ರಾಷ್ಟ್ರೀಯ ಜಂತು ಹುಳು ನಿವಾರಣೆ – ದಿನಾಚರಣೆ ಕಾರ್ಯಕ್ರಮ ಜರಗಿತು.
ಮಣ್ಣಿಕಟ್ಟಿ ಡಿ.09

ಬಾಗಲಕೋಟ ತಾಲೂಕಿನ ಉಪ ಕೇಂದ್ರ ಬೆನಕಟ್ಟಿ ವ್ಯಾಪ್ತಿಯ ಮನ್ನಿಕಟ್ಟಿ, ಹೊನ್ನಾಕಟ್ಟಿ ಸಂಗಮ ಕ್ರಾಸ್ ತೋಟದ ಶಾಲೆಯಲ್ಲಿ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆ ಆಯೋಜಿಸಲಾಗಿತ್ತು. ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಸುಭಾಸ್ ರಾಜಪ್ಪ ನರಗುಂದ ಶಾಲಾ ಮುಖ್ಯೆ ಗುರುಮಾತೆ ಎಲ್.ಐ ಲಮಾಣಿ, ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿ ಶಾಲಾ ಮಕ್ಕಳಿಗೆ “ಅಲ್ಬೆಂಡಾಜೋಲ್” ಮಾತ್ರೆ ವಿತರಿಸುವ ಮೂಲಕ ರಾಷ್ಟ್ರೀಯ ಜಂತು ಹುಳು ನಿವಾರಣಾ ದಿನಾಚರಣೆಗೆ ಚಾಲನೆ ನೀಡಿದರು. ಪ್ರಾಸ್ತಾವಿಕವಾಗಿ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಎಸ್ ಅಂಗಡಿಯವರು, ಜಂತು ಹುಳು ಸೋಂಕನ್ನು ಅಲ್ಬೆಂಡಾಜೋಲ್ ಮಾತ್ರೆಯು ನಿಯಂತ್ರಿಸುತ್ತದೆ.

“ಜಂತು ಹುಳು ರಹಿತ ಮಕ್ಕಳು ಆರೋಗ್ಯವಂತ ಮಕ್ಕಳು” ಜಂತು ಹುಳುಗಳು, ಮಕ್ಕಳಲ್ಲಿ ರಕ್ತ ಹೀನತೆ, ಅಪೌಷ್ಟಿಕತೆ ಉಂಟುಮಾಡುತ್ತದೆ. ಮುಂಜಾಗ್ರತೆಯಾಗಿ, ಯಾವುದೇ ಆಹಾರ ಸೇವಿಸುವ ಮೊದಲು ಕೈಗಳನ್ನು ಸ್ವಚ್ಛವಾಗಿ ತೊಳೆದು ಕೊಳ್ಳಬೇಕು. ಬರಿಗಾಲಿನಲ್ಲಿ ನಡೆಯಬಾರದು. ಶುದ್ಧ ನೀರು ಸೇವಿಸಿ, ತರಕಾರಿ ಕಾಯಿಪಲ್ಲೆ ಹಣ್ಣುಗಳ್ಳನ್ನು ಸ್ವಚ್ಛವಾಗಿ ತೊಳೆದು ಉಪಯೋಗಿಸ ಬೇಕು. ಆರೋಗ್ಯ ಇಲಾಖೆಯಿಂದ ವಿತರಿಸುವ ಅಲ್ಬೆಂಡಾಜೋಲ್ ಮಾತ್ರೆ ತಪ್ಪದೇ ಊಟದ ನಂತರ ಅಗಿದು ತಿನ್ನಬೇಕು, ಭಯ ಬೇಡ ಜಂತು ಮಾತ್ರೆ ಸುರಕ್ಷಿತವಾಗಿದೆ. ಎಂದು ಶಾಲಾ ಮಕ್ಕಳಲ್ಲಿ ಜಾಗೃತಿ ಮೂಡಿಸಿದರು. ರಾಷ್ಟ್ರೀಯ ಜಂತು ಹುಳು ನಿವಾರಣೆ ದಿನಾಚರಣೆ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ವಿವಿಧ ಹಂತದ ಆರೋಗ್ಯ ಅಧಿಕಾರಿಗಳು, ಶಾಲಾ ಶಿಕ್ಷಕರು, ಬಿಸಿ ಊಟ ಯೋಜನೆಯ ಅಡಿಗೆ ಸಿಬ್ಬಂದಿಗಳು, ಶಾಲಾ ಮುದ್ದು ಮಕ್ಕಳು ಉತ್ಸಾಹದಿಂದ ಭಾಗವಹಿಸಿದ್ದರು.