ಡಾ, ಭೀಮ್ ರಾವ್ ಅಂಬೇಡ್ಕರ್ ಸೈನ್ಯ (ರಿ) ಕರ್ನಾಟಕ ಸಂಘಟನೆಯ ರಾಜ್ಯ ಅಧ್ಯಕ್ಷರಾಗಿ ಪರಶುರಾಮ್ ಚಿನಗುಂಡಿ ಆಯ್ಕೆ.
ಚಿನಗುಂಡಿ ಜು.08





ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿನಗುಂಡಿ ಗ್ರಾಮದ ಶ್ರೀ ಪರಶುರಾಮ್ ಕಾಂಬಳೆ ಅವರನ್ನು ಇಂದು ಡಾ, ಭೀಮರಾವ್ ಅಂಬೇಡ್ಕರ್ ಸೇನೆ (ರಿ) ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.ಪರಶುರಾಮ್ ಚಿನಗುಂಡಿ ಎಂದೆ ಹೆಸರು ವಾಸಿಯಾದ ಇವರು ಹಲವಾರು ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಬಡವರಿಗೆ ದೀನ ದಲಿತರಿಗೆ ತುಂಬಾ ಸಹಾಯಗಳನ್ನ ಮಾಡುತ್ತಾ ಬಂದಿರುತ್ತಾರೆ. ಇವರ ಕೆಲಸ ಕಾರ್ಯಗಳನ್ನು ಮೆಚ್ಚಿ ನಮ್ಮ ಸಂಘಟನೆಯ ಎಲ್ಲಾ ಪದಾಧಿಕಾರಿಗಳು ಸೇರಿ ರಾಜ್ಯ ಘಟಕ ವತಿಯಿಂದ ಅವರ ಮನವಲಿಸಿ ಡಾ, ಭೀಮರಾವ್ ಅಂಬೇಡ್ಕರ್ ಸೇನೆ (ರಿ) ಕರ್ನಾಟಕ ಸಂಘಟನೆಯ ಮತ್ತು ಸಮಾಜದ ಅಭಿವೃದ್ಧಿಗಾಗಿ ಇಂತಹ ಯುವ ನಾಯಕರು, ಹೋರಾಟಗಾರರು, ನೇರ ನುಡಿ, ನೇತಾರ, ದಿಟ್ಟ ನಾಯಕರು, ನಮ್ಮ ನಿಮ್ಮೆಲ್ಲರ ಪ್ರೀತಿಯ ಸಹೋದರ ಸಂಘಟನೆಯ ಚತುರ ಆಗಿರುವ ಪರಶುರಾಮ್ ಕಾಂಬಳೆ ಅವರು ನಮ್ಮ ಸಂಘಟನೆಗೆ ಅವಶ್ಯಕತೆ ಇರುವ ಕಾರಣ ಇವರನ್ನು ಎಲ್ಲ ರಾಜ್ಯ ಘಟಕ ವತಿಯಿಂದ ಹೃದಯ ಪೂರ್ವಕವಾಗಿ ಗೌರವಿಸಿ ಸಂಘಟನೆಗೆ ಜೈ ಭೀಮ್ ಸ್ವಾಗತಿಸಿ ಕೊಳ್ಳುತ್ತೇವೆ. ಎಂದು ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರತಾಪ್ ವಾಯ್ ಕಿಳ್ಳಿ ಇಲಕಲ್ಲ.