ಕನ್ನಡಕ್ಕೆ ಕೈ ಎತ್ತು ಕಲ್ಪವೃಕ್ಷ ವಾಗುವುದು – ಪ್ರಕಾಶ್ ವರ್ಮ.
ತರೀಕೆರೆ ನ.02

ಕನ್ನಡ ನಾಡು ನುಡಿಯನ್ನು ಉಳಿಸಬೇಕು ಎಂದು ರೇವಣಸಿದ್ದೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಟಿ.ಎಸ್ ಪ್ರಕಾಶ್ ವರ್ಮಾ ರವರು ಕನ್ನಡ ಧ್ವಜಾರೋಹಣ ಮಾಡಿ ಮಾತನಾಡಿದರು. ಅವರು ಇಂದು ರೇವಣಸಿದ್ದೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಕನ್ನಡಕ್ಕೆ ಕೈ ಎತ್ತು ಅದು ಕಲ್ಪವೃಕ್ಷವಾಗುವುದು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಅಧ್ಯಕ್ಷರಾದ ಎಂ ನರೇಂದ್ರ ಮಾತನಾಡಿ ಕನ್ನಡ ಭಾಷೆ ಮಾತೃ ಭಾಷೆಯಾಗದೆ ಬಳಕೆಯ ಭಾಷೆ, ಜೀವನದ ಭಾಷೆಯಾಗ ಬೇಕು, ಹಸಿರು ಉಸಿರಾಡಬೇಕು ಎಂದು ಹೇಳಿದರು. ಸಂಘದ ಉಪಾಧ್ಯಕ್ಷರಾದ ಪರಶುರಾಮ್, ಮಾಜಿ ಅಧ್ಯಕ್ಷರಾದ ಈಶ್ವರ ಸಂಕೆ, ನಿರ್ದೇಶಕರಾದ ಕಲಾವತಿ, ಮೋಹನ್ ರಾಜ್ ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು.