ನರೇಗಾ ಕೆಲಸಕ್ಕೆ ಹೆಚ್ಚಿನ ಜನರು ಬರುವಂತೆ ಕರೆ – ವಿಜಯ ಪಾಟೀಲ.

ಬೈಲಹೊಂಗಲ ಮೇ.05

ಗ್ರಾಪಂ ಸುತಗಟ್ಟಿ ಮತ್ತು ದೇಶನೂರ ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳಗಳಿಗೆ ಇಂದು ಸಹಾಯಕ ನಿರ್ದೇಶಕ ವಿಜಯ ಪಾಟೀಲ ಭೇಟಿ ನೀಡಿ. ಹೊಸದಾಗಿ ಸಿಗುವಂತಹ ಕೂಲಿ ಮೊತ್ತ 349/- ಬಗ್ಗೆ ವಿವರಿಸಿದರು ಮತ್ತು ಹಾಜರಾತಿ ಕುರಿತು ವಿವರಿಸಿದರು. ಹಾಜರಾತಿಯಲ್ಲಿ ಪಾರದರ್ಶಕತೆಯ ತರುವ ಸಲುವಾಗಿ ಈಗಾಗಲೇ ಕಳೆದ ಎರಡು ವರ್ಷಗಳಿಂದ ಚಾಲ್ತಿಯಲ್ಲಿರುವ NMMs ಹಾಜರಾತಿಯ ಪರಿಶೀಲನೆ ಮಾಡಿದರು ಇದರಲ್ಲಿ ಕೆಲಸಕ್ಕೆ ಬರುತ್ತೇನೆ ಎಂದ ಕೂಲಿಕಾರರ ಮಾತ್ರ ಕೆಲಸಕ್ಕೆ ಬಂದು ಹಾಜರಾತಿ ಮೂಲಕ ನಿಗಧಿ ಪಡಿಸಿರುವ ಪ್ರಮಾಣದಲ್ಲಿ ಕೆಲಸವನ್ನು ಮಾಡುವುದು ಕಡ್ಡಾಯವಾಗಿರುತ್ತದೆ. ನರೇಗಾ ಯೋಜನೆಯಡಿ ಪ್ರತಿ ಕುಟುಂಬವು ಕಡ್ಡಾಯವಾಗಿ ಆರ್ಥಿಕ ವರ್ಷದಲ್ಲಿ 100 ದಿವಸ ಪೂರೈಸುವಂತೆ ಕೂಲಿಕಾರರಿಗೆ ಮನವರಿಕೆ ಮಾಡಿದರು ನಿಮ್ಮೂರಲ್ಲೇ ಸಾಕಷ್ಟು ಉದ್ಯೋಗ ಖಾತ್ರಿ ಕೆಲಸಗಳು ಇದ್ದು ಈಗಾಗಲೇ ಕ್ರೀಯಾ ಯೋಜನೆಯಲ್ಲಿರುವಂತಹ ಕೆಲಸಗಳನ್ನು ಪೂರ್ಣಗೊಳಿಸಿ ಯಾವುದೇ ಕಾರಣಕ್ಕೂ ಕೂಲಿಕಾರರು ವಲಸೆ ಎಂದು ಬೇರೆ ಬೇರೆ ನಗರಗಳಿಗೆ ಹೋಗದೆ ತಪ್ಪದೇ ಖಾತ್ರಿ ಕೆಲಸಕ್ಕೆ ಬನ್ನಿ ಎಂದರು ಕೂಲಿಕಾರರಿಗೆ ಯೋಜನೆಯಡಿಯಲ್ಲಿ ಆರೋಗ್ಯ ಶಿಬಿರಗಳು, ನೆರಳು ಹಾಗೂ ಕುಡಿಯುವ ನೀರಿನ ಸೌಲಭ್ಯ ಮತ್ತು ವಿಮಾ ಸೌಲಭ್ಯಗಳನ್ನು ಮಾಡಿಸಿ ಕೊಂಡು ಆರೋಗ್ಯಯುತ ಬದುಕನ್ನು ಕೂಲಿಕಾರರು ನಡೆಸುವಂತೆ ಕರೆ ನೀಡಿದರು.

ತದನಂತರ ಮೇ-07-2024 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ನಮ್ಮೆಲ್ಲ ಕೂಲಿಕಾರರು ಮತದಾನ ದಿಂದ ವಂಚಿತರಾಗಬಾರದು ಮತದಾನದಲ್ಲಿ ಕೂಲಿಕಾರರು ಪಾಲ್ಗೊಂಡು ಕಡ್ಡಾಯವಾಗಿ ತಪ್ಪದೇ ಮತವನ್ನು ಚಲಾಯಿಸಿ ಈ ಬಾರಿ ಗುರುತೀನ ಚೀಟಿಗಾಗಿ ನರೇಗಾ ಜಾಬ್ ಕಾರ್ಡ ತೋರಿಸಿ ಮತದಾನ ಮಾಡಿ ಎಂದು ವಿವರಿಸದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ, ವನಜಾಕ್ಷಿ ಪಾಟೀಲ ತಾಂತ್ರಿಕ ಸಂಯೋಜಕ, ಸುನೀಲ್‌ ಅವರನಾಳ ಐಇಸಿ ಸಂಯೋಜಕ ಎಸ್‌ ವ್ಹಿ ಹಿರೇಮಠ ಬೇರಪೂಟ ಟೇಕ್ನಿಷಿಯನ ಸಿದ್ದಪ್ಪ ಕಂಬಾರ, ಗ್ರಾಪಂ ಸಿಬ್ಬಂದಿಗಳು, ಯಶವಂತ, ಸಂತೋಷ್‌ ಶಶಿಕಲಾ ತಳವಾರ ಇತರರು ಹಾಜರಿದ್ದರು.

ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಂ.ಎಂ. ಶರ್ಮಾ ಬೆಳಗಾವಿ.

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button