ಶತಾಧಿಪತಿ ವಿಶೇಷ ಎಪಿಸೋಡ್ : ಬೆಳಗಾವಿಯ ಸರ್ಕಾರಿ ಶಾಲೆಯ ವಿಜ್ಞಾನ ಶಿಕ್ಷಕನ ಪ್ರಯೋಗಕ್ಕೆ ವಿದ್ಯಾರ್ಥಿಗಳು ಫಿದಾ, ಸಿಕ್ರೆ ಇಂತಹ ಗುರುಗಳು ಸಿಗಬೇಕು ಎಂದ ವಿಧ್ಯಾರ್ಥಿಗಳು…!
ಬೆಳಗಾವಿ(ಭೂತ್ರಾಮನಹಟ್ಟಿ) :
ಬೆಳಗಾವಿ ಜಿಲ್ಲೆಯ ಭೂತ್ರಾಮನಹಟ್ಟಿ ಸರ್ಕಾರಿ ಶಾಲೆಯನ್ನು ಕರ್ನಾಟಕದಲ್ಲಿರುವ ಮಾದರಿ ಶಾಲೆ ಎಂದು ಕರೆದರೆ ತಪ್ಪಾಗಲಾರದು . ಏಕೆಂದರೆ ಇಲ್ಲಿನ ವಿಜ್ಞಾನ ಗುರುಗಳಾದ ಶ್ರೀ ಬಸವ ಸುಂಗಾರಿ ಅವರು ತಮ್ಮ ಕ್ರಿಯಾತ್ಮಕ , ಸುಂದರ , ಸರಳ, ಮನಮೋಹಕ ಪ್ರಯೋಗಗಳಿಂದ ಸರಳವಾಗಿ ಮಕ್ಕಳಿಗೆ ಬೋಧಿಸುವ ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ .
ಅದೇನೆಂದರೆ, ಈ ಶಿಕ್ಷಕ ಇದೀಗ ಭಿನ್ನ ಪ್ರಯೋಗಕ್ಕೆ ಮುಂದಾಗಿಡಿದ್ದು ಈ ಮೂಲಕ ಎಲ್ಲಾ ಗುರು ವೃಂದದವರಿಗೆ ಮಾದರಿಯಾಗಿದ್ದಾರೆ . ಇವರು ಈ ಶಾಲೆಯಲ್ಲಿ “ಕನ್ನಡದ ಕೋಟ್ಯಾಧಿಪತಿ” ಕಾರ್ಯಕ್ರಮದಂತೆಯೇ, “ಕನ್ನಡದ ಶತಾಧಿಪತಿ” ಕಾರ್ಯಕ್ರಮವನ್ನು ಆಯೋಜಿಸುತ್ತದೆ, ಪ್ರಶ್ನೆಗಳನ್ನು ಸಿದ್ಧಪಡಿಸಿ, ನಿಗದಿತವಾಗಿ ಸಮಯವನ್ನು ಅಳವಡಿಸಿ, ಮಕ್ಕಳು ಭಾಗವಹಿಸುವಂತೆ ಮಾಡಿದ್ದಾರೆ. ವಿಶೇಷವೆಂದರೆ ಪ್ರತಿ ಸರಿ ಉತ್ತರಕ್ಕೆ ೧೦ ರೂ ನೀಡುತ್ತಾರೆ.
ಆದ್ದರಿಂದ ಈ ಕಾರ್ಯಕ್ರಮಕ್ಕೆ ಇವರು ಇಟ್ಟ ಹೆಸರು ಶತಾಧಿಪತಿ.ಇಂತಾ ಮೇಷ್ಟ್ರು ಎಲ್ಲ ಸರ್ಕಾರಿ ಶಾಲೆಯಲ್ಲಿ ಇರಬೇಕು ಎಂಬುದು ವಿಧ್ಯಾರ್ಥಿಗಳ ಅನಿಸಿಕೆಯಾಗಿದೆ.