ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯ 28ನೇ ವಾರ್ಷಿಕೋತ್ಸವ ಸಮಾರಂಭ ; ನೀತಿವಂತರಾಗಿ ದೇಶವನ್ನು ಯಶಸ್ವಿಯಾಗಿ ಕಾಪಾಡಿ …..!
ತರೀಕೆರೆ (ಫೆ . 18 )
ಇಂದು ಲಿಂಗದಹಳ್ಳಿಯಲ್ಲಿ ಜ್ಞಾನಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯ 28ನೇ ವಾರ್ಷಿಕೋತ್ಸವ ಸಮಾರಂಭದ ನಡೆಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಸಂಸ್ಥಾಪಕರಾದ ಎಂ ಹೊನ್ನಪ್ಪ ಅವರು ವಹಿಸಿದ್ದರು . ಕೊರೊನಾದಿಂದ ಎರಡು ವರ್ಷಗಳು ವಾರ್ಷಿಕೋತ್ಸವ ಆಚರಣೆ ಮಾಡಲಾಗಲಿಲ್ಲ, ಮಕ್ಕಳು ವಿದ್ಯಾವಂತರಾಗಿ ನೀತಿವಂತರಾಗಿ ದೇಶವನ್ನು ಯಶಸ್ವಿಯಾಗಿ ಮುನ್ನಡೆಸಿ ಕಾಪಾಡಬೇಕು,ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಣ ಮಾಡಬೇಕು ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಮ್ಮ ಅನಿಸಿಕೆಯನ್ನು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಲಿಂಗದಹಳ್ಳಿ ಪೊಲೀಸ್ ಉಪನಿರೀಕ್ಷಕರಾದ ನೇತ್ರಾವತಿ ರವರು ಮಾತನಾಡಿ ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು, ಪೋಷಕರಿಗೆ ಕಿವಿಮಾತು ಹೇಳುವುದೇನೆಂದರೆ ಮಕ್ಕಳು ತಪ್ಪು ದಾರಿಗೆ ಹೋಗದಂತೆ ತಿದ್ದುವ ಕೆಲಸ ಮಾಡಿರಿ, ಮಕ್ಕಳ ಮುಂದಿನ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಜೊತೆ ಪೋಷಕರು ಸಹ ಅಗತ್ಯವಾಗಿ ಸಹಕರಿಸಬೇಕು ಎಂದು ಹೇಳಿದರು.
ಶಾಲೆಯ ಹಳೆಯ ವಿದ್ಯಾರ್ಥಿಯಾದ ಡಾ. ಚಂದ್ರಶೇಖರ್ ಅವರು ಮಾತನಾಡಿ ಮಕ್ಕಳಿಗೆ ಶಿಕ್ಷಣವೇ ಬೇಸ್ಮೆಂಟ್ ಈ ಕೆಲಸವನ್ನು ಶಿಕ್ಷಣ ಸಂಸ್ಥೆ ಮಾಡುತ್ತಿದೆ.ಮಕ್ಕಳಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ ಎಂಬುದನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ನಾನು ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದೇನೆ, ಹಳೆಯ ವಿದ್ಯಾರ್ಥಿಯಾಗಿ ಇಂದು ನಿಮ್ಮ ಮುಂದಿದ್ದೇನೆ ಎಂದರು.
- JOIN OUR INSTAGRAM COMMUNITY
- JOIN OUR WHATSAPP COMMUNITY
- JOIN OUR FACEBOOK COMMUNITY
- JOIN OUR TELEGRAM COMMUNITY
ಬೀರೂರು ವಲಯ ಶಿಕ್ಷಣಾಧಿಕಾರಿ ಗಂಗಾಧರ್ ಹಿರೇಮಠ್ ರವರು ಸಂಸ್ಥೆಯ ಕಾರ್ಯದರ್ಶಿ ಬಿಸಿ ಗೀತಾ ರವರು ಮಾತನಾಡಿದರು. ಈ ಸಂದರ್ಭದಲ್ಲಿ ಪತ್ರಕರ್ತರಾದ ಪ್ರದೀಪ್ ರವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಿವಿಸ್ ಪಿ ನಾಯ್ಕ ತಂಡದವರಿಂದ ನೃತ್ಯ, ಮನೋರಂಜನ ಕಾರ್ಯಕ್ರಮ ನಡೆಯಿತು.