ರಿಷಬ್ ಶೆಟ್ಟಿ ಸ್ಥಾನಕ್ಕೆ ಲೂಸ್ ಮಾದ…!

ಅಭಿಜಿತ್ ಮಹೇಶ್ ಚಿತ್ರದ ನಿರ್ದೇಶಿಸಿರುವ “ಮತ್ತು ಜಿಎಸ್ ಗುಪ್ತಾ ಮತ್ತು ರಕ್ಷಿತ್ ಶೆಟ್ಟಿ ಇದರ ನಿರ್ಮಾಪಕರು ಆಗಿರುವ. ಅರವಿಂದ್ ಎಸ್. ಕಶ್ಯಪ್ ಛಾಯಾಗ್ರಹಣ ಮತ್ತು ಅರ್ಜುನ್ ರಾಮು ಸಂಗೀತದ ಜವಾಬ್ದಾರಿಯನ್ನು ಹೊತ್ತಿರುವ ಕನ್ನಡದ “ಬ್ಯಾಚುಲರ್ ಪಾರ್ಟಿ” ಸಿನೆಮಾದಿಂದ ರಿಷಬ್ ಶೆಟ್ಟಿಯನ್ನ ಕೈ ಬಿಡಲಾಗಿದೆ, ರಿಷಬ್ ಶೆಟ್ಟಿ ‘ಕಾಂತಾರ’ ಸಿನಿಮಾದ ಸಕ್ಸಸ್ ನಂತರ ಅದರ ಸೀಕ್ವೆಲ್ ಮಾಡುವ ಉತ್ಸಾಹದಲ್ಲಿದ್ದಾರೆ. ಈ ಕಾರಣದಿಂದ ಅವರು ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ತಂಡದಿಂದ ಹೊರನಡೆದಿದ್ದಾರೆ. ರಿಷಬ್ ಪಾತ್ರವನ್ನು ಇದೀಗ ಲೂಸ್ ಮಾದ ಯೋಗಿ ನಿರ್ವಹಿಸಲಿದ್ದಾರೆ. ನಟ ದಿಗಂತ್, ರಿಷಬ್ ಹಾಗೂ ಅಚ್ಯುತ್ ಕುಮಾರ್ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಸೆಟ್ಟೇರಿತ್ತು. ಈಗ ತಾರಾಗಣದಲ್ಲಿ ಬದಲಾವಣೆಯಾಗಿದೆ.

