ತರೀಕೆರೆಯಲ್ಲಿ 77ನೇ ಸ್ವಾತಂತ್ರ್ಯ ಸಂಭ್ರಮಾಚರಣೆ.
ತರೀಕೆರೆ ಆಗಷ್ಟ.15

ದೇಶಾದ್ಯಂತ ಇಂದು ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗುತ್ತಿದ್ದು ಇಂದಿಗೆ 77ನೇ ಸ್ವಾತಂತ್ರ್ಯ ಸಂಭ್ರಮ ನಮಗೂ ಒದಗಿರುವುದು ನಮ್ಮ ಭಾರತೀಯರೆಲ್ಲರ ಸಂತೋಷದ ದಿನವಾಗಿದೆ ಎಂದು ತರೀಕೆರೆ ಕಂದಾಯ ಉಪಗಾಧಿಕಾರಿ ಡಾ. ಕಾಂತರಾಜ್ ಕೆ ಜೆ ರವರು ಧ್ವಜಾರೋಹಣ ಮತ್ತು ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿ ಮಾತನಾಡಿದರು. ದೇಶದ ಸಮಗ್ರತೆಗಾಗಿ ಒಂದಾಗಿ ಹೋರಾಟ ನಡೆದವು ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ,ನೇತಾಜಿ ಸುಭಾಷ್ ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ ಡಾ. ಬಿ ಆರ್ ಅಂಬೇಡ್ಕರ್,ನೆಹರು ಮುಂತಾದ ಮಹನೀಯರನ್ನು ನಾವು ಸ್ಮರಿಸಬೇಕಾಗಿದೆ.

ನಮ್ಮ ದೇಶದಲ್ಲಿ ಪ್ರಾದೇಶಿಕ ಅಸಮಾನತೆ, ಭ್ರಷ್ಟಾಚಾರ, ಕೋಮುವಾದಿಗಳ ಸಂಘರ್ಷದಿಂದ ಭವ್ಯ ಭಾರತದಲ್ಲಿ ಆಂತರಿಕ ಕಲಹಗಳು ಜರುಗಿ ಭಾರತದ ಸಾರ್ವಭೌಮತೆಗೆ ಧಕ್ಕೆಯಾಗಿದೆ ಇದರ ಕಡಿವಾಣಕ್ಕೆ ಯುವ ಸಮುದಾಯ ಮುಂದಾಗಿ ಸಮಗ್ರ ದೇಶದ ಅಭಿವೃದ್ಧಿಗೆ ನಾವೆಲ್ಲರೂ ಒಂದಾಗಬೇಕೆಂದು 77ನೇ ಸ್ವತಂತ್ರೋತ್ಸವದ ಸಂದೇಶ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಜಿ ಎಚ್ ಶ್ರೀನಿವಾಸ್ ರವರು ಮಾತನಾಡಿ ಇಂದು ಸ್ವಾತಂತ್ರ್ಯ ಹೋರಾಟಗಾರರಾದ ಸಂಗೊಳ್ಳಿ ರಾಯಣ್ಣ ರವರ ಜನ್ಮದಿನವೂ ಆಗಿದೆ, ಸ್ವಾತಂತ್ರ ಸಂಗ್ರಾಮದಲ್ಲಿ ಗಾಂಧೀಜಿಯವರಿಂದ ಹಿಡಿದು ಹಲವಾರು ಮಹಾನ್ ನಾಯಕರ ತ್ಯಾಗ ಮತ್ತು ಬಲಿದಾನದಿಂದ ನಾವು ಇಂದು ಸ್ವತಂತ್ರ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ.
ನಮ್ಮ ದೇಶದ ಜನಸಂಖ್ಯೆಯು 147 ಕೋಟಿ ಇದ್ದು ಈ ದೇಶವು ಪ್ರತಿಯೊಂದು ರಂಗದಲ್ಲೂ ಸಾಧನೆ ಮಾಡಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಚುನಾವಣಾಪೂರ್ವ 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದು ಅದರಂತೆ ನಾಲ್ಕು ಗ್ಯಾರಂಟಿಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ ಇನ್ನು ಉಳಿದ ಒಂದು ಗ್ಯಾರಂಟಿಯನ್ನು ಮುಂದಿನ ದಿನಗಳಲ್ಲಿ ತರಲಾಗುವುದು ಎಂದು ಹೇಳಿದರು. ತರೀಕೆರೆಯ ಬಿಎಚ್ ರಸ್ತೆ ಅಗಲೀಕರಣ ಮಾಡಿ ಅಭಿವೃದ್ಧಿಪಡಿಸುತ್ತೇವೆ 2024ರಲ್ಲಿ ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಪ್ರತಿಭಾ ಪುರಸ್ಕಾರ ಮಾಡಲಾಯಿತು, ಸಾಧಕರಿಗೆ ಸನ್ಮಾನ ಮಾಡಲಾಯಿತು,
ಅಂಗವಿಕಲರಿಗೆ ತ್ರಿಚಕ್ರ ವಾಹನ ಮತ್ತು ಇತರೆ ಸಲಕರಣೆಗಳ ವಿತರಣೆ ಮಾಡಲಾಯಿತು ಮತ್ತು ಅಜ್ಜಂಪುರ ತಾಲೂಕಿಗೆ ಇಂದಿರಾ ಕ್ಯಾಂಟೀನನ್ನು ಮಂಜೂರು ಆಗಿದ್ದು ಅದನ್ನು ಮುಂದಿನ ದಿನಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.ಈ ಕಾರ್ಯಕ್ರಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು, ಅಗ್ನಿಶಾಮಕ ದಳದ ಸಿಬ್ಬಂದಿಗಳು, ಗೃಹರಕ್ಷಕ ದಳದ ಸಿಬ್ಬಂದಿಗಳು, ಪೋಲಿಸ್ ಇಲಾಖೆ ಸಿಬ್ಬಂದಿಗಳು, ಪುರಸಭಾ ಪೌರಕಾರ್ಮಿಕರು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಸಹ ಭಾಗವಹಿಸಿದ್ದರು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗೀತಾ ಶಂಕರ್ ಅವರು ಸ್ವಾಗತಿಸಿ, ಪುರಸಭಾ ಮುಖ್ಯ ಅಧಿಕಾರಿ ಎಚ್ ಪ್ರಶಾಂತರವರು ವಂದಿಸಿದರು.
ಜಿಲ್ಲಾ ವರದಿಗಾರರು: ಎನ್.ವೆಂಕಟೇಶ್.ತರೀಕೆರೆ