RTPS ಟೌನ್‌ಶಿಪ್ ಪ್ರದೇಶದಲ್ಲಿ CISF ವತಿಯಿಂದ – “ವಂದೇ ಮಾತರಂ” 150 ಪೇ. ವಾರ್ಷಿಕೋತ್ಸವ ನಿಮಿತ್ತವಾಗಿ ಬೈಕ್ ರ್ಯಾಲಿ ಜರುಗಿತು.
ರಾಯಚೂರು ನ.11

“ವಂದೇ ಮಾತರಂ” 150 ನೇ. ವಾರ್ಷಿಕೋತ್ಸವ ಆಚರಣೆಗಳ ಅಂಗವಾಗಿ, CISF ಯುನಿಟ್, RTPS, ಶಕ್ತಿ ನಗರ, ರಾಯಚೂರು ಇವರ ವತಿಯಿಂದ 10.11.2025 ರಂದು ಬೆಳಿಗ್ಗೆ 06:30 ಗಂಟೆ ಯಿಂದ 07:20 ಗಂಟೆಯ ವರೆಗೆ RTPS ಟೌನ್‌ಶಿಪ್ ಪ್ರದೇಶದಲ್ಲಿ ಬೈಕ್ ರ‍್ಯಾಲಿ ಆಯೋಜಿಸಲಾಯಿತು.

ಈ ರ‍್ಯಾಲಿಯ ಮುಖ್ಯ ಉದ್ದೇಶ ಟೌನ್‌ಶಿಪ್ ನಿವಾಸಿಗಳಲ್ಲಿ “ವಂದೇ ಮಾತರಂ” ಕುರಿತು ದೇಶ ಭಕ್ತಿ ಮತ್ತು ಜಾಗೃತಿಯನ್ನು ಮೂಡಿಸುವುದಾಗಿದೆ.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಶ್ರೀ ಸತ್ಯವೀರ ಸಿಂಗ್ (CISF – ಅಸಿಸ್ಟೆಂಟ್ ಕಮಾಂಡಂಟ್) ಅವರು ಹಾಜರಿದ್ದರು.

CISF ಸಿಬ್ಬಂದಿ 25 ಮಂದಿ ಹಾಗೂ ಕಾಲೋನಿ ನಿವಾಸಿಗಳು 20 ಮಂದಿ ಉತ್ಸಾಹದಿಂದ ಭಾಗವಹಿಸಿದರು ಎಂದು ವರದಿಯಾಗಿದೆ.

