ಯರೇಹಂಚಿನಾಳ ಗ್ರಾಮದ ರೈತ ದಂಪತಿಗಳು ಬೆಳೆದ ಒಣ ಮೆಣಸಿನಕಾಯಿ ಬೆಳೆ ದಾಖಲೆಯ ಮೊತ್ತಕ್ಕೆ ಮಾರಾಟ….!
ಕರ್ನಾಟಕದಲ್ಲಿ ಅತೀ ಹೆಚ್ಚು ಬೆಲೆಗೆ ಮಾರಾಟವಾದ ಯರೇಹಂಚಿನಾಳ ಗ್ರಾಮದ ಒಣ ಮೆಣಸಿನಕಾಯಿ.....!
ಗದಗ :
ಕಷ್ಟ ಪಟ್ಟು ಬೆಳೆದ ಬೆಳೆಗೆ ಸೂಕ್ತ ಮೌಲ್ಯ ಲಭಿಸುವಲ್ಲಿ ಮಾರುಕಟ್ಟೆಯ ಬೇಡಿಕೆ ಜತೆಗೆ ಅದೃಷ್ಟವೂ ಬೇಕಾಗುತ್ತದೆ. ಏಕೆಂದರೆ ದಲ್ಲಾಳೆ, ಮಾರುಕಟ್ಟೆಯ ಬೇಡಿಕೆ ಮುಂತಾದ ಕಾರಣಗಳಿಂದ ರೈತರು ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆ ಮೌಲ್ಯ ಲಭಿಸುವುದಿಲ್ಲ ಎಂಬ ಚರ್ಚೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಹೀಗಿರುವಾಗ ಕೊಪ್ಪಳ ಜಿಲ್ಲೆಯ ಯರೇಹಂಚಿನಾಳ ಗ್ರಾಮದ ರೈತರಾದ ಸಾವಿತ್ರಿ ಹಾಗೂ ಉಮೇಶ ರೆಡ್ಡಿ ದಂಪತಿಗಳು ತಮ್ಮ ಭೂಮಿಯಲ್ಲಿ ಒಣ ಮೆಣಸಿನಕಾಯಿ ಬೆಳೆದಿದ್ದರು.
ನಂತರ ಗದಗದ APMC ಮಾರುಕಟ್ಟೆಯಲ್ಲಿರುವ ಅಶೋಕ ಟ್ರೇಡರ್ಸ್ ಮಳಿಗೆಯಲ್ಲಿ ಮಾರಾಟ ಮಾಡಲು ಮುಂದಾಗಿದ್ದರು. ಇಲ್ಲಿ ಇವರ ಬೆಳೆಯನ್ನು ದಾಖಲೆ ಮೊತ್ತಕ್ಕೆ ಖರೀದಿಸಿದ್ದಾರೆ.
ರೈತ ದಂಪತಿ ಒಂದು ಕ್ವಿಂಟಲ್ ಒಣ ಮೆಣಸಿನಕಾಯಿಗೆ 73,000 ರೂಪಾಯಿ ಬೆಲೆಗೆ ಮಾರಾಟ ಮಾಡಿದ್ದಾರೆ. ಇದೀಗ ಕೊಪ್ಪಳ ರೈತ ದಂಪತಿಗಳಾದ ಸಾವಿತ್ರಿ ಹಾಗೂ ಉಮೇಶ ರೆಡ್ಡಿ ಬೆಳೆದ ಒಣ ಮೆಣಸಿನಕಾಯಿ ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಒಣ ಮೆಣಸಿನಕಾಯಿ ಎನ್ನುವ ಹೆಗ್ಗಳಿಕೆ ಪಾತ್ರವಾಗಿದೆ.
ದಾಖಲೆ ಬೆಲೆಗೆ ಮಾರಾಟವಾದ ಮೆಣಸಿನಕಾಯಿ ಬೆಳೆದ ರೈತ ದಂಪತಿಗಳಿಗೆ APMC ಯಲ್ಲಿ ಸನ್ಮಾನ ಮಾಡಿ, ಕಳುಹಿಸಿಕೊಟ್ಟರು.