಬಿ.ಸಾಲುಮನಿಕೂಡ್ಲಿಗಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.
Back to top button