ರೇಷ್ಮೆ ಬೆಳೆಗಾರರಿಗೆ ಒಂದು ದಿನದ ತರಬೇತಿ.
ಕುದರಿಸಾಲವಾಡಗಿ ಜನೇವರಿ.12

ದೇವರ ಹಿಪ್ಪರಗಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕುದರಿಸಾಲವಾಡಗಿ ಗ್ರಾಮದ ರೇಷ್ಮೆ ಇಲಾಖೆ ಜಿಲ್ಲಾ ಪಂಚಾಯತ ವಿಜಯಪುರ ತಾಲ್ಲೂಕ ಪಂಚಾಯತಿ ಬಸವನ ಬಾಗೇವಾಡಿ ಇವರ ಸಹಯೋಗದಲ್ಲಿ ಪ್ರಧಾನ ಮಂತ್ರಿ ಕೃಷಿ ಸಿಂಚಾಲ ಹಾಗೂ ಆತ್ಮಾಯೋಜನೆಯಲ್ಲಿ ಹಿಪ್ಪುನೇರಳೆಗೆ ಹನಿ ನೀರಾವರಿ ಕುರಿತು ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ದೇವರ ಹಿಪ್ಪರಗಿ ಮತ ಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ ಅವರು ಉದ್ಘಾಟನೆ ಮಾಡುವ ಮುಖಾಂತರ ತರಬೇತಿ ಚಾಲನೆ ನೀಡಿದರು, ಮಾತನಾಡಿದರು, ರೇಷ್ಮೆ ಬೆಳೆಯಬೇಕು ಇದರಿಂದ ಬಹಳ ಲಾಭವಿದೆ ಪ್ರತಿಒಬ್ಬ ರೈತರು ರೇಷ್ಮೆ ಬೆಳೆಯಬೇಕು ಇದಕ್ಕೆ ಸರಕಾರ ರಿಯಾಯಿತಿ ದರದಲ್ಲಿ ರೈತರಿಗೆ ಸಹಾಯ ಮಾಡುತ್ತದೆ ಎಂದು ಹೇಳಿದರು,

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಕುಂತಲಾ ಪರಸಪ್ಪ ಲಗಳಿ ಗ್ರಾ ಪಂ ಅಧ್ಯಕ್ಷರು ಕುದರಿಸಾಲವಾಡಗಿ,ಮುಖ್ಯ ಅತಿಥಿಗಳಾದ ಎಸ್ ಎಮ್ ಕೋರಿ ರೇಷ್ಮೆ ಜಂಟಿ ನಿರ್ದೇಶಕರು ಬೆಳಗಾವಿ ವಿಭಾಗ,ಎಸ್ ಸಿದ್ಧರಾಜು,ರೇಷ್ಮೆ ಉಪ ನಿರ್ದೇಶಕರು ವಿಜಯಪುರ, ಡಾ,ಯುವರಾಜ್ ಹನಗಂತಿ ಕಾರ್ಯ ನಿರ್ವಾಹಕರು ತಾಪಂ ಬಸವನ ಬಾಗೇವಾಡಿ, ಎಮ್ ಎಚ್ ಯರಜರಿ ಸಹಾಯಕ ಕೃಷಿ ನಿರ್ದೇಶಕರು ಬಸವನ ಬಾಗೇವಾಡಿ, ಡಾ,ಪಿ ಎಸ್ ಸಂಕ್, ಸಹಾಯಕ ಪಶು ಆಸ್ಪತ್ರೆ, ಮುತ್ತಪ್ಪ ಇಂಗಳಗಿ ಗ್ರಾ ಪಂ ಉಪಾಧ್ಯಕ್ಷರು, ಶಂಕರಗೌಡ ಪಾಟೀಲ, ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷರು, ಎಸ್ ಬಿ ಬಿರಾದಾರ, ರೇಷ್ಮೆ ವಿಸ್ತಾರಣಾಧಿಕಾರಿಗಳು,ಜಿ ವಾಯ್ ಬಿರಾದಾರ ರೇಷ್ಮೆ ಸಹಾಯಕ ನಿರ್ದೇಶಕರು ವಿಜಯಪುರ, ಙಂಡೋಜ ವೈ ಹಬ್ಬತಿ, ಡೀಲರ್ ದಾಸ ಆಗ್ರೋ ಪ್ಲಸ್ಟ್ ಪ್ರೈಲಿ ಬೆಳಗಾವಿ, ಹಾಗೂ ಪಿ ಆರ್ ಉಮಚಗಿಮಠ, ರೇಷ್ಮೆ ಅಧಿಕಾರಿಗಳು ದೇವರ ಹಿಪ್ಪರಗಿ,ಎಸ್ ಆಯ್ ಗೋಲಗೂಂಡ ಈ ಕಾರ್ಯಕ್ರಮವನ್ನು ನಡೆಸಿ ಕೊಟ್ಟರು ಈ ಕಾರ್ಯಕ್ರಮ ದಲ್ಲಿ ರೇಷ್ಮೆ ಬೆಳೆಗಾರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ