ಸ್ಮಾರ್ಟ್‌ಪೋನ್ ಬೆಳಕು ದೇಹದ ಮೇಲೆ ಮೆದುಳಿನ ಮೇಲೆ ಹೇಗೆ ಪರಿಣಾಮ ಬೀರುತ್ತದೆ!?.
- Smartphone Light Effects on Brain and Body | ಸ್ಮಾರ್ಟ್‌ಪೋನ್ ಬೆಳಕು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ.
ನಮ್ಮ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಮತ್ತು ಲ್ಯಾಪ್‌ಟಾಪ್‌ನ ಸ್ಕ್ರೀನ್ ತಯಾರಿಸುವ ವಿನ್ಯಾಸಕರು ನಂಬಲಾಗದಷ್ಟು ಶಕ್ತಿಯುತ ಬೆಳಕನ್ನು ರಚಿಸಲು ಸಮರ್ಥರಾಗಿದ್ದಾರೆ. ಈ ಸ್ಮಾರ್ಟ್‌ಫೋನ್ ಸ್ಕ್ರೀನ್ ಬಿಸಿಲಿನ ದಿನದಲ್ಲಿ ಕಾಣುವಷ್ಟು ಪ್ರಕಾಶಮಾನವಾಗಿ ಹೊಳೆಯುತ್ತವೆ.
ರಾತ್ರಿಯಲ್ಲಿ ಆ ಬೆಳಕು ತುಂಬಾ ಪ್ರಕಾಶಮಾನವಾಗಿರುತ್ತದೆ, ಎಷ್ಟೆಂದರೆ ಅದು ಹಗಲಿನಲ್ಲಿ ಒಂದು ಕಿಟಕಿಯಿಂದ ಕಾಣುವ ಬೆಳಕಿನಷ್ಟೇ ಪ್ರಬಲವಾಗಿದೆ. ಹೀಗಾಗಿ ರಾತ್ರಿಯಲ್ಲಿ ನಿಮ್ಮ ಫೋನ್ ನೋಡುವುದು ಅಷ್ಟು ಒಳ್ಳೆಯದಲ್ಲ. ನಾವು ಈ ಲೇಖನದಲ್ಲಿ ಸ್ಮಾರ್ಟ್‌ಫೋನ್ ಬೆಳಕಿನಿಂದ ನಿಮ್ಮ ಮೆದುಳು ಮತ್ತು ದೇಹದ ಮೇಲೆ ಆಗುವ ಪರಿಣಾಮವನ್ನು ತಿಳಿಸುತ್ತಿದ್ದೇವೆ.
ಇದನ್ನು ಓದಿ: ನಿಮ್ಮ ಸ್ಮಾರ್ಟ್ ಫೋನ್ ಬ್ಯಾಟರಿಯನ್ನು ಸುಧಾರಿಸಲು ಎಂಟು ಸಲಹೆಗಳು
ನಮ್ಮ ದೇಹ ಸ್ವಾಭಾವಿಕವಾಗಿ ಒಂದು ಸಮಯ ಚಕ್ರವನ್ನು ಅನುಸರಿಸುತ್ತದೆ. ಅದು ಹಗಲಿನಲ್ಲಿ ಎಚ್ಚರವಾಗಿರಲು ಮತ್ತು ರಾತ್ರಿಯಲ್ಲಿ ಅಗತ್ಯವಾದ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ. ಆದರೆ ನಾವು ನಿದ್ದೆ ಮಾಡುವ ಸಮಯದಲ್ಲಿ ಸ್ಮಾರ್ಟ್‌ಫೋನ್ ನೋಡಿದರೆ ಅದರ ಬೆಳಕು ನಮ್ಮ ಮೆದುಳನ್ನು ಗೊಂದಲಕ್ಕೊಳಗಾಗುತ್ತದೆ.
ನೀವು ನಿದ್ದೆ ಮಾಡುವ ಸಮಯದಲ್ಲಿ ಮೆದುಳು ಮೆಲಟೋನಿನ್ ಎಂಬ ನಿದ್ದೆ ಬರಿಸುವ ಹಾರ್ಮೋನನ್ನು ಬಿಡುತ್ತದೆ. ಆ ಕಾರಣದಿಂದ ನಿಮಗೆ ನಿದ್ದೆ ಬರುತ್ತದೆ. ನೀವು ಸ್ಮಾರ್ಟ್‌ಫೋನ್ ನೋಡಿದರೆ ಅದರ ಪ್ರಕಾಶಮಾನವಾದ ಬೆಳಕಿನಿಂದ ನಿಮ್ಮ ಮೆದುಳು ಮೆಲಟೋನಿನ್ ಹಾರ್ಮೋನ್ ಉತ್ಪಾದನೆ ನಿಲ್ಲಿಸುವ ಸಮಯ ಎಂದು ಯೋಚಿಸುತ್ತದೆ.
ನೈಟ್ ಮೋಡ್ ನಂತಹ ಬದಲಾವಣೆ ಸಹಾಯಕವಾಗಿದೆ ಎಂದು ಸಾಬೀತಾದರೂ, ನಮ್ಮ ಫೋನ್‍ಗಳೊಂದಿಗೆ ನಾವು ಮಾಡುವ ಇತರ ಅನೇಕ ಕೆಲಸಗಳು ಸಹ ನಿದ್ದೆಗೆ ಅನುಕೂಲಕರವಾಗಿಲ್ಲವೆಂದು ತಜ್ಞರು ಹೇಳುತ್ತಾರೆ. ಉದಾಹರಣೆಗೆ, ನೀವು ನಿದ್ದೆಯಲ್ಲಿದ್ದಾಗ ರಾತ್ರಿಯಲ್ಲಿ ಬರುವ ಈಮೇಲ್ ಪಾಪ್- ಆಪ್. ಇದರಿಂದಲೂ ಮೆಲಟೋನಿನ್ ಉತ್ಪಾದನೆ ನಿಂತು ನಿಮ್ಮ ನಿದ್ದೆಯನ್ನು ಹಾಳು ಮಾಡುತ್ತದೆ.
ಸ್ಮಾರ್ಟ್‌ಫೋನ್‍ನಿಂದಾಗುವ ಇನ್ನಷ್ಟು ತೊಂದರೆಗಳು:
• ನಿಮ್ಮ ಸ್ಮಾರ್ಟ್‌ಫೋನ್‍ನನ್ನು ರಾತ್ರಿಯಲ್ಲಿ ತುಂಬಾ ನೋಡುವುದರಿಂದ ನಿಮ್ಮ ಕಣ್ಣು ಮಿಟುಕಿಸುವುದು ಕಡಿಮೆಯಾಗಿ, ಕಣ್ಣಿಗೆ ಸುಸ್ತಾಗುತ್ತದೆ.
• ತುಂಬಾ ಸಮಯದವರೆಗೆ ಚೆನ್ನಾಗಿ ನಿದ್ದೆ ಮಾಡಿಲ್ಲವೆಂದರೆ ನ್ಯೂರೋ ಟ್ಯಾಕ್ಸಿನ್ ಬೆಳೆಯುತ್ತದೆ. ಇದರಿಂದ ನಿಮಗೆ ನಿದ್ದೆ ಮಾಡುವುದು ಕಷ್ಟವೆನಿಸುತ್ತದೆ.
• ನಿಮ್ಮ ನಿದ್ದೆಯ ಅವಧಿಗೆ ನೀವು ಅಡ್ಡಿಪಡಿಸಿದರೆ, ಮುಂದಿನ ದಿನ ನಿಮ್ಮ ಮೆದುಳಿನ ನೆನಪಿನ ಶಕ್ತಿ ಕುಗ್ಗುತ್ತದೆ.
ಇದನ್ನು ಓದಿ: ಕಣ್ಣಿನ ದೃಷ್ಟಿ ಸುಧಾರಿಸುವ ಕಣ್ಣಿನ ವ್ಯಾಯಾಮಗಳು
• ಮೆಲಟೋನಿನ್ ಅಷ್ಟೇ ಅಲ್ಲದೆ ಸ್ಮಾರ್ಟ್‌ಫೋನ್ ಬೆಳಕು, ಹಸಿವು ನೀಡುವ ಹಾರ್ಮೋನ್ ಉತ್ಪಾದನೆಗೆ ಅಡ್ಡಿಪಡಿಸುತ್ತದೆ.
• ಸ್ಮಾರ್ಟ್‌ಫೋನ್ ನೋಡುತ್ತಾ ರಾತ್ರಿಯೆಲ್ಲ ಎಚ್ಚರವಿದ್ದರೆ ಅದು ನಿಮಗೆ ಏನನ್ನಾದರೂ ಕಲಿಯಲು ಕಷ್ಟಕರವಾಗಿರುತ್ತದೆ.
• ಯಾರ ದೇಹದಲ್ಲಿ ಮೆಲಟೋನಿನ್ ಅಂಶ ಕಡಿಮೆ ಮತ್ತು ಅವರು ನಿದ್ದೆಯ ಚಕ್ರಕ್ಕೆ ಅಡ್ಡಿಪಡಿಸುತ್ತಾರೋ, ಅವರು ಬೇಗನೆ ಒತ್ತಡಕ್ಕೆ ಒಳಗಾಗುತ್ತಾರೆ.
ಕೊನೆಯದಾಗಿ, ರಾತ್ರಿಯ ಸಮಯದಲ್ಲಿ ಫೋನ್‍ನಿಂದ ದೂರವಿರುವುದು ಒಳ್ಳೆಯದು. ಒಂದು ವೇಳೆ ರಾತ್ರಿಯ ಸಮಯದಲ್ಲಿ ನಿಮಗೆ ಫೋನ್ ನೋಡಬೇಕಿದ್ದರೆ, ಕೋಣೆಯ ಬೆಳಕನ್ನು ಆನ್ ಮಾಡಿ ನೋಡಿ. ಇದರಿಂದ ನಿಮ್ಮ ಕಣ್ಣಿಗೆ ಅಷ್ಟು ಒತ್ತಡ ಬೀಳುವುದಿಲ್ಲ.