ಕೂಡ್ಲಿಗಿ ಸಮಾಜ ಸೇವಕರಾದ ಶ್ರೀಮತಿ ಡಾll ಪುಷ್ಪಾ ಎನ್.ಟಿ.ಶ್ರೀನಿವಾಸ್ ರವರಿಂದ “ಗೃಹ ಲಕ್ಷ್ಮೀ” ಯೋಜನೆಗೆ ಚಾಲನೆ ನೀಡಿದರು.
ಕೂಡ್ಲಿಗಿ ಜುಲೈ.24
ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಸಮಾಜ ಸೇವಕರು ಹಾಗೂ ಕ್ಷೇತ್ರದ ಶಾಸಕರಾದ, ಡಾ॥ ಶ್ರೀನಿವಾಸ್.ಎನ್.ಟಿ. ರವರ ಧರ್ಮಪತ್ನಿಯಾದ. ಶ್ರೀಮತಿ ಡಾ॥ಪುಷ್ಪಾ ಅವರು, ಕೂಡ್ಲಿಗಿ ಪಟ್ಟಣ ಪಂಚಾಯತಿ ಕಾರ್ಯಾಲಯಕ್ಕೆ ಭೇಟಿ ನೀಡಿದ ಅವರು ನಂತರ ಪಟ್ಟಣ ಪಂಚಾಯಿತಿ ಕಛೇರಿಯಲ್ಲಿನ, ಗೃಹಲಕ್ಷ್ಮೀ ಯೋಜನೆಗೆಂದು ತೆರೆಯಲಾದ ಕಛೇರಿಯನ್ನು ಅವರು ಉದ್ಘಾಟಸಿದರು.

ತದನಂತರ ಸ್ವತಃ ಅವರೇ ಅಂತರ್ಜಾಲದ ಮೂಲಕ, “ಗೃಹಲಕ್ಷ್ಮೀ” ಯೋಜನೆಗೆ ತಮ್ಮದೇ ಅರ್ಜಿ ಸಲ್ಲಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ಅವರು ಕೆಲ ಹೊತ್ತು ಅಲ್ಲಿಯೇ ಇದ್ದು ಕೆಲ ಮಹಿಳೆಯರ ಪರವಾಗಿ “ಗೃಹಲಕ್ಷ್ಮೀ” ಯೋಜನೆಯ ಅರ್ಜಿಯ ಸ್ವೀಕೃತಿ ಪತ್ರವನ್ನು ಸಿಬ್ಬಂದಿಯಿಂದ ಪಡೆದು, ತಾವು ಅದನ್ನು ಪರಿಶೀಲಿಸಿ ನಂತರ ಫಲಾನುಭವಿ ಮಹಿಳೆಯರಿಗೆ ವಿತರಿಸುವ ಮೂಲಕ ಕಾಳಜಿ ತೋರಿದರು. ಅವರು ಮಾತನಾಡಿ ಸರ್ಕಾರದ ಮಹತ್ವಾಕಾಂಕ್ಷೀಯ “ಗೃಹಲಕ್ಷ್ಮಿ ಯೋಜನೆ” ಬಡ ಮಹಿಳೆಯರನ್ನು ಸ್ವಾವಲಂಭಿಗಳನ್ನಾಗಿಸಿ ಅವರನ್ನು ಆರ್ಥಿಕವಾಗಿ ಸಭಲರನ್ನಾಗಿಸುತ್ತದೆ, ಈ ಮೂಲಕ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿನ ಸರ್ಕಾರ ಮಹಿಳೆಯರ ಕಣ್ಣೀರು ಒರೆಸುವ, ಬಡವರ ಪಕ್ಷ ಎಂಬುದನ್ನು “ಗೃಹಲಕ್ಷ್ಮೀ” ಯೋಜನೆ ಜಾರಿ ತರುವ ಮೂಲಕ ಸಾಭೀತು ಪಡಿಸಿದೆ ಎಂದರು. ರಾಜ್ಯ ಸರಕಾರದ “ಗೃಹಲಕ್ಷ್ಮೀ” ಯೋಜನೆ ಅಡಿಯಲ್ಲಿ ನಾಡಿನ ಪ್ರತಿಯೊಂದು ಕುಟುಂಬದ ಯಜಮಾನಿಗೆ, ಪ್ರತಿ ತಿಂಗಳು ಎರಡು ಸಾವಿರ ಹಣ ನೀಡುವುದರಿಂದ ಕುಟುಂಬವನ್ನು ಆರ್ಥಿಕ ಹಾಗೂ ಸದೃಡವಾಗಿ ನಿರ್ವಹಣೆ ಮಾಡುವಲ್ಲಿ ಶಕ್ತಳಾಗುತ್ತಾಳೆ.

ಈ ಮೂಲಕ ಮಹಿಳೆಯ ಆರ್ಥಿಕ ಭಲವನ್ನು ಸದೃಢಗೊಳಿಸುವ ಮೂಲಕ, ರಾಜ್ಯ ಸರ್ಕಾರ ನಾಡಿನ ಸಮಸ್ತ ಮಹಿಳೆಯರ ಸಭಲೀಕರಣಕ್ಕೆ ಒತ್ತುನೀಡಿದೆ. “ಶಕ್ತಿ ಯೋಜನೆ” ಹಾಗೂ “ಗೃಹಲಕ್ಷ್ಮೀ ಯೋಜನೆ” ಗಳಂತಹ, ಮಹಿಳೆಯರಿಗೋಸ್ಕರ ಕೆಲ ಯೋಜನೆಗಳನ್ನು ಸರ್ಕಾರ ಜಾರಿತರುವ ಮೂಲಕ. ನಾಡಿನ ಸಮಸ್ತ ಮಹಿಳೆಯರಿಗೆ ಸಮಾಜದಲ್ಲಿ, ವಿಶೇಷ ಸ್ಥಾನಮಾನ ಕಲ್ಪಿಸುವ ನಿಟ್ಟಿನಲ್ಲಿ ಪ್ರಾತಿನಿಧ್ಯ ಸೂಚಿಸುವ ಯೋಜನೆಗಳನ್ನು ಜಾರಿ ತಂದಿರುವುದು ಶ್ಲಾಘನೀಯ ವಾಗಿದೆ ಎಂದರು. ಪಟ್ಟಣದ ಮಹಿಳೆಯರು ಮಹಿಳಾ ಸಮಾಜ ಸೇವಕರು ಜನಪ್ರತಿನಿಧಿಗಳು, ಪಪಂ ಆರೋಗ್ಯಾಧಿಕಾರಿ ಗೀತಾ , ಗುಮಾಸ್ತರಾದ ಈರಮ್ಮ ಹಾಗೂ ಸಿಬ್ಬಂದಿಯವರು, ಪಪಂ ಸದಸ್ಯರು, ಮಾಜಿ ಸದಸ್ಯರು ಮತ್ತಿತರರು ಇದ್ದರು.
ಜಿಲ್ಲಾ ವರದಿಗಾರರು:ರಾಘವೇಂದ್ರ.ಸಾಲುಮನಿ. ಕೂಡ್ಲಿಗಿ