ಕಂದಗಲ್ಲ ಗ್ರಾಮ ಪಂಚಾಯಿತಿಯಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಿಸಿದರು.
ಕಂದಗಲ್ಲ ಜನೇವರಿ.21

ಹನ್ನೆರಡನೇ ಶತಮಾನ ಕಂಡ ಸಾವಿರಾರು ಶಿವ ಶರಣರಲ್ಲಿ ಅಂಬಿಗರ ಚೌಡಯ್ಯನೂ ಒಬ್ಬ. ತನ್ನ ವಿಶಿಷ್ಟ ನಿಲುವಿನಿಂದಾಗಿ ಭಿನ್ನವಾಗಿ ಕಂಗೊಳಿಸುತ್ತಾನೆ. ಈಗಿನ ಹಾವೇರಿ ಜಿಲ್ಲೆಯ ಚೌಡಯ್ಯದಾನಪುರ (ಆಗಿನ ಶಿವಪುರ)ದಲ್ಲಿ ಜನಿಸಿ ತುಂಗಭದ್ರಾ ನದಿಯಲ್ಲಿ ಅಂಬಿಗ ವೃತ್ತಿ ಹೊಂದಿದವನು ಚೌಡಯ್ಯ. ಬಸವಣ್ಣ- ಅಲ್ಲಮರ ಸಮ ಸಮಾಜದ ಅಲೆಗಳ ಸೆಳೆತಕ್ಕೆ ಒಳಗಾಗಿ ಅನೇಕ ಕಾಯಕ ಜೀವಿಗಳಂತೆ ಕಲ್ಯಾಣದ ಅನುಭವ ಮಂಟಪದಲ್ಲಿ ತಾನೂ ಭಾಗವಹಿಸಿ ಕೃತಾರ್ಥನಾದವ.ವಚನಕಾರರಲ್ಲಿಯೇ ಅಂಬಿಗರ ಚೌಡಯ್ಯ ಬಲು ಬಂಡಾಯಗಾರ. ಆತನ ಬಂಡಾಯದ ಹಿಂದೆ ಸಮಾಜವನ್ನು ಸಮಗ್ರವಾಗಿ ಬದಲಾವಣೆ ಮಾಡುವ ಆಶಯವಿದೆ, ಸವೋದಯದ ತುಡಿತವಿದೆ, ಶೋಷಣಾಮುಕ್ತ ಸಮ ಸಮಾಜ ಕಟ್ಟುವ ತವಕವಿದೆ. ಆತ ಯಾವುದನ್ನೂ ಕುರುಡಾಗಿ ನಂಬುವಂಥವನಲ್ಲ, ಸ್ವ-ವಿಮರ್ಶೆ ಅವನ ಚಿಂತನೆಯ ಮೂಲ ಝುರಿ. ಅದಕ್ಕಾಗಿಯೇ ಉಳಿದ ವಚನಕಾರರು ಸ್ಥಾವರಲಿಂಗ ಬಹಿಷ್ಕರಿಸಿಯೂ ತಮ್ಮ ವಚನಗಳಿಗೆ ಸ್ಥಾವರಎಲ್ಲರೂ ಹುಟ್ಟಿ ಬಂದದ್ದು ಉಚ್ಚಿ ಬಚ್ಚಲದಲ್ಲಲ್ಲವೇ?ಹಾಗಾದರೆ ನಾ ಹೆಚ್ಚು ನೀ ಹೆಚ್ಚು ಎನ್ನುವುದು ಹುಚ್ಚುತನವಲ್ಲವೇ?ಎಲುವು ತೊಗಲು ನರಮಾಂಸ ಮೇಲೆ ಚರ್ಮದ್ದೊದಿಕೆಹೊಲೆ ಶುಕ್ಲದಿಂದಾದ ದೇಹಕ್ಕೆ ಕುಲವಾವುದು?ಯೋನಿಯಲ್ಲಿ ಬಿದ್ದವರಿಗೆ ಎಲ್ಲಿಯ ಕುಲವಯ್ಯಾ?ಚೌಡಯ್ಯ ಬರೀ ಪ್ರಶ್ನಿಸುವ ನೇತ್ಯಾತ್ಮಕ ಬಂಡಾಯಗಾರ ನಲ್ಲ, ಇತ್ಯಾತ್ಮಕವಾದ ಸಮಾಜ ಮುಖಿಯಾದ ಅನುಪಮ ದಾರ್ಶನಿಕ ಬಂಡಾಯಗಾರ.ಅಂಬಿಗರ ಚೌಡಯ್ಯನ ದೂರದೃಷ್ಟಿ, ವಿಶ್ವಮಾನವ ಪ್ರಜ್ಞೆ ಅಭೂತ ಪೂರ್ವವಾದುದು. ಯಾವುದೇ ತತ್ತ್ವ-ನೀತಿ, ದರ್ಶನ, ಭಗವತ್ ಸಾಕ್ಷಾತ್ಕಾರ ಮಾರ್ಗವು ವಿಶ್ವದ ಸಕಲ ಮಾನವರಿಗೂ ಅನ್ವಯಿಸುವಂತಾಗ ಬೇಕೆಂಬುದೇ ಅವನೆಲ್ಲ ಚಿಂತನೆಗೆ ಮೂಲ. ಆ ಮಾರ್ಗ ಒಂದು ವರ್ಗ ಅಥವಾ ಧರ್ಮ ಅಥವಾ ಜಾತಿ ಸೃಷ್ಟಿಗೆ ಕಾರಣವಾಗ ಬಾರದೆಂದು ಅವನು ಸಾಕಷ್ಟು ಕಾಳಜಿ ವಹಿಸಿದ್ದಾನೆ. ಜ್ಞಾನ ಪೂರ್ವದಲ್ಲಿ ಅವನು ಒಂದು ವ್ಯವಸ್ಥೆಗೆ ಒಳಪಟ್ಟಿದ್ದರೂ ಜ್ಞಾನೋತ್ತರದಲ್ಲಿ ಅವನು ಎಲ್ಲ ಶೃಂಖಲೆಗಳನ್ನು ತ್ಯಜಿಸಿದ. ಚೌಡಯ್ಯ ಸಾಮಾಜಿಕ ಕಾಳಜಿ ಹೊಂದಿದ ವಚನಕಾರ. ತನ್ನಂತೆ ಎಲ್ಲರಲ್ಲಿಯೂ ಸತ್ಯ ಸದಾಚಾರಗಳಿಂದ ಒಡಗೂಡಿದ ನಡೆ, ಸಟೆಯನು ಬಿಟ್ಟು ದಿಟವನು ಹಿಡಿವ ಛಲವನ್ನು ನಿರೀಕ್ಷಿಸುತ್ತಾನೆ. ಅದು ಕಾಣದಿದ್ದಾಗ ಬಂಡಾಯ ವೇಳುತ್ತಾನೆ; ಬೈದು, ತಿಳಿಹೇಳಿ ತಿದ್ದಲನುವಾಗುತ್ತಾನೆ; ಆಧ್ಯಾತ್ಮಿಕ ಮಾನವತಾ ವಾದವನ್ನು ಬಿತ್ತರಿಸುತ್ತಾನೆ. ಅದಕ್ಕಾಗಿ ಗಟ್ಟಿಯಾದ ಬಂಡಾಯದ ಧ್ವನಿಯಲ್ಲಿ ತನ್ನ ತತ್ತ್ವ ಪ್ರತಿಪಾದಿಸುತ್ತಾನೆ. ಚೌಡಯ್ಯನ ತತ್ತ್ವ-ನೀತಿ- ಬೋಧನೆಗಳು ಆತನ ಜೀವನದಂತೆ ಸರಳವಾಗಿವೆ. ಜಾತ್ಯತೀತ- ಮತಾತೀತ-ಸವೋದಯ ಯುಕ್ತವಾದ ಆತನ ತತ್ತ್ವಗಳನ್ನು ಪಾಲಿಸಿದರೆ ನಮ್ಮಲ್ಲಿ ಅಂತಃಶ್ಯಾಂತಿ ಏರ್ಪಟ್ಟು ವಿಶ್ವಶಾಂತಿಅಂಬಿಗರ ಚೌಡಯ್ಯ ವಚನಕಾರರಲ್ಲಿಯೇ ಅಂಬಿಗರ ಚೌಡಯ್ಯ ಬಲು ಬಂಡಾಯಗಾರ. ಆತನ ಬಂಡಾಯದ ಹಿಂದೆ ಸಮಾಜವನ್ನು ಸಮಗ್ರವಾಗಿ ಬದಲಾವಣೆ ಮಾಡುವ ಆಶಯವಿದೆ, ಸವೋದಯದ ತುಡಿತವಿದೆ, ಶೋಷಣಾಮುಕ್ತ ಸಮಸಮಾಜ ಕಟ್ಟುವ ತವಕವಿದೆ. ಆತ ಯಾವುದನ್ನೂ ಕುರುಡಾಗಿ ನಂಬುವಂಥವನಲ್ಲ, ಸ್ವ-ವಿಮರ್ಶೆ ಅವನ ಚಿಂತನೆಯ ಮೂಲ ಝುರಿ. ಅದಕ್ಕಾಗಿಯೇ ಉಳಿದ ವಚನಕಾರರು ಸ್ಥಾವರಲಿಂಗ ಬಹಿಷ್ಕರಿಸಿಯೂ ತಮ್ಮ ವಚನಗಳಿಗೆ ಸ್ಥಾವರ ದೇವರುಗಳ ಅಂಕಿತ ಇಟ್ಟುಕೊಂಡಿದ್ದನ್ನು ಪ್ರಶ್ನಿಸಿ ತನ್ನ ವಚನಾಂಕಿತವನ್ನು ಅಂಬಿಗರ ಚೌಡಯ್ಯ ಎಂದೇ ಇಟ್ಟುಕೊಂಡ.ಅದಕ್ಕಾಗಿಯೇ ‘ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರು’ ಎಂದು ಗುಡುಗುತ್ತಾನೆ ಮತ್ತು ‘ನಂಬಿದರೆ ಒಂದೇ ಹುಟ್ಟಲಿ ಕಡೆಯ ಹಾಯಿಸುವೆ’ ಎಂದು ಅಭಯಕೊಟ್ಟು ಯಾವ ಕಾಯಕವೂ ಮೇಲಲ್ಲ ಕೀಳಲ್ಲ ಸರ್ವಸಮಾನಾರ್ಹವಾದವುಗಳೆಂದು ವೃತ್ತಿ ಗೌರವವನ್ನು ಎತ್ತಿ ಹಿಡಿಯುತ್ತಾನೆ. ಜಾತಿವಾದವನ್ನೇ ಮೂಲೋತ್ಪಾಟನೆ ಮಾಡುವ ಬಂಡಾಯಗಾರನಾಗಿ ನಿಲ್ಲುವ ಚೌಡಯ್ಯ ಜಾತಿವಾದಿಗಳಿಗೆ ಮೂಲಭೂತ ಪ್ರಶ್ನೆಗಳನ್ನು ಕೇಳಿದ್ದಾನೆ.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು ಬಸವರಾಜ ಅಳ್ಳೊಳ್ಳಿ ಉಪಾಧ್ಯಕ್ಷರು ಶ್ರೀಮತಿ ಶರಣಮ್ಮ ಭಜಂತ್ರಿ, ಸದಸ್ಯರಾದ ಮಮ್ಮದ್ ಬಾವಿಕಟ್ಟಿ, ಅಮೀನಪ್ಪ ಬಾರಕೇರ ಅಮಾತೆಪ್ಪ ಯರದಾಳ್, ರೈಮಾನ್ ಸಾಬ್ ಭಗವಾನ್, , ಹನುಮಂತ ಕಿಳ್ಳಿ ತಿಮ್ಮರೆಡ್ಡಿ ಗೌಂಡಿ , ಆನಂದಪ್ಪ ಜವಾನರ್ ಮಹಾಂತೇಶ ವಡ್ಡರ್, ಆನಂದ ಜವಾನರ್, ಶಿವಪ್ಪ ಭಜಂತ್ರಿ, ಗುಳ್ಳಪ್ಪ ಪೂಜಾರಿ ರಾಯಪ್ಪ ಪೂಜೇರಿ ಮಾತನಾಡಿದರು, ಈ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ, ಬಸಪ್ಪ ಬಾರಕೇರ, ಹಾಗೂ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವೀರನಗೌಡ ಮರಟಗೇರಿ ಶಿವಪುತ್ರಪ್ಪ ಕುಂದಗೋಳ ಶಿವು ಅಳ್ಳಳ್ಳಿ ಬಸವರಾಜ ಬಾರಕೇರ ಕೆರಿಯಪ್ಪ ಹಾಗೂ ಗ್ರಾಮಪಂಚಾಯಿತಿ ಸಿಬ್ಬಂದಿಗಳ,ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಪ್ರತಾಪ್.ವಾಯ್.ಕಿಳ್ಳಿ ಇಳಕಲ್