ವೈಭವದ ಬಸವೇಶ್ವರ ದೇವಸ್ಥಾನದ – ಪ್ರಥಮ ಮಹಾ ರತ್ಯೋತ್ಸವ.
ಕುಂಟೋಜಿ ಆ.21

ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಕೊಪ್ಪಳದ ಗವಿಸಿದ್ದೇಶ್ವರ ಸ್ವಾಮೀಜಿ ಲೋಕಾರ್ಪಣೆ ಗೊಳಿಸಿದ. ಕುಂಟೂಜಿ ಶ್ರೀ ಬಸವೇಶ್ವರ ಶ್ರೀ ಸಂಗಮೇಶ್ವರ ದೇವಸ್ಥಾನದ ರಥೋತ್ಸವ ಸಾವಿರಾರು ಭಕ್ತಾದಿಗಳ ಜಯ ಘೋಷಣೆಗಳ ಮಧ್ಯೆ ಮಂಗಳವಾರ ಸಂಜೆ 06:35 ಕ್ಕೆ ಜರುಗಿತು. ತಾಲೂಕಿನ ಆಲೂರು ಗ್ರಾಮದ ಭಕ್ತರಿಂದ ತೇರಿನ ಕಳಸ. ಗರಸಂಗಿ ಯಿಂದ ತೇರಿನ ಹಗ್ಗ. ಮುದ್ದೇಬಿಹಾಳ ಹಾಗೂ ಅಬ್ಬಿಹಾಳ ಭಕ್ತರಿಂದ ರುದ್ರಾಕ್ಷಿ ಹಾರಗಳು. ಆಗಮಿಸಿದ ನಂತರ ಪಲ್ಲಕ್ಕಿಯೊಂದಿಗೆ ರಥದ ಸುತ್ತ ಪ್ರದಕ್ಷಿಣೆ ಹಾಕಲಾಯಿತು. ನಿಡ ಸೋಶಿ ಶಿವಲಿಂಗೇಶ್ವರ ಸಿದ್ದ ಸಂಸ್ಥಾನ ಮಠದ ಪ್ರಭು ಸ್ವಾಮೀಜಿ. ಕುಂಟೋಜಿ ಚೆನ್ನವೀರ ಶಿವಾಚಾರ್ಯರು. ಮಾಜಿ ಶಾಸಕ ಎ.ಎಸ್ ಪಾಟೀಲ್ ನಡಹಳ್ಳಿ. ಜಾತ್ರಾ ಕಮೀಟಿ ಅಧ್ಯಕ್ಷ ಗುರುಲಿಂಗಪ್ಪ ಸುತ್ತಳ್ಳಿ. ಹಾಗೂ ಇತರರು ನೂತನ ಪ್ರಥಮ ರಥೋತ್ಸವಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಪ್ರಥಮ ಬಾರಿಗೆ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ತರುಣರು ತಮ್ಮೂರಿನ ತೇರು ಪಾದಗಟ್ಟಿ ಮುಟ್ಟುತ್ತಲೇ ಜಯ ಘೋಷಣೆ ಹೊಂದಿಗೆ. ಕುಣಿದು ಸಂಭ್ರಮಿಸಿದರು. ಭಕ್ತರೂ ರಥಕ್ಕೆ ಉತ್ತತ್ತಿ ಬಾಳೆಹಣ್ಣು ಮತ್ತು ಇತರ ಮಂಗಳಕಾರಿ ವಸ್ತುಗಳು ಅರ್ಪಿಸಿ ನಮಿಸಿದರು. ಸಿಪಿಐ ಮಮ್ಮದ್ ಪಸಿಹುದ್ದೀನ್. ಪಿಎಸ್ಐ ಸಂಜಯ್ ತಿಪ್ಪಾರೆಡ್ಡಿ. ಹಾಗೂ ಸಿಬ್ಬಂದಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿ ಕೊಂಡರು. ವಿಶೇಷವೆಂದರೆ ಎರಡು ದಿನಗಳಿಂದ ಬಿಟ್ಟು ಬಿಡದೆ ಸುರಿಯುತ್ತಿದ್ದ ಮಳೆರಾಯ ರಥೋತ್ಸವದ ಸಮಯದಲ್ಲಿ ಎರಡು ಮೂರು ತಾಸು ಬಿಡುವು ಕೊಟ್ಟಿದ್ದು ವಿಶೇಷವಾಗಿತ್ತು. ರಥೋತ್ಸವದ ಸಂದರ್ಭದಲ್ಲಿ. ಪ್ರಮುಖರಾದ ಸಂಗನಬಸಯ್ಯ ಹಿರೇಮಠ್. ಸಿದ್ದಲಿಂಗಯ್ಯ ಕಲ್ಯಾಣ ಮಠ. ಶಿವಣ್ಣ ಶನಿವಾರ. ಅಂಬರೀಶ್ ಗೂಳಿ. ಶರಣು ಹಿರೇಮಠ. ಎಂ.ಎಸ್ ಕನ್ನೂರ್. ಮಲ್ಲನಗೌಡ ಬಿರಾದಾರ್. ಸಂಗಮ ಉಣ್ಣಿಬಾವಿ. ಸುರೇಶ್ ಅಳಗುಂಡಿ. ಮಲ್ಲಪ್ಪ ಬಡಿಗೇರ್. ಹನುಮಪ್ಪ ಕಾರ್ಕೂರ್. ರಾಘವೇಂದ್ರ ಬಡಿಗೇರ್. ಮಹೇಶ್ ಅಂಬಿಗೇರ್. ಗುರು ಹಿರಿಯರು ಉಪಸ್ಥಿಧರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಬಸವರಾಜ.ಸಂಕನಾಳ. ಮುದ್ದೇಬಿಹಾಳ