ಅಟಲ್ ಬಿಹಾರಿ ವಾಜಪೇಯಿ ವನ್ಯಜೀವಿ ಉದ್ಯಾನ – ನಿರ್ವಹಣೆ ಮತ್ತು ಸೌಕರ್ಯಗಳ ಕೊರತೆ.
ಹೊಸಪೇಟೆ ಜ.01

ಹಂಪಿ ಮೃಗಾಲಯ ಕಲ್ಯಾಣ ಕರ್ನಾಟಕದ ಏಕೈಕ ಸಫಾರಿ ನಿರ್ವಹಣೆ ಮತ್ತು ಸೌಕರ್ಯಗಳ ಕೊರತೆ 2017 ರಿಂದ ಕೊನೆ ಗೊಳ್ಳದ ಕಾಮಗಾರಿಗಳು. ವಾಹನಗಳ ಪಾರ್ಕಿಂಗ್ ಅವ್ಯವಸ್ಥೆ ಮತ್ತು ಉಪಹಾರ ಗೃಹಗಳ ವ್ಯವಸ್ಥೆ ಮಾಡಿರುವುದಿಲ್ಲ. ಇಲ್ಲಿನ ಸಫಾರಿಗೆ ಕೌಂಟರ್ ನಲ್ಲಿ ಟಿಕೆಟ್ ಪಡೆದು ಪ್ರವಾಸಿಗರು ಬಿಸಿನಲ್ಲಿ ತಾಸು ಗಂಟಲೆ ಬಸ್ಸುಗಳಿಗೆ ಕಾಯುವುದು ಕಷ್ಟಕರ ಸಂಗತಿಯಾಗಿದೆ. ವೀಕೆಂಡ್ ರಜೆಗಳಲ್ಲಿ ಪ್ರವಾಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಭೇಟಿ ನೀಡುವ ಪ್ರವಾಸಿಗರಿಗೆಬಸ್ ನಿಲ್ದಾಣದಲ್ಲಿ ಯಾವುದೇ ಮೇಲ್ಚಾವಣಿಯ ವ್ಯವಸ್ಥೆ ಮಾಡಿಲ್ಲ ಮಕ್ಕಳು ಮತ್ತು ತಾಯಂದಿರು ಬಿಸಿಲಿನಲ್ಲಿ ನಿಂತು ಕೊಳ್ಳಬೇಕು. ಕುಳಿತು ಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಆಸನದ ವ್ಯವಸ್ಥೆ ಮಾಡಿರುವುದಿಲ್ಲ. ಹಾಗೂ ಪ್ರವಾಸಿಗರ ಸುರಕ್ಷತೆಗಾಗಿ ಸೂಕ್ಷ್ಮ ಸ್ಥಳಗಳಲ್ಲಿ ಸಿ.ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಿಲ್ಲ ಹಾಗೂ ಸಫಾರಿ ಬಸ್ ಗಳಿಗೆ ಸುರಕ್ಷತಾ ಕ್ರಮಗಳನ್ನು ನಿರ್ವಹಿಸಿಲ್ಲ. ಗ್ರಿಲ್ ಗಳನ್ನು ಅಳವಡಿಸಿಲ್ಲ ಎನ್ನುವುದು ಅಪಾಯಕಾರಿ ಯಾಗಿದೆ ಎಂದು ಇಲ್ಲಿಗೆ ಭೇಟಿ ನೀಡಿದ ಪ್ರವಾಸಿಗರ ಮಾತಾಗಿದೆ.ಮೃಗಾಲಯದಲ್ಲಿ ಸಫಾರಿ:- ಸಾಮಾನ್ಯವಾಗಿ ಮೃಗಾಲಯದಲ್ಲಿ ಸಫಾರಿ ಇರುವುದಿಲ್ಲ. ಸಫಾರಿ ವ್ಯವಸ್ಥೆ ಇದ್ದರೆ ಅದನ್ನು ವನ್ಯಜೀವಿ ಧಾಮ ಎಂದು ಕರೆಯಲಾಗುತ್ತದೆ. ಹಂಪಿ ಮೃಗಾಲಯದಲ್ಲಿ ಈ ಎರಡೂ ವ್ಯವಸ್ಥೆಗಳು ಒಂದೇ ಕಡೆ ಇವೆ. ಮೊದಲು ಸಫಾರಿಯಲ್ಲಿ ಸುತ್ತಿದ ಬಳಿಕ, ಮೃಗಾಲಯಕ್ಕೆ ಭೇಟಿ ನೀಡುವ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ‘ಅಟಲ್ ಬಿಹಾರಿ ವಾಜಪೇಯಿ ವನ್ಯಜೀವಿ ಧಾಮ’ ಎಂಬ ಹೆಸರಿನ ಈ ಪ್ರವಾಸಿ ತಾಣವನ್ನು ಹಂಪಿ ಮೃಗಾಲಯ ಎಂದೂ ಕರೆಯಲಾಗುತ್ತಿದೆ.ಸರಿಯಾದ ನಿರ್ವಹಣೆ ಮತ್ತು ಮೇಲ್ವಿಚಾರಣೆ ಮಾಡಬೇಕು ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ