ಗುಂಡಕನಾಳ ಗ್ರಾಮದಲ್ಲಿ ಪುರಾಣ ಪ್ರವಚನ ಮಹಾ ಮಂಗಲ ಹಾಗೂ ಧರ್ಮ ಸಭೆ.
ಗುಂಡಕನಾಳ ಮಾರ್ಚ್.4

ವಿಜಯಪುರ ಜಿಲ್ಲೆ ತಾಳಿಕೋಟೆ ತಾಲೂಕಿನ ಗುಂಡಕನಾಳ ಗ್ರಾಮದಲ್ಲಿ ಲಿಂಗೈಕ್ಯ ಪೂಜ್ಯರ ಪುಣ್ಯ ಸ್ಮರಣೋತ್ಸವ ಹಾಗೂ ಶ್ರೀ ಷಟಸ್ಥಲ ಬ್ರಹ್ಮಿ ಗುರುಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ 18 ನೇ. ವರ್ಷದ ಪಟ್ಟಾಧಿಕಾರ ಮಹೋತ್ಸವ ಹಾಗೂ ಗುರು ವಂದನಾ ಸಮಾರಂಭದ ಅಂಗವಾಗಿ ಪುರಾಣ ಮಹಾ ಮಂಗಲ ಹಾಗೂ ಧರ್ಮ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಧರ್ಮ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ದೇವರ ಹಿಪ್ಪರಗಿಯ ಶಾಸಕ ರಾಜುಗೌಡ ಪಾಟೀಲ ಅವರು ಇಂದು ನಾವೆಲ್ಲರೂ ಒತ್ತಡದ ಬದುಕು ನಡೆಸುತ್ತಿದ್ದೇವೆ ಇದರಿಂದ ನಾವು ಶಾಂತಿ ಮತ್ತು ಸಹನೆಯನ್ನು ಕಳೆದು ಕೊಂಡಿದ್ದೇವೆ ಅದನ್ನು ಮತ್ತೆ ಪಡೆಯ ಬೇಕಾದರೆ ಇಂತಹ ಪುರಾಣ ಪ್ರವಚನ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸ ಬೇಕು ಎಂದರು. ಜಾಲಹಳ್ಳಿ ಬ್ರಹನ್ ಮಠದ ಪೂಜ್ಯರು ಸಮಾರಂಭದ ಸಾನಿಧ್ಯವನ್ನು ವಹಿಸಿದ್ದರು. ಖ್ಯಾತ ನೇತೃ ತಜ್ಞ ಡಾಕ್ಟರ್ ಪ್ರಭುಗೌಡ ಲಿಂಗದಳ್ಳಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ವೇದಿಕೆಯಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಪರಮಪೂಜ್ಯ ಸಿದ್ದಲಿಂಗ ದೇವರು ಪೂಜ್ಯಶ್ರೀ ಗುರುಲಿಂಗ ಮಹಾಸ್ವಾಮಿಗಳು ವಿವಿಧ ಮಠಾಧೀಶರು ರಾಜಕೀಯ ನಾಯಕರು ಹಾಗೂ ಗಣ್ಯ ಮಾನ್ಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ ತಾಳಿಕೋಟೆ