APMCಯ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ..
ಬಾಗಲಕೋಟೆ(ನವನಗರ):-
ಇಂದು ಬಾಗಲಕೋಟೆಯ ನವನಗರದ APMC ವಿವಿಧ ರೀತಿಯ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ಮಾಡಲಾಯಿತು.
ಬಾಗಲಕೋಟೆಯ ಜನಪ್ರಿಯ ಹಾಗೂ ಗೌರವಾನ್ವಿತ ಶಾಸಕರಾದ ಶ್ರೀ ವೀರಣ್ಣ. ಚರಂತಿಮಠ ಅವರು ಬಾಗಲಕೋಟೆಯ ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಕಾಮಗಾರಿಗೆ ಅಡಿಪಾಯ ಹಾಕಿದರು. ಸುಮಾರು 2 ಕೋಟಿ 44 ಲಕ್ಷ ವೆಚ್ಚದ ಕಾಮಗಾರಿಯಾದ ಇದು ಸಿ ಸಿ ರೋಡ್, ಒಳಚರಂಡಿ ವ್ಯವಸ್ಥೆ, ನಿಲ್ದಾಣ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಭೂಮಿ ಪೂಜೆಯನ್ನು ಹಾಗೂ ಹಲವಾರು ಉದ್ದೇಶಗಳಿಂದ APMC ಯನ್ನು ಸುಂದರವಾಗಿ ಮಾಡಲು ಇನ್ನೂ ವಿವಿಧ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಿ ಹೇಳಿದರು.
ಈ ಸಂಧರ್ಭದಲ್ಲಿ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಗೌರವಾನ್ವಿತ ಕಾರ್ಯದರ್ಶಿಗಳಾದ ಮಹೇಶ. ಅಥಣಿ, ಮಲ್ಲು. ಅಥಣಿ, ಕುಮಾರ್. ನಳ್ಳಿಗುತ್ತಿ, ಮಹೇಶ್. ಅಂಗಡಿ, ಮುರುಗೇಶ.ಕುಂದರಗಿ, ಬಸವರಾಜ್.ತಾಳಿಕೋಟಿ, ಮುಂತಾದವರು ಭಾಗಿಯಾಗಿದ್ದರು.