ಇಂದು ಮೊಳಕಾಲ್ಮುರು ಪಟ್ಟಣದಲ್ಲಿ ಶಾಸಕರು ಮತ್ತು ರೈತರು ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳು ರೈತ ದಿನಾಚರಣೆಯನ್ನು ಪುಷ್ಪ ಸಮರ್ಪಣೆ ಮಾಡಿ ಆಚರಿಸಿದರು.

ಮೊಳಕಾಲ್ಮುರು ಡಿಸೆಂಬರ್.23

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಾ ಪಟ್ಟಣದಲ್ಲಿ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರ ಮಾರ್ಗದರ್ಶನದಲ್ಲಿ ರೈತ ದಿನಾಚರಣೆಯನ್ನು ಕೃಷಿ ಇಲಾಖೆ ಅಧಿಕಾರಿಗಳು ಪ್ರಕಾಶ್ ಇವರ ನೇತೃತ್ವದಲ್ಲಿ ಕೃಷಿ ಮಾಡುವ ರೈತರನ್ನು ಕರೆಸಿ ಸಭೆ ಉದ್ದೇಶಿಸಿ ಮಾತನಾಡಿದರು ರೈತರಿಗೆ ಸರ್ಕಾರದಿಂದ ಬರುವಂತ ಯೋಜನೆಗಳು ಮತ್ತು ಉಪಕರಣಗಳು ಬೀಜ ಗೊಬ್ಬರಗಳು ಮತ್ತು ಔಷಧಿ ಸಿಂಪಡಿಸುವ ಗನ್ನುಗಳು ಸಹ ರೈತರು ಸದುಪಯೋಗ ಪಡೆದು ಕೊಂಡು ಮತ್ತು ಸಾವಯವ ಗೊಬ್ಬರವನ್ನು ಅಳವಡಿಸಿ ಆರ್ಗನೈಕ್ ಔಷಧಿಯನ್ನು ಸಿಂಪಡಿಸಿ ಮೌಲ್ಯವರ್ಧನ ಮುಖ್ಯ ಗುರಿ ಯಾಗಬೇಕು ಬೆಳೆ ಬೆಳೆಯಲು ಅನುಕೂಲ ಮಾಡಿಕೊಳ್ಳಿ ಮತ್ತು ವೆಚ್ಚ ರೈತ ವ್ಯವಸಾಯಕ್ಕೆ ಗಮನ ಹರಿಸಬೇಕು ರೈತರು ಬೆಳೆ ಪರಿಹಾರಗಳು ಪಿಎಂ ಕಿಸಾನ್ ಯೋಜನೆಗಳು ಇನ್ಶೂರೆನ್ಸ್ ಗಳು ನೇರವಾಗಿ ರೈತರ ಖಾತೆಗೆ ತಲುಪಿಸ ಬೇಕೆಂದು ಈ ಕ್ಷೇತ್ರದ ನಿಜವಾದಂತ ಶಾಸಕರು ಕೃಷಿ ಇಲಾಖೆ ಅಧಿಕಾರಿಗಳಿಗೆ ಸಂದೇಶ ಕೊಟ್ಟರು.

ಸರ್ಕಾರದಿಂದ ಬರುವಂತ ಸೌಲಭ್ಯಗಳು ಅನುಕೂಲತೆ ಮಾಡಿಕೊಳ್ಳಿ ಎಂದು ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಮನ ಮುಟ್ಟುವಂತೆ ಮಾತನಾಡಿದರು ಮತ್ತು ಇಪ್ಕೋ ಕಂಪನಿಯಿಂದ ಎಲ್ಲಾ ರೀತಿ ಗೊಬ್ಬರಗಳು ಮತ್ತು ಔಷಧಿಗಳು ಉಪಕರಣಗಳು ಸಿಗುತ್ತವೆ ಇವನ್ನೆಲ್ಲ ರೈತರು ಉಪಯೋಗಿಸಿ ಕೊಂಡು ತನ್ನ ಭೂಮಿಗೆ ಬೇಕಾಗುವ ಬೀಜ ಗೊಬ್ಬರ ಔಷಧಿ ಉಪಕರಣಗಳನ್ನು ತೆಗೆದು ಕೊಳ್ಳಿರಿ ಎಂದು ರೈತರಿಗೆ ತಿಳುವಳಿಕೆ ಹೇಳಿದರು ಈ ಸಂದರ್ಭದಲ್ಲಿ ರೈತ ಸಂಘದ ಸದಸ್ಯರುಗಳು ಮತ್ತು ಶ್ರೀ ನುಂಕೆ ಮೇಲೆ ಸಿದ್ದೇಶ್ವರ ತರಳಬಾಳ ಅಮೃತ ರೈತ ಉತ್ಪಾದಕ ಕಂಪನಿ ಲಿಮಿಟೆಡ್ ಮೊಳಕಾಲ್ಮೂರು ಅಧ್ಯಕ್ಷರು ಕೃಷ್ಣಪ್ಪ ಬಿ ಉಪಾಧ್ಯಕ್ಷರು ಗಂಗಾಧರಯ್ಯ ನಿರ್ದೇಶಕರು ಪೂಜಾರಿ ತಿಪ್ಪಣ್ಣ ನಿರ್ದೇಶಕರ ಮರಿಸ್ವಾಮಿ ಸಿದ್ದಯ್ಯನ ಕೋಟೆ ನಿರ್ದೇಶಕರ ಕಿರಣ್ ಜಿ ಹನುಮಂತಪ್ಪ ಕುರಾಕಲಟ್ಟಿ ರೈತರು ಮೊಳಕಾಲ್ಮೂರು ಗಾಯಕ್ವಾಡ್ ಪ್ರಗತಿಪರ ರೈತರು ಹಾಗೂ ಬಿಎಸ್ಏನ್ಎಲ್ ನೀಲಕಂಠ ಮೊಳಕಾಲ್ಮೂರ್ ಹೆರ್ಜನಳ್ಳಿ ನಂಜಪ್ಪ ನಾಯಕ ಕಾಟನ ಹಳ್ಳಿ ಭೀಮಣ್ಣ ಬೊಮ್ಮಲಿಂಗನಹಳ್ಳಿ ರಾಜಶೇಖರಪ್ಪ ವೀರಬಸಣ್ಣ ಮೊಳಕಾಲ್ಮೂರು ಕನಕ ರೈತ ಸಂಘದ ಸದಸ್ಯ ಶಿವಮೂರ್ತಿ ಮೊಳಕಾಲ್ಮೂರು ಈ ರೈತ ದಿನಾಚರಣೆಯಲ್ಲಿ ಭಾಗವಹಿಸಿ ಪುಷ್ಪ ನಮನ ಸಲ್ಲಿಸಿದರು ಶಿವನಗೌಡ ಸಿದ್ದನಕೋಟೆ ಡಿಪಿ ಕೃಷ್ಣಮೂರ್ತಿ ತಿಪ್ಪೀರನಟ್ಟಿ ರೈತ ಸಂಘದ ಸದಸ್ಯ ಇವರುಗಳಲ್ಲೂ ರೈತ ದಿನಾಚರಣೆಯಲ್ಲಿ ಭಾಗವಹಿಸಿದ್ದರು ಎಂದು ವರದಿಯಾಗಿದೆ.

ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button