ಪುರಸತ್ : ಐಫೋನ್ 14 ಪ್ರೊ ಫೋನ್ ಇಂದ ಚಿತ್ರೀಕರಣಗೊಂಡ ಮೊದಲ ಸಿನಿಮಾ, ಟಿಮ್ ಕುಕ್ ಪ್ರಶಂಸೆ…!
ವಿಶ್ವದ ಅತ್ಯಂತ ದುಬಾರಿ ಮೊಬೈಲ್ ಫೋನ್ ತಯಾರಕ ಕಂಪನಿ ಆ್ಯಪಲ್ ಕಳೆದ ವರ್ಷ ಆ್ಯಪಲ್ ಐಫೋನ್ 14 ಪ್ರೊ ಬಿಡುಗಡೆ ಮಾಡಿದೆ. ಈ ಫೋನ್ ನಿಂದ ಈಗ ಚಿತ್ರೀಕರಣ ಮಾಡಲಾಗಿದ್ದು ವೈರಲ್ ಆಗುತ್ತಿದೆ....
ಮುಂಬೈ, ಫೆ.7 :
ವಿಶ್ವದ ಅತ್ಯಂತ ಗ್ರಾಹಕರಿಗೆ ಆಕರ್ಷಣೀಯ ಹಾಗೂ ದುಬಾರಿ ಮೊಬೈಲ್ ಫೋನ್ ತಯಾರಕ ಕಂಪನಿಯಾದ ಆ್ಯಪಲ್ , ಕಳೆದ ವರ್ಷ ಆ್ಯಪಲ್ ಐಫೋನ್ 14 ಪ್ರೊ(IPhone Apple 14 Pro) ಅನ್ನು ಬಿಡುಗಡೆ ಮಾಡಿದ್ದು, ಇದರ ಬೆಲೆ ಸರಿ ಸುಮಾರು ಒಂದು ಲಕ್ಷ ರೂಪಾಯಿಗಳಿಗಿಂತ ಹೆಚ್ಚು. ಅತ್ಯುತ್ತಮ ಫೋಟೊಗ್ರಫಿಯ ,ವೀಡಿಯೊಗಳ ಹಾಗೂ ಕ್ಯಾಮೆರಾದಲ್ಲಿ ವೈಶಿಷ್ಟ್ಯ ಹೊಂದಿರುವುದು iPhone 14 Pro ನ ವಿಶೇಷವಾಗಿದೆ.
- ಆದರೆ ಈ ಐಫೋನ್ ನಿಂದ ಕಷ್ಟಸಾಧ್ಯವಾದ ಚಿತ್ರೀಕರಣದ ಹೊಸ ಪ್ರಯತ್ನದಲ್ಲಿ ಯಶಸ್ಸು ಕಂಡಿರುವ ಕಥೆಯನ್ನು ಇಂದು ನಾವು ತಿಳಿದುಕೊಳ್ಳೋಣ .
ಹೌದು, ಇದೇ ಫೋನ್ ಬಳಸಿ ಸಂಪೂರ್ಣ ಒಂದು ಚಲನಚಿತ್ರ ಚಿತ್ರೀಕರಿಸಿರುವುದು ಸಾಧ್ಯ ಎಂದು ಬಾಲಿವುಡ್ ಹಿರಿಯ ನಿರ್ದೇಶಕ ವಿಶಾಲ್ ಭಾರದ್ವಾಜ್ ಅವರು “ಪುರಸತ್” ಹೆಸರಿನ ಚಿತ್ರೀಕರಣ ಮಾಡುವ ಮೂಲಕ ತೋರಿಸಿಕೊಟ್ಟಿದ್ದಾರೆ. “ಪುರಸತ್ ” ಸಂಪೂರ್ಣ ಚಲನಚಿತ್ರವನ್ನು ಐಫೋನ್ 14 ಪ್ರೊ ಮೂಲಕವೇ ಚಿತ್ರೀಕರಣಗೊಳಿಸಲಾಗಿದೆ.
ಆ್ಯಪಲ್ ಸಿಇಒ(CEO) ಟಿಮ್ ಕುಕ್ ಕೂಡ ಈ ಚಿತ್ರ ನೋಡಿದ್ದು, ಅವರು ಇದನ್ನು ತುಂಬಾ ಮೆಚ್ಚಿಕೊಂಡಿದ್ದಾರೆ. ಅಲ್ಲದೆ ನಿರ್ದೇಶಕ ವಿಶಾಲ್ ಭಾರದ್ವಾಜ್ ಅವರನ್ನು ಶ್ಲಾಘಿಸಿದ್ದಾರೆ. ಟಿಮ್ ಕುಕ್ ಈ ಬಗ್ಗೆ ಟ್ವಿಟ್ ಕೂಡಾ ಮಾಡಿದ್ದಾರೆ.
Check out this beautiful Bollywood film from director @VishalBhardwaj that explores what might happen if you could see into the future. Incredible cinematography and choreography, and all #ShotoniPhone. https://t.co/32LODwy3vb
— Tim Cook (@tim_cook) February 4, 2023
ಐಫೋನ್ ತನ್ನ ಅಧಿಕೃತ ಯೂಟ್ಯೂಬ್ ಚಾನಲ್ ನಲ್ಲಿ ಲಿಂಕ್ ಹಂಚಿಕೊಂಡ ಕುಕ್ :
ಟಿಮ್ ಕುಕ್ ಇತ್ತೀಚೆಗೆ ವಿಶಾಲ್ ಭಾರದ್ವಾಜ್ ಅವರ ಪುರಸತ್ ಚಿತ್ರವನ್ನು ವೀಕ್ಷಿಸಿ ಅದರ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದರು.’ನಿರ್ದೇಶಕ ವಿಶಾಲ್ ಭಾರದ್ವಾಜ್ ಅವರ ಈ ಸುಂದರ ಬಾಲಿವುಡ್ ಚಿತ್ರವನ್ನು ನೀವು ನೋಡಲೇಬೇಕು.ಭವಿಷ್ಯವು ಕಾಣಲಾರಂಭಿಸಿದಾಗ ಏನಾಗಬಹುದು. ಉತ್ತಮ ನಿಮಗೆ ಛಾಯಾಗ್ರಹಣ ಮತ್ತು ನೃತ್ಯ ಸಂಯೋಜನೆ, ಎಲ್ಲಾ ದೃಶ್ಯಗಳನ್ನು ಐಫೋನ್‌ನಲ್ಲಿ ಚಿತ್ರೀಕರಿಸಲಾಗಿದೆ’ ಎಂದು ತಮ್ಮ ಟೀಟ್‌ನಲ್ಲಿ ಬರೆದಿದ್ದಾರೆ.