ತಾಲೂಕ ವೈದ್ಯಾಧಿಕಾರಿ ಡಾ, ಶರಣಬಸವರ – ಅಮಾನತ್ತಿಗೆ ಜಯ ಕರ್ನಾಟಕ ರಕ್ಷಣಾ ಸೇನೆಯಿಂದ ಆಗ್ರಹ.
ಮಾನ್ವಿ ಮೇ.19

ಮಾನ್ವಿ ಹಾಗೂ ಸಿರವಾರ ತಾಲೂಕಲ್ಲಿ ನಕಲಿ ವೈದ್ಯರ ಹಾವಳಿ ಮಿತಿ ಮೀರಿದ್ದು. ಇದನ್ನು ಕ್ರಮ ಜರುಗಿಸದೆ ಮೌನ ತಂತ್ರ ಅನುಸರಿಸಿದ ತಾಲೂಕ ವೈದ್ಯಾಧಿಕಾರಿ ಡಾಕ್ಟರ್, ಶರಣಬಸವರನ್ನು ಅಮಾನತು ಮಾಡುವಂತೆ ಜಯ ಕರ್ನಾಟಕ ರಕ್ಷಣಾ ಸೇನೆಯ ಪದಾಧಿಕಾರಿಗಳು ಬಸವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ರಾಯಚೂರು ಜಿಲ್ಲೆಯ ಮಾನ್ವಿ ಮತ್ತು ಸಿರವಾರ ತಾಲೂಕಲ್ಲಿ ನಕಲಿ ವೈದ್ಯರ ಹಾವಳಿ ಯಿಂದಾಗಿ ಬಡ ಜನರ ಮೇಲೆ ದುಷ್ಪರಿಣಾಮ ಬೀರಿದರು ಸಹ ಅಮಾಯಕರು ಹೆಚ್ಚಿನ ಡೋಸ್ ಮೂಲಕ ಸತ್ತರು ಸಹ ಇಲ್ಲಿ ಯಾರು ಹೇಳೋರು ಕೇಳೋರು ಯಾರು ಇಲ್ಲವಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ನಕಲಿ ವೈದ್ಯರ ಹಾವಳಿ ಇದೆ ಎಂದು ಹಲವಾರು ದೂರು ಸಲ್ಲಿಸಿದರು ಸಹ ಮಾನ್ವಿ ತಾಲೂಕ ವೈದ್ಯಾಧಿಕಾರಿ ಡಾಕ್ಟರ್, ಶರಣಬಸವ ಅವರು ನಕಲಿ ವೈದ್ಯರ ಜೊತೆ ಶಾಮೀಲಾಗಿದ್ದ ರಿಂದ ಕ್ರಮ ಜರುಗಿಸದೆ ನಿಷ್ಕಾಳಜಿ ವಹಿಸಿದ ಹಿನ್ನೆಲೆಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಕೂಡಲೆ ವೈದ್ಯಾಧಿಕಾರಿ ಡಾಕ್ಟರ್ ಶರಣಬಸವ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ