ಕೊಡಗು (ಕೂರ್ಗ್) : ಮಡಿಕೇರಿಯ ಶಾಲೆಯಲ್ಲಿ ವಿದ್ಯಾರ್ಥಿಗಳ ಬಿಸಿಯೂಟದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಪತ್ತೆ….!
ಕೊಡಗು, ಮಡಿಕೇರಿ (ಜನವರಿ 12) :
ಕೊಡಗು(ಕೂರ್ಗ್) ಜಿಲ್ಲೆಯ ಮಡಿಕೇರಿ ನಗರದಲ್ಲಿ, ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳ ಮಧ್ಯಾನದ ಬಿಸಿ ಊಟದಲ್ಲಿ ಬಿಸಿಯೂಟದಲ್ಲಿ ಪ್ಲಾಸ್ಟಿಕ್ ಅಕ್ಕಿಯ ತುಂಡುಗಳು ಕಂಡುಬಂದಿವೆ ಎಂದು ಶಾಲೆಯ SDMC ಅಧ್ಯಕ್ಷರು ಆರ್.ಪಿ.ಚಂದ್ರಶೇಖರ್ ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ್ದಾರೆ.
ಬಿಸಿಯೂಟಕ್ಕಾಗಿ ದಾಸ್ತಾನಿರಿಸಿರುವ ಅಕ್ಕಿಯಲ್ಲಿ ಮಣಿಯ ರೂಪದ ಪ್ಲಾಸ್ಟಿಕ್ ತುಂಡುಗಳಿರುವುದು ಕಂಡು ಬಂದಿದೆ. ಅಕ್ಕಿಯನ್ನು ತೊಳೆಯುವಾಗ ನೀರಿನಲ್ಲಿ ತೇಲುತ್ತಿತ್ತು ಎಂದು ಅಡುಗೆಯವರು ಹೇಳಿದ್ದಾರೆ ಈ ಮೂಲಕ ಶಾಲೆಯ SDMC ಅಧ್ಯಕ್ಷರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ ಶೀಘ್ರವೇ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಪ್ಲಾಸ್ಟಿಕ್ ಮಿಶ್ರಿತ ಅಕ್ಕಿಯಿಂದ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಶಾಲೆಯ SDMCಅಧ್ಯಕ್ಷ R.P.ಚಂದ್ರಶೇಖರ್ ಕಳವಳ ವ್ಯಕ್ತಪಡಿಸಿದರು. ಶಾಲೆಗೆ ಗುಣಮಟ್ಟದ ಅಕ್ಕಿಯನ್ನು ಪೂರೈಸಬೇಕು ಎಂದು ಒತ್ತಾಯಿಸಿದ್ದಾರೆ.
ಅಕ್ಕಿಯನ್ನು ಸರಬರಾಜು ಮಾಡಿರುವ ಗುತ್ತಿಗೆದಾರನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಮತ್ತು ತಪ್ಪಿದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.