ಸಚಿವ ಶಿವಾನಂದ ಪಾಟೀಲ್ ರವರನ್ನು ಸಚಿವ ಸಂಪುಟದಿಂದ ವಜಾ ಗೊಳಿಸುವಂತೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ.
ಹೊಸಪೇಟೆ ಡಿಸೆಂಬರ್.27

ಡಾ. ಬಿ.ಆರ್.ಅಂಬೇಡ್ಕರ್ ಸರ್ಕಲ್ ಬಳಿ ಜಮಾವಣೆ ಗೊಂಡ “ರೈತ ಸಂಘಟನೆ ಸಂಯುಕ್ತ ಹೋರಾಟ ಸಮಿತಿ” ವಿಜಯನಗರ ಜಿಲ್ಲೆಯ ಸಂಘಟನೆ ವತಿಯಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು ಕಾಲ್ನಡಿಗೆ ಮುಖಾಂತರ ತಾಲೂಕು ಕಚೇರಿಗೆ ಆಗಮಿಸಿ ಮನವಿ ಪತ್ರವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸಚಿವ ಶಿವಾನಂದ್ ಪಾಟೀಲ್ ಅವರ ಭಾವ ಚಿತ್ರಕ್ಕೆ ಚಪ್ಪಲಿ ಯಿಂದ ಹೊಡೆದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು . ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸಚಿವ ಸಂಪುಟದ ಸಹೋದ್ಯೋಗಿ ಯಾದ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ರವರು ಪದೇ ಪದೇ ರೈತರನ್ನು ಅವಮಾನಿಸಿ ಅವಹೇಳನ ಕಾರಿ ಹೇಳಿಕೆಯನ್ನು ನೀಡುತ್ತಿರುವುದು. ಅವರ ಅಹಂಕಾರ ಹಾಗೂ ಉದ್ಧಟತನವನ್ನು ತೋರಿಸುತ್ತದೆ. ಇದು ರೈತ ವಿರೋಧಿ ಯಾಗಿರುವುದರಿಂದ ಕೂಡಲೇ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಇದರ ಜೊತೆಗೆ ರಾಜ್ಯದಲ್ಲಿ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅವುಗಳ ಬಗ್ಗೆ ಶೀಘ್ರ ಕ್ರಮ ಕೈ ಗೊಳ್ಳಬೇಕೆಂದು ರೈತ ಸಂಘವು ಆಗ್ರಹಿಸುತ್ತದೆ. ಇಲ್ಲವಾದಲ್ಲಿ ಮಧ್ಯಾಹ್ನ ಹೋರಾಟ ಉಗ್ರವಾಗಿ ಇರುತ್ತದೆ ಎಂದು ಎಚ್ಚರಿಸಿದರು ಸಿದ್ದರಾಮಯ್ಯ ಸರ್ಕಾರವನ್ನು ಉರುಳಿಸುತ್ತೇವೆ ಎಂದು ಬಾರ್ಕೋಲ್ ಚಾಟಿ ಬಿಸಿ ಎಚ್ಚರಿಕೆ ನೀಡಿದರು ಹಾಗೂ ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.

“ರೈತರಿಗೆ ಅವಮಾನಿಸಿ ಅವಹೇಳನ ಕಾರಿ ಹೇಳಿಕೆಯನ್ನು ನೀಡಿರುವ ಸಚಿವ ಶಿವಾನಂದ ಪಾಟೀಲ್‌ರವನ್ನು ಸಚಿವ ಸಂಪುಟದಿಂದ ವಜಾ ಗೊಳಿಸಬೇಕು, ಶಾಸಕ ಸ್ಥಾನದಿಂದ ಅನರ್ಹ ಗೊಳಿಸಿ ಸಚಿವ ಶಿವಾನಂದ ಪಾಟೀಲ್ ರಾಜ್ಯದ ರೈತರ ಕ್ಷಮೆ ಯಾಚಿಸಬೇಕು.,ರೈತರ ಸಂಪೂರ್ಣ ಕೃಷಿ ಸಾಲಮನ್ನಾ ಮಾಡಬೇಕು.,ಭೀಕರ ಬರಗಾಲದ ಈ ಸಂದರ್ಶದಲ್ಲಿ ಸರ್ಕಾರವು ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸಬೇಕು ಹಾಗೂ ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು., ರೈತರು ಬೆಳೆ ವಿಮೆ ಕಟ್ಟಿದ್ದರೂ ರೈತರ ಖಾತೆಗೆ ಪರಿಹಾರದ ಹಣ ಜಮೆ ಯಾಗಿರುವುದಿಲ್ಲ ಕೂಡಲೆ ಬೆಳೆ ಪರಿಹಾರ ಮತ್ತು ವಿಮೆ ಹಣ ರೈತರ ಖಾತೆಗೆ ಜಮಾ ಅಗಬೇಕು., ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ 5 ಲಕ್ಷ ರೂಪಾಯಿ ಸಾಲ ನೀಡುವ ಯೋಜನೆಯು ಕೇವಲ ಘೋಷಣೆ ಯಾಗಿದೆ ಅಲ್ಲದೆ ಇದು ದೊಡ್ಡ ರೈತರಿಗೆ ಪ್ರಯೋಜನ ವಾಗುತ್ತಿದ್ದು ಸಣ್ಣ ಮಧ್ಯಮ ರೈತರಿಗೆ ಸುಲಭವಾಗಿ ಇದರ ಪ್ರಯೋಜನ ಸಿಗುವಂತಾಗು ಬೇಕು.,ಬಿ.ಡಿ.ಸಿ.ಸಿ. ಬ್ಯಾಂಕ್‌ನಲ್ಲಿ ಕೃಷಿ ಸಾಲಕ್ಕಾಗಿ ರೈತರು ಸಲ್ಲಿಸಿದ ಅರ್ಜಿಗಳು ಮೂಲೆ ಗುಂಪಾಗಿವೆ. ಸಹಕಾರಿ ಬ್ಯಾಂಕ್ ಗಳು ರೈತರಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿದ್ದು ರೈತರಿಗೆ ಕಡ್ಡಾಯವಾಗಿ ಸಾಲ ನೀಡುವಂತೆ ಸರ್ಕಾರ ನಿರ್ದೇಶಿಸ ಬೇಕು., ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರ ಬೆಳೆಗಳು ಹಂದಿ, ಕರಡಿ ಇತರೆ ಪ್ರಾಣಿಗಳ ಕಾಟದಿಂದ ಹಾಳಾಗಿದ್ದು ಕೂಡಲೇ ಸರಿಹಾರ ನೀಡಬೇಕು.ಭೂಮಿ ಸಾಗುವಳಿ ಮಾಡುವ ರೈತರಿಗೆ ಸದಷ್ಟು ಬೇಗ ಪಟ್ಟ ನೀಡಬೇಕು, ಸರ್ಕಾರಿ ಹಾಗೂ ಅರಣ್ಯ ಭೂಮಿ ಸಾಗುವಳಿ ಮಾಡುವ ರೈತರಿಗೆ ಅದಷ್ಟು ಬೇಗ ಪುಟ್ಟ ನೀಡಬೇಕು. ಎಂದು ಹೋರಾಟಗಾರರು ಒಕ್ಕೊರಲಿನಿಂದ ಆಗ್ರಹಿಸಿದರು.
ತಾಲೂಕ ವರದಿಗಾರರು:ಮಾಲತೇಶ್.ಶೆಟ್ಟರ್ ಹೊಸಪೇಟೆ