ಕೆರೆ ಅಭಿವೃದ್ಧಿಗೆ ಬಿ.ಎಸ್.ಆರ್ ಮೂಗಣ್ಣ ಅವರಿಂದ – ಸಣ್ಣ ನೀರಾವರಿ ಇಲಾಖೆ ಎ.ಇ.ಇ ನವೀನ್ ಕುಮಾರ್ ಗೆ ಮನವಿ.
ಕೊಟ್ಟೂರು ಅ.13

ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ಸತತವಾಗಿ ಮಳೆರಾಯನ ಕೃಪೆಯಿಂದ ಕೊಟ್ಟೂರು ಐತಿಹಾಸಿಕ ಕೆರೆ ತುಂಬಿ ಕೋಡಿ ಬಿದ್ದಿರುವುದು ಜನರ ಸಂತೋಷ ಮೂಡಿಸಿದೆ ಆದರೆ ಈ ಕೆರೆಯ ಅಭಿವೃದ್ಧಿ ಇಲ್ಲದೆ ಅಧಿಕಾರಿಗಳ ನಿರ್ಲಕ್ಷ್ಯತನ ದಿಂದ ಕೆಲ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗಿತ್ತು. ನೀರು ಲಿಕೇಜ್ ಮುಳ್ಳು ಕಲ್ಲುನಿಂದ ಕೂಡಿರುವ ಈ ಕೆರೆ ಬಗ್ಗೆ ಸಾರ್ವಜನಿಕರ ಹೇಳಿಕೆ ಮೇರೆಗೆ ಸುದ್ದಿ ಪ್ರಸಾರವಾಗಿತ್ತು. ಇದನ್ನು ಮನಗಂಡ ಸಣ್ಣ ನೀರಾವರಿ ಇಲಾಖೆಯ ಕಾರ್ಯಾ ನಿರ್ವಹಾಕ ಅಧಿಕಾರಿ ನವೀನ್ ಕುಮಾರ್ ಧಿಡೀರ್ ಭೇಟಿ ಕೆರೆಯ ಕೋಡಿ ಮತ್ತು ರಾಜ ಕಾಲುವೆ ಒತ್ತುವರಿ ಪರಿಶೀಲಿಸಿದರು.

ಕೆರೆ ಕೋಡಿಯಲ್ಲಿ ಲೀಕೆಜ್ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರ ವಾಗುತ್ತಿದಂತೆ ಕಾರ್ಯ ಪ್ರವೃತ್ತರಾದ ಅಧಿಕಾರಿಗಳು ಸ್ಥಳ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕ ಅಧಿಕಾರಿಗಳನ್ನ ತರಾಟೆಗೆ ತೆಗೆದು ಕೊಂಡರುಬಿಎಸ್ ಆರ್ ಮೂಗಪ್ಪ ಸಣ್ಣ ನೀರಾವರಿ ಅಧಿಕಾರಿಯನ್ನ ತರಾಟೆಗೆ ತೆಗೆದುಕೊಂಡು ಪ್ರತಿ ವರ್ಷ ಸರ್ಕಾರ ದಿಂದ ಬರುವ ಅನುದಾನವನ್ನು ಎಲ್ಲಿ ಖರ್ಚು ಮಾಡಿದ್ದೀರಿ ತೋರಿಸುವಂತೆ ಪಟ್ಟು ಹಿಡಿದರು.

ಇದರಿಂದ ಕೆಲವು ವತ್ತು ಅಧಿಕಾರಿಗಳು ತಬ್ಬಿಬ್ಬು ಆದರು ಕೆರೆಗೆ ಸರಿಯಾದ ರಸ್ತೆ ಇಲ್ಲದಿರುವುದು ರಾಜಕಾಲುವೆ ದುರಸ್ಥಿ ಗೋಳಿಸದಿರುವುದು ಕೋಡಿ ಲೀಕೆಜ್ ಸರಿ ಪಡಿಸದಿವುದು ಹೀಗೆ ಹಲವಾರು ಸಮಸ್ಯೆ ಗಳಿಗೆ ಮನವಿ ಪತ್ರ ಕೊಡುವುದರ ಮೂಲಕ ಕೂಡಲೇ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಎಲ್ಲಾ ಸಂಘಟನೆ ಗಳೊಂದಿಗೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ಕೊಟ್ಟರು. ಹಾಗೂ ಊರಿನ ಮುಖಂಡರು ಮಹಿಳೆಯರು ಯುವಕರು ಮತ್ತು ಮಕ್ಕಳು ಸೇರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು