ಕಂದಾಯ ದಾಖಲೆಗಳ ಗಣಕೀಕರಣದ ಉದ್ಘಾಟನೆ ಮಾಡಿದ – ಸಚಿವ ಶಿವಾನಂದ.ಎಸ್ ಪಾಟೀಲ.
ಬಸವನ ಬಾಗೇವಾಡಿ ಜ.13

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬಸವನ ಬಾಗೇವಾಡಿ ಪಟ್ಟಣದ ತಹಶೀಲ್ದಾರ್ ಕಾರ್ಯಾಲಯದಲ್ಲಿ ಭೂ ದಾಖಲೆಗಳ ಸುರಕ್ಷಾ ಕಾರ್ಯಕ್ರಮದನ್ವಯ ಕಂದಾಯ ದಾಖಲೆಗಳ ಗಣಕೀಕರಣದ ಉದ್ಘಾಟನೆಯನ್ನು ರಾಜ್ಯ ಸರ್ಕಾರದ ಜವಳಿ ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವರಾದ ಸನ್ಮಾನ್ಯ ಶ್ರೀ ಶಿವಾನಂದ.ಎಸ್ ಪಾಟೀಲ ಅವರು ಉದ್ಘಾಟಿಸಿದರು. ಶ್ರೀ ಯಮನಪ್ಪ ಸೋಮನಕಟ್ಟಿ ತಹಶೀಲ್ದರ್ ಹಾಗೂ ಸಿಬ್ಬಂದಿಗಳು ಮಾನ್ಯ ಸಚಿವರನ್ನು ಶ್ರೀ ಬಸವೇಶ್ವರ ಫೋಟೋವನ್ನು ನೀಡಿ ಸನ್ಮಾನಿಸಿದರು.ರಾಜ್ಯದ ಕಂದಾಯ ಇಲಾಖೆಯು ಕೈಗೊಂಡಿರುವ ಒಂದು ವಿನೂತನ ಯೋಜನೆ ಆಗಿದೆ. ಈ ತಾಲೂಕ ಕಚೇರಿಯ ಅಭಿಲೇಖಾಲೆಯ ಗಳಲ್ಲಿರುವ ಅತ್ಯಂತ ಪ್ರಮುಖವಾದ ಹಳೆಯ ಮತ್ತು ಸ್ವಾತಂತ್ರ್ಯ ಪೂರ್ವದ ಅವಧಿಯ ಭೂ ದಾಖಲೆಗಳನ್ನು ಗಣಕೀಕರಣ ಗೊಳಿಸಲಾಗುತ್ತದೆ. ಎಂದು ಹೇಳಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಸುರೇಶ ಬ ಹಾರಿವಾಳ ಶ್ರೀ I.C ಪಟ್ಟಣಶೆಟ್ಟಿ ಅವರು ಹಾಗೂ ತಹಶೀಲ್ದಾರ್ ಶ್ರೀ ಯಮನಪ್ಪ ಸೋಮನಕಟ್ಟಿ ಹಾಗೂ ಕೋಲಾರ್ ತಹಶೀಲ್ದಾರ ಎಸ್.ಎಸ್ ನಾಯ್ಕಲ್ ನಿಡಗುಂದಿ ತಹಶೀಲ್ದಾರ ಎ.ಡಿ ಅಮರವಾಡಗಿ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ